ಬಿಗ್‌ಬಾಸ್ ಮನೆಯ ಬಾಸ್‌ಗೆ ಕನ್ಫ್ಯೂಸ್‌ ಮಾಡಿದ ತುಳು ನಾಡಿನ ಬೆಡಗಿ ರಕ್ಷಿತಾ ಶೆಟ್ಟಿ

Published : Sep 28, 2025, 03:40 PM IST

Rakshitha Shetty Bigg Boss entry 'ತುಳುನಾಡಿನ ಕನ್ನಡತಿ' ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ವೇದಿಕೆಯಲ್ಲಿ ಸುದೀಪ್ ಅವರಿಗೆ ತುಳು ಭಾಷೆಯಲ್ಲಿ ಮೀನು ಸಾರು ರೆಸಿಪಿ ಹೇಳಿ ಗೊಂದಲ ಸೃಷ್ಟಿಸಿದ್ದು, ಉತ್ತರ ಕರ್ನಾಟಕದ ಮಲ್ಲಮ್ಮ ಜೊತೆಗಿನ ಅವರ ಸಂಭಾಷಣೆ ಕುತೂಹಲ ಮೂಡಿಸಿದೆ.

PREV
15
ತುಳುನಾಡಿನ ಕನ್ನಡತಿ

ತುಳುನಾಡಿನ ಕನ್ನಡತಿ ಅಂತಾನೇ ಗುರುತಿಸಿಕೊಂಡಿರುವ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕ್ಯೂಟ್ ಕ್ಯೂಟ್ ಮಾತುಗಳಿಂದಲೇ ಫೇಮಸ್ ಆಗಿದ್ದಾರೆ. ಇದೀಗ ಈ ಜನಪ್ರಿಯತೆ ಬಿಗ್‌ಬಾಸ್ ಮನೆಯವರೆಗೂ ಕರೆದುಕೊಂಡು ಬಂದಿದೆ.

25
ಟ್ರೋಲ್

ಮುಂಬೈನಲ್ಲಿ ಬೆಳೆದಿರುವ ಕಾರಣ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಮಾತನಾಡಲು ಸ್ವಲ್ಪ ಕಷ್ಟವಾಗುತ್ತದೆ. ಈ ಕಾರಣದಿಂದಲೇ ರಕ್ಷಿತಾ ಶೆಟ್ಟಿ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತಿದ್ದರು. ಜನರು ತಮ್ಮನ್ನು ಟ್ರೋಲ್ ಮಾಡಿದರೂ ರಕ್ಷಿತಾ ಶೆಟ್ಟಿ ಮಾತ್ರ ಕನ್ನಡ ಮಾತನಾಡೋದನ್ನು ನಿಲ್ಲಿಸಿಲ್ಲ.

35
ಮೀನು ಸಾರು ರೆಸಿಪಿ ಕೇಳಿ ಸುದೀಪ್ ಶಾಕ್

ಬಿಗ್‌ಬಾಸ್ ವೇದಿಕೆಗೆ ಬರುತ್ತಿದ್ದಂತೆ ಸುದೀಪ್ ಅವರಿಗೆ ಮೀನು ಸಾರು ಮಾಡೋದು ಹೇಗೆ ಅಂತ ಹೇಳಿದ್ದಾರೆ. ರಕ್ಷಿತಾ ಶೆಟ್ಟಿ ಹೇಳಿದ ರೆಸಿಪಿ ಕೇಳಿ ಸುದೀಪ್ ಅವರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಮೀನು ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿ ಹೆಸರುಗಳನ್ನು ತುಳು ಭಾಷೆಯಲ್ಲಿ ಹೇಳಿದ್ದರಿಂದ ನೋಡುಗರು ಸಹ ಕನ್‌ಫ್ಯೂಸ್ ಆಗಿದ್ದಾರೆ.

45
ರಕ್ಷಿತಾ ಶೆಟ್ಟಿ

ಸುದೀಪ್ ಅವರು ಮಧ್ಯೆ ಮಧ್ಯೆ ಪ್ರಶ್ನೆ ಕೇಳಿದ್ದರಿಂದ ರಕ್ಷಿತಾ ಶೆಟ್ಟಿ ಸಹ ಗೊಂದಲಕ್ಕೊಳಗಾಗಿರೋದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಕಾಣಬಹುದು. ರಕ್ಷಿತಾ ಬಿಗ್‌ಬಾಸ್ ಮನೆಯಲ್ಲಿ ಇದೇ ರೀತಿ ಮಾತನಾಡಿದ್ರೆ ದಿನಕ್ಕೆ ನೂರು ಬಾರಿ ಕನ್ನಡದ ಹಾಡು ಪ್ಲೇ ಆಗುತ್ತೆ ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:  ಬಿಗ್‌ಬಾಸ್‌ಗೆ ಬರುತ್ತಿರೋದ್ಯಾಕೆ? ಸ್ಪಷ್ಟನೆ ನೀಡಿದ ಮಂಜು ಭಾಷಿಣಿ

55
ಮಲ್ಲಮ್ಮ ವರ್ಸಸ್ ರಕ್ಷಿತಾ ಶೆಟ್ಟಿ

ಈಗಾಗಲೇ ಉತ್ತರ ಕರ್ನಾಟಕದ ಮಲ್ಲಮ್ಮ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದಾರೆ. ಭಾಷೆಯ ವಿಚಾರದಲ್ಲಿ ಮಲ್ಲಮ್ಮ ಮತ್ತು ರಕ್ಷಿತಾ ಶೆಟ್ಟಿ ತದ್ವಿರುದ್ಧವಾಗಿದ್ದಾರೆ. ಇಬ್ಬರನ್ನು ಜೊತೆಯಾಗಿ ಬಿಟ್ಟರೆ ಇವರ ನಡುವಿನ ಸಂಭಾಷಣೆ ಹೇಗಿರುತ್ತೆ ಎಂದು ಕಲ್ಪನೆ ಮಾಡಿಕೊಂಡು ವೀಕ್ಷಕರು ನಗೆಗಡಿಲಿನಲ್ಲಿ ತೇಲಾಡುತ್ತಿದ್ದಾರೆ.

ಇದನ್ನೂ ಓದಿ: ಮಲ್ಲಮ್ಮ ಎಂಟ್ರಿ ಆಗ್ತಿದ್ದಂತೆ ಬಿಗ್‌ಬಾಸ್‌ಗೆ ಸಂದೇಶ ಕೊಟ್ರು ಸುದೀಪ್; ಸ್ಟೇಜ್‌ ಮೇಲಾಗಿದ್ದು ಏನು?

Read more Photos on
click me!

Recommended Stories