ಅಪಾರ್ಟ್ಮೆಂಟ್ ಇದೆ ಕೋಟಿ ದುಡ್ಡಿದೆ ಅಂತ ಗುರುತಿಸಿಕೊಂಡಿಲ್ಲ; ವರ್ತೂರು ಸಂತೋಷ್ ಆದಾಯ ಎಷ್ಟು?

First Published | Nov 9, 2023, 11:18 AM IST

ಪ್ರತಿ ವೀಕೆಂಡ್ ಮೈ ತುಂಬಾ ಚಿನ್ನ ಹಾಕೊಂಡು ಕೂರುವ ಸಂತೋಷ್ ಆದಾಯ ಎಷ್ಟು? ನೆಟ್ಟಿಗರ ಪ್ರಶ್ನೆಗೆ ಇಲ್ಲಿದೆ ಉತ್ತರ...

ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವ ವರ್ತೂರು ಸಂತೋಷ್ ಆದಾಯ ಎಷ್ಟು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಸಂತೋಷ್ ಉತ್ತರ ಕೊಟ್ಟಿದ್ದರು.

'ಗೂಗಲ್‌ನಲ್ಲಿ ಜನರು ನನ್ನ ಆದಾಯದ ಬಗ್ಗೆ ಹುಡುಕಿದ್ದಾರೆ ಅದರಲ್ಲಿ ಏನೂ ತಪ್ಪಿಲ್ಲ ಕೇಳಲಿ. ಯಾವ ಕೆಲಸಕ್ಕೂ ಹೋಗಿ ದುದ್ದಿ ಮಾಡಿಲ್ಲ' 

Tap to resize

ನಮ್ಮ ಅಪಾರ್ಟ್ಮೆಂಟ್‌ಗಳಿಂದ ಬರುತ್ತಿರುವ ಹಣ ಬಳಸಿ ಮಾಡುತ್ತಿರುವ ಕೆಲಸಗಳು.' 'ಕೆಲವರು ಬೇರೆ ತರ ಚರ್ಚು ಮಾಡುತ್ತಾರೆ ನಾನು ಮೂಕ ಜೀವಿಗಳ ಮೇಲೆ ಖರ್ಚು ಮಾಡುತ್ತಿರುವೆ. 

'ದುಡ್ಡಿದೆ ಅದಿಕ್ಕೆ ಹೆಸರು ಮಾಡುತ್ತಿರುವುದು ಎನ್ನುತ್ತಾರೆ ನಿಜ ಹೇಳಬೇಕು ಅಂದ್ರೆ ದುಡ್ಡು ಕೊಟ್ಟು ಹೆಸರು ಮಾಡುವಷ್ಟು ಬರಗೆಟ್ಟಿಲ್ಲ ಜನರೂ ಹಾಗೆ ಮಾಡಲ್ಲ.'

' ದುಡ್ಡಿಯಿಂದ ಹೆಸರು ಪಡೆದಿಲ್ಲ ದುಡ್ಡಿಗೋಸ್ಕರ ಮಾಡುತ್ತಿರುವ ಕೆಲಸನೂ ಅಲ್ಲ. ಒಬ್ಬ ಮನುಷ್ಯನಿಗೆ ಬಿರಿಯಾನಿ ಕೊಡಿಸಿ ತಿಂದು ಉಪ್ಪಿಲ್ಲ ಕಾರ ಇಲ್ಲ ಅಂತಾನೆ ಮೂಕ ಜೀವ ತಿಂದು ಆರಾಮ್‌ ಆಗಿ ಕಾಲುಚಾಚಿ ಮಲಗಿದರೆ ನಮಗೆ ಪುಣ್ಯ ಬರುತ್ತದೆ.'

'ನನಗೆ ಇನ್ನೂ 26 ವರ್ಷ ಬಸವ ದೇವರಿಂದ ನಾಲ್ಕಾರು ಜನರ ನಡುವೆ ಗುರುತಿಸಿಕೊಂಡಿರುವೆ. ನಂದು ಅಪಾರ್ಟ್ಮೆಂಟ್ ಇದೆ ಮನೆಯಲ್ಲಿ ಕೋಟಿ ದುಡ್ಡು ಇದೆ ಅಂತ ಯಾರೂ ಗುರುತಿಸಿಲ್ಲ ನನಗಿಂತ ಕೋಟಿ ಇರುವ ಜನರಿದ್ದಾರೆ ಆದರೆ ಯಾರೂ ಬಸವಣ್ಣ ಕೆಲಸ ಮಾಡಿಲ್ಲ. ನಾನು ಮಾಡುತ್ತಿರುವೆ ಅದೇ ನನ್ನನ್ನು ಕಾಪಾಡುತ್ತಿದೆ. 

Latest Videos

click me!