ಕಿರುತೆರೆ ನಟಿ ಪ್ರಿಯಾ ಆಚಾರ್ ಮತ್ತು ನಟ ಸಿದ್ದು ಮೂಲಿಮನಿ ಅದ್ಧೂರಿ ನಿಶ್ಚಿತಾರ್ಥ!

Published : Nov 21, 2022, 02:06 PM IST

ಅದ್ಧೂರಿಯ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆ ಜೋಡಿ...ಪ್ರಿಯಾ - ಸಿದ್ದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್...

PREV
16
ಕಿರುತೆರೆ ನಟಿ ಪ್ರಿಯಾ ಆಚಾರ್ ಮತ್ತು ನಟ ಸಿದ್ದು ಮೂಲಿಮನಿ ಅದ್ಧೂರಿ ನಿಶ್ಚಿತಾರ್ಥ!

ಕನ್ನಡ ಕಿರುತೆರೆ ಮತ್ತೊಂದು ಸೆಲೆಬ್ರಿಟಿ ಜೋಡಿ ಎಂಗೇಜ್ ಆಗಿದ್ದಾರೆ. ನಟಿ ಪ್ರಿಯಾ ಆಚಾರ್ ಮತ್ತು ಸಿದ್ದುಮೂಲಿಮನಿ ಎಂಗೇಜ್ ಅಗಿದ್ದಾರೆ. 

26

ನವೆಂಬರ್ 20ರಂದು ದಾವಣೆಗೆರೆಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಿರುತೆರೆ ಸೆಲೆಬ್ರಿಟಿಗಳ ನಿಶ್ಚಿತಾರ್ಥದಲ್ಲಿ ಭಾಗಿಯಾಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ. 

36

ಗಟ್ಟಿಮೇಳ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಪ್ರಿಯಾ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಪಾರು ಧಾರಾವಾಹಿಯಲ್ಲಿ ನಟಿಸಿರುವ ಸಿದ್ದು ಡ್ಯಾನ್ಸರ್‌ ಕೂಡ ಹೌದು.

46

ಹಸಿರು- ಕೆಂಪು ಬಣ್ಣದ ಸೀರೆಯಲ್ಲಿ ಪ್ರಿಯಾ ಕಾಣಿಸಿಕೊಂಡರೆ ಫ್ಲೋರಲ್‌ ಸೂಟ್‌ನಲ್ಲಿ ಸಿದ್ದು ಮಿಂಚಿದ್ದಾರೆ. ಕೆಂಪು ಮತ್ತು ಶ್ವೇತ ಬಣ್ಣದ ಗುಲಾಬಿಗಳಿಂದ ವೇದಿಕೆ ಅಲಂಕಾರ ಮಾಡಲಾಗಿತ್ತು.

56

ನಿಶ್ಚಿತಾರ್ಥಕ್ಕೆ ಎರಡು ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಲುಕ್‌ಗೆ ಇಬ್ಬರೂ ಶ್ವೇತಾ ಬಣ್ಣ ಉಡುಪು ಧರಿಸಿದ್ದಾರೆ. ಪ್ರಿಯಾ ಗೊಂಬೆ ಇದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

66

ಇತ್ತೀಚಿಗೆ ಪ್ರಿಯಾ ಯೂಟ್ಯೂಬ್ ಲೋಕಕ್ಕೂ ಕಾಲಿಟ್ಟಿದ್ದಾರೆ. ದಿನಚರಿ, ಹಬ್ಬ, ಫ್ಯಾಷನ್ ಅಡುಗೆ ಹೀಗೆ ವಿಭಿನ್ನ ವಿಚಾರಗಳ ಬಗ್ಗೆ ವೀಕ್ಷಕರ ಜೊತೆ ಹಂಚಿಕೊಳ್ಳುತ್ತಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories