ಮೂರು ಸೀರಿಯಲ್‌ ಮುಕ್ತಾಯ, ಬಿಗ್‌ಬಾಸ್‌ ಎಷ್ಟು ಗಂಟೆಗೆ ಪ್ರಸಾರವೆಂದು ಕೊನೆಗೂ ಬಹಿರಂಗ

First Published | Sep 28, 2023, 12:42 PM IST

ಕನ್ನಡದ ಕಿರುತೆರೆಯ ವೀಕ್ಷಕರು ಕಾತರದಿಂದ ಕಾಯುತ್ತಿದ್ದ  ಬಿಗ್‌ ಬಾಸ್‌ ಕನ್ನಡದ 10ನೇ ಆವೃತ್ತಿಯ  ಅಕ್ಟೋಬರ್‌ 8ರಿಂದ ಆರಂಭವಾಗಲಿದೆ ಈಗಾಗಲೇ ಅನೌನ್ಸ್ ಆಗಿತ್ತು. ಇದೀಗ ಯಾವ ಟೈಂ ಸ್ಲಾಟ್‌ ನಲ್ಲಿ ಶೋ ಪ್ರಸಾರವಾಗಲಿದೆ ಎಂದು ಕೂಡ ಕಲರ್ಸ್ ಕನ್ನಡ ಪ್ರೋಮೋ ಬಿಡುಗಡೆ ಮಾಡಿ ತಿಳಿಸಿದೆ. ಈ ನಡುವೆ ಅಕ್ಟೋಬರ್‌ 8ರಿಂದ ಭಾರತ-ಆಸ್ಟ್ರೇಲಿಯಾ ಪಂದ್ಯ ಕೂಡ ಇರಲಿದ್ದು, ಮ್ಯಾನೇಜ್‌ಮೆಂಟ್‌ ಯೋಚನೆ ಮಾಡಬೇಕಿತ್ತು ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.

ಕಲರ್ಸ್‌ ಕನ್ನಡ ತನ್ನ ಸೋಶಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಬಿಗ್‌ ಅಪ್‌ಡೇಟ್‌ ನೀಡಿದ್ದು, ಇಂದಿನಿಂದ ಸರಿಯಾಗಿ 10 ದಿನಕ್ಕೆ 10 ನೇ ಆವೃತ್ತಿ ಆರಂಭವಾಗಲಿದೆ.   ಅಕ್ಟೋಬರ್ 8ರಂದು ಸಂಜೆ 6 ಗಂಟೆಗೆ ಗ್ರಾಂಡ್‌ ಪ್ರೀಮಿಯರ್‌ ನಡೆಯಲಿದೆ.  ಜೊತೆಗೆ ಪ್ರತೀ ದಿನ ರಾತ್ರಿ 9.30 ರಿಂದ ಸಂಚಿಕೆ ಪ್ರಸಾರ ಆಗಲಿದೆ.

ಈಗಾಗಲೇ ಚಾರ್ಲಿ ಬಿಗ್‌ ಬಾಸ್‌ ಮನೆಯೊಳಗೆ ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡಲಿದೆ ಎಂದು ಅನುಬಂಧ ಅವಾರ್ಡ್ ಫಂಕ್ಷನ್‌ನಲ್ಲಿ ಘೋಷಣೆ ಮಾಡಲಾಗಿದೆ. ಇದು ತುಂಬಾ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ದೇಶದ ಕಿರುತೆರೆ ಇತಿಹಾಸದಲ್ಲಿ ಬಿಗ್‌ಬಾಸ್ ಗೆ ಯಾವ ಪ್ರಾಣಿಯೂ ಸ್ಪರ್ಧಿಯಾಗಿ ಬಂದಿದ್ದಿಲ್ಲ.

Tap to resize

ಇನ್ನು 15 ಹೊಸ ಬಿಗ್‌ ಬಾಸ್‌ ಸ್ಪರ್ಧಿಗಳು ಯಾರೆಲ್ಲಾ ಎನ್ನುವ ಕುತೂಹಲವೂ ಇದೆ. ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ನಟಿಸಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ನಟಿ ಮೇಘಾ ಶೆಟ್ಟಿ, ಈಗತಾನೆ ಮನೆಯ ಗೃಹಪ್ರವೇಶ ಮುಗಿಸಿಕೊಂಡಿರುವ ನಾಗಿಣಿ 2 ಧಾರವಾಹಿ ಖ್ಯಾತಿಯ ನಮ್ರತಾ ಗೌಡ, ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌, ಲಕ್ಷಣ ಧಾರವಾಹಿಯಲ್ಲಿ ನಟಿಸುತ್ತಿರುವ ಸುಕೃತಾ ನಾಗ್‌ ಬರಲಿದ್ದಾರೆ ಎಂದು ಗಾಸಿಪ್ ಹಬ್ಬಿದೆ.

