ಸೋಷಿಯಲ್ ಮೀಡಿಯಾದಲ್ಲಿ ಕ್ರೇಜಿ ವಿಡಿಯೋಗಳನ್ನು ಕ್ರಿಯೇಟ್ ಮಾಡಿ ಬ್ರೋ ಗೌಡ (Bro Gowda) ಎಂದು ಹೆಸರು ಮಾಡಿರುವ ಶಮಂತ್ ಗೌಡ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಬಿಗ್ ಬಾಸ್ ಸೀಸನ್ 7ರಲ್ಲಿ ಶಮಂತ್ ಗೌಡ ಸ್ಪರ್ಧಿಸಿದ್ದರು. ಅಲ್ಲಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು.
ಬಿಗ್ ಬಾಸ್ (Bigg boss season 7) ನಂತರ ಒಂದೆರಡು ಮ್ಯೂಸಿಕ್ ವಿಡಿಯೋ ಮಾಡಿದ ಶಮಂತ್ ನೇರವಾಗಿ ಸೀರಿಯಲ್ ಲೋಕಕ್ಕೆ ಕಾಲಿಟ್ಟರು.
ಮತ್ತೊಮ್ಮೆ ಕಲರ್ಸ್ ಜೊತೆ ಸೇರಿಕೊಂಡು ಭಾಗ್ಯ ಲಕ್ಷ್ಮಿ (Bhagya Lakshmi) ಸೀರಿಯಲ್‌ನಲ್ಲಿ ವೈಷ್ಣವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಗಣೇಶ ಹಬ್ಬದ ದಿನ ಶಮಂತ್ ನಡು ರಸ್ತೆಯಲ್ಲಿ ತಮಟೆ ಸೌಂಡ್ ಕೇಳಿಸಿಕೊಂಡು ಸಖತ್ ಎಂಜಾಯ್ ಮಾಡಿಕೊಂಡು ಡ್ಯಾನ್ಸ್ ಮಾಡಿದ್ದಾರೆ.
ತಮಟೆ ಹೊಡೆಯುವರಿಗೆ ಶಾಲು ಹಾಕಿ ಸ್ನೇಹಿತರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಕ್ಕ ಪಕ್ಕದ ಮನೆಯವರು ನಿಂತು ಶಮಂತ್ ಡ್ಯಾನ್ಸ್ ನೋಡಿದ್ದಾರೆ.