ಲೆಹೆಂಗಾದಲ್ಲಿ ಮಿಂಚಿದ ದೀಪಿಕಾ ದಾಸ್​: ನಾಗಿಣಿ ಬ್ಯೂಟಿ ನೋಡಿ ಕ್ರೇಜಿ ಕ್ವೀನ್ ಎಂದ ಫ್ಯಾನ್ಸ್‌!

Published : Nov 09, 2023, 03:00 AM IST

ಬಿಗ್ ಬಾಸ್ ಸ್ಫರ್ಧಿ, ನಟಿ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು, ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಲೇಟೆಸ್ಟ್ ಫೋಟೋ ಹಂಚಿಕೊಂಡ ದೀಪಿಕಾ ದಾಸ್ ಪೋಸ್ಟ್‌ಗೆ ಲೈಕ್​ ಹಾಗೂ ಕಾಮೆಂಟ್‌ಗಳ ಸುರಿಮಳೆ ಆಗಿದೆ.

PREV
17
ಲೆಹೆಂಗಾದಲ್ಲಿ ಮಿಂಚಿದ ದೀಪಿಕಾ ದಾಸ್​: ನಾಗಿಣಿ ಬ್ಯೂಟಿ ನೋಡಿ ಕ್ರೇಜಿ ಕ್ವೀನ್ ಎಂದ ಫ್ಯಾನ್ಸ್‌!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಫೇಮಸ್ ಆಗಿದ್ದಾರೆ. ಇದೀಗ ದೀಪಿಕಾ ಲೇಟೆಸ್ಟ್​ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.

27

ಆಗಾಗ ವಿದೇಶಿ ಪ್ರವಾಸಗಳ ಫೋಟೋಗಳನ್ನು ಹಂಚಿಕೊಳ್ಳುವ ದೀಪಿಕಾ ದಾಸ್​​, ಇದೀಗ ಪರ್ಪಲ್​ ಲೆಹಂಗಾ ತೊಟ್ಟು ಟ್ರೆಡಿಷನಲ್ ಲುಕ್​ನಲ್ಲಿ ಕ್ಯಾಮೆರಾಗೆ ಸ್ಟೈಲಿಶ್​ ಆಗಿ ಪೋಸ್ ಕೊಟ್ಟಿದ್ದಾರೆ.

37

ದೀಪಿಕಾ ದಾಸ್ ಫೋಟೋಸ್ ನೋಡಿದ ನೆಟ್ಟಿಗರು, ನಮ್ಮ ಸ್ಯಾಂಡಲ್‌ವುಡ್‌ ಕ್ವೀನ್, ಕ್ರೇಜಿ ಕ್ವೀನ್, ಹಾಟ್, ಸೆಕ್ಸಿ ಹಾಗೂ ನೀವು ಯಾವ ಬಾಲಿವುಡ್ ಹೀರೋಯಿನ್‌ಗೂ ಕಮ್ಮಿಯಿಲ್ಲ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

47

ನಟಿ ದೀಪಿಕಾ ದಾಸ್‍ಗೆ ಪ್ರವಾಸ ಹೋಗುವುದು ಎಂದ್ರೆ ಇಷ್ಟವಂತೆ. ಆಗಾಗ ಪ್ರವಾಸಗಳಿಗೆ ಹೋಗ್ತಾ ಇರ್ತಾರೆ. ಅದರಲ್ಲೂ ಸೋಲೋ ಟ್ರಿಪ್ ಹೋಗುವುದನ್ನು ಎಂಜಾಯ್ ಮಾಡ್ತಾ ಇರ್ತಾರೆ.

57

ದೀಪಿಕಾ ದಾಸ್ ಅವರು ಪಾಯಲ್ ಎಂಬ ಹೊಸ ಸಿನಿಮಾ ಮಾಡ್ತಾ ಇದ್ದಾರೆ. ಶೂಟಿಂಗ್‌ನಲ್ಲಿ ಬ್ಯುಸಿ ಇರುವ ದೀಪಿಕಾ ದಾಸ್ ಸಮಯ ಮಾಡಿಕೊಂಡು ಆಗಾಗ ಪ್ರವಾಸಕ್ಕೆ ಹೋಗ್ತಾರೆ.

67

ನಟಿ ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 07 ಮತ್ತು 09ರಲ್ಲಿ ಮಿಂಚಿದ್ರು. 2 ಸೀಸಸ್‍ನಲ್ಲೂ ಟಾಪ್ 5ರ ತನಕ ಬಂದಿದ್ರು. ತಮ್ಮ ಆಟ, ನೋಟಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

77

ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಲವು ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚಿಕೊಳ್ತಾರೆ. ದೀಪಿಕಾ ದಾಸ್ 1.4 ಮಿಲಿಯನ್ ಫಾಲೋವರ್ಸ್‍ಗಳನ್ನು ಹೊಂದಿದ್ದಾರೆ. ಇಲ್ಲಿಯವರೆಗೆ 2,306 ಪೋಸ್ಟ್ ಗಳನ್ನು ಶೇರ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories