ಡ್ರೋನ್ ಪ್ರತಾಪ್ ಬಗ್ಗೆ ಕೀಳು ಮಟ್ಟದ ಕಾಮೆಂಟ್ ಮಾಡಿದ ರ್ಯಾಪರ್ ಇಶಾನಿ ವಿರುದ್ಧ ನೆಟ್ಟಿಗರು ಹರಿ ಹಾಯ್ದಿದ್ದಾರೆ. ಟ್ರೋಲ್ ಪೇಜ್‌ಗಳು ಇಶಾನಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿವೆ.
ಬಿಗ್ ಬಾಸ್ ಕನ್ನಡ ಸೀಸನ್ 10 ರೋಚಕ ತಿರುವುಗಳೊಂದಿಗೆ ಸದ್ದು ಮಾಡುತ್ತಲೇ ಇದೆ. ಸಧ್ಯ ಮನೆಯಲ್ಲಿ ಎಂಟು ಸ್ಪರ್ಧಿಗಳಷ್ಟೇ ಉಳಿದುಕೊಂಡಿದ್ದಾರೆ.
210
Drone Pratap
ಬಿಗ್ ಬಾಸ್‌ಗೆ ಆಯ್ಕೆಯಾದಾಗ ಜನರಿಂದ ಬೈಸಿಕೊಂಡು ಒಳಹೋಗಿದ್ದ ಡ್ರೋನ್ ಪ್ರತಾಪ್ ಈಗ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಪ್ರತಾಪ್ ಪರವಾಗಿ ಜನತೆ ಮಾತನಾಡುತ್ತಿದ್ದಾರೆ.
310
ಕಳೆದ ವಾರವಷ್ಟೇ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಎಲ್ಲರಿಗಿಂತ ಹೆಚ್ಚು ಅಂಕವನ್ನು ಡ್ರೋನ್ ಪ್ರತಾಪ್ ಪಡೆದಿದ್ದರು. ಆದರೆ, ಅವರಿಗಿಂತ ಬಹಳ ಕಡಿಮೆ ಅಂಕ ಪಡೆದ ಸಂಗೀತಾರನ್ನು ಫಿನಾಲೆಗೆ ಆಯ್ಕೆ ಮಾಡುವ ಮೂಲಕ ಬಿಗ್ ಬಾಸ್ ಮೇಲೆ ಜನರು ಮುನಿಸು ತೋರಿದ್ದರು.
410
ಜಸ್ಟೀಸ್ ಫಾರ್ ಪ್ರತಾಪ್ ಎಂದು ಅಭಿಯಾನ ಶುರು ಮಾಡಿದ್ದರು. ಈ ವಾರ ಹಳೆಯ ಸ್ಪರ್ಧಿ ಇಶಾನಿಯಿಂದಾಗಿ ಮತ್ತೆ ಪ್ರತಾಪ್ ಪರ ಜನರು ಬ್ಯಾಟಿಂಗ್ ಮಾಡುತ್ತಿದ್ದಾರೆ.
510
ಹೌದು, ಇತ್ತೀಚೆಗೆ ಟ್ವಿಸ್ಟೊಂದರಲ್ಲಿ ಹಳೆಯ ಸ್ಪರ್ಧಿಗಳು ಮತ್ತೆ ದೊಡ್ಮನೆ ಒಳಗೆ ಬಂದಿದ್ದು, ಅವರಲ್ಲಿ ರ್ಯಾಪರ್ ಇಶಾನಿ ಕೂಡಾ ಇದ್ದರು.
610
ಇಶಾನಿ, ವಿನಯ್ ಗೌಡ, ಸಂಗೀತಾ ಅವರು ಸ್ನ್ಯಾಕ್ಸ್ ತಿನ್ನುತ್ತಾ ಮಾತನಾಡುತ್ತಾ ಕುಳಿತಿದ್ದಾಗ, ಇಶಾನಿ ಎಲ್ಲರ ಮುಂದೆ ಪ್ರತಾಪ್ ವಿರುದ್ಧ ಕೀಳಾಗಿ ಕಾಮೆಂಟ್ ಮಾಡಿದರು.
710
ಕಾಗೆ ಗೊತ್ತಿಲ್ವಾ? ಕಾಗೆ ಕಕ್ಕ ಮಾಡ್ಬಿಟ್ಟು ಎಲ್ಲಾ ಕಡೆ ಹೋಗ್ತಾನೆ ಇದೆ. ಸಿಂಪಥಿ ಕಾರ್ಡ್ ಯೂಸ್ ಮಾಡಿ ಅದರಿಂದ ಉಳ್ಕೊಂಡಿದ್ದಾರೆ ಅಲ್ವಾ ಎಂದು ಇಶಾನಿ ಹೇಳಿದ್ದಾರೆ.
810
ಇಶಾನಿಯ ಈ ಹೇಳಿಕೆ ಇಶಾನಿಗೇ ತಿರುಗುಬಾಣವಾಗಿದೆ. ಪ್ರತಾಪ್‌ನನ್ನು ಕಾಗೆ ಎಂದ ಇಶಾನಿಗೇ ಈಗ ಟ್ರೋಲ್ ಪೇಜ್‌ಗಳು ಕಾಗೆ ಎನ್ನುತ್ತಿವೆ. ಜೊತೆಗೆ, ಪ್ರತಾಪ್ ಗೆಲ್ಲಬೇಕು ಎಂದು ಡ್ರೋನ್ ಪರ ವಹಿಸುತ್ತಿವೆ.
910
ಸಾಕಷ್ಟು ಬಿಗ್ ಬಾಸ್ ಫಾಲೋ ಮಾಡುವ ನೆಟ್ಟಿಗರು, ಇಶಾನಿಯ ಈ ಮಾತಿಗೆ ಕೆರಳಿ, ಆಕೆಯನ್ನು ಅನ್‌ಫಾಲೋ ಮಾಡಲು ಕರೆ ನೀಡುತ್ತಿದ್ದಾರೆ. ಜೊತೆಗೆ, ಅವರು ಮಾಡುವ ಆಲ್ಬಂ ತಿರಸ್ಕರಿಸುವಂತೆ ಕಾಮೆಂಟ್ ಹಾಕುತ್ತಿದ್ದಾರೆ.