ಹೊಸ ಥೀಮ್‌ನಲ್ಲಿ ‘ಬಿಗ್ ಬಾಸ್’ ಕಾರ್ಯಕ್ರಮ ನಡೆಯಲಿದೆ. ‘ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮಕ್ಕಾಗಿ ಹೊಸ ತಾಂತ್ರಿಕ ತಂಡ ಕೆಲಸ ಮಾಡುತ್ತಿದ್ದು, ಹೊಸ ನಿರ್ದೇಶಕರು ಈ ವರ್ಷ ‘ಬಿಗ್ ಬಾಸ್’ ಆಟವನ್ನ ಆಡಿಸಲಿದ್ದಾರೆ ಎನ್ನಲಾಗಿದೆ.

ಇನ್ನು ಬಿಗ್‌ ಬಾಸ್‌ ಕಾರ್ಯಕ್ರಮದ ಸಲುವಾಗಿಯೇ ಬ್ರೇಕಪ್‌ ಮಾಡಿಕೊಂಡು ಸುದ್ದಿಯಾಗಿರುವ ಸೋಶಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳಾದ ವರುಣ್‌ ಆರಾಧ್ಯ ಹಾಗೂ ವರ್ಷಾ ಕಾವೇರಿ ಕೂಡ ಕಾರ್ಯಕ್ರಮದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ.

ಇನ್ನು ಅಚ್ಚರಿಯೆಂದರೆ  ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಹ ಈ ಬಾರಿ ಬಿಗ್‌ ಬಾಸ್‌ನಲ್ಲಿ ಇರಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. 10ನೇ ಸೀಸನ್‌ ಬಿಗ್‌ ಬಾಸ್‌ಗೆ ಖ್ಯಾತ ಕ್ರಿಕೆಟಿಗ ಕನ್ನಡಿಗ ವಿನಯ್‌ ಕುಮಾರ್ ಅವರು ಭಾಗಿಯಾಗಬಹುದು ಎಂದು ಸುದ್ದಿ ಹಬ್ಬಿದೆ.

 ಸುದೀಪ್ ಆ್ಯಂಕರಿಂಗ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಬಿಗ್ ಬಾಸ್ ಇನ್ನೇನು ಆರಂಭವಾಗುತ್ತೆ ಎನ್ನುವಾಗಲೇ ಸೀರಿಯಲ್ ಗಳು ಮುಗಿಯುತ್ತೆ ಎನ್ನುವ ಸುದ್ದಿ ಸದ್ದು ಕೇಳಿ ಬಂದಿದೆ. 9.30 ಕ್ಕೆ ತ್ರಿಪುರ ಸುಂದರಿ, 10 ಗಂಟೆಗೆ ಪುಣ್ಯವತಿ ಮತ್ತು 10.30ಕ್ಕೆ ಲಕ್ಷಣ ಸೀರಿಯಲ್ ಪ್ರಸಾರವಾಗುತ್ತಿದ್ದು, ಈ  ಮೂರು ಸೀರಿಯಲ್‌ ಗಳು ಮುಗಿಯುತ್ತದೆ ಎಂದು ತಿಳಿದು ಬಂದಿದೆ.

ಇದರ ಜೊತೆಗೆ ಬೃಂದಾವನ ಎಂಬ ಹೊಸ ಧಾರವಾಹಿಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಮೂವತ್ತಾರು ಜನ ತುಂಬುಕುಟುಂಬದ ಕಥೆ ಇದಾಗಿದೆ. ಯಾವ ಸಮಯದಲ್ಲಿ ಈ ಧಾರವಾಹಿ ಪ್ರಸಾರವಾಗಲಿದೆ ಎಂದು ತಿಳಿಸಿಲ್ಲ.  ಇದರ ನಡುವೆ ಅಕ್ಟೋಬರ್ 2ರಿಂದ ಶಿವ ಶಕ್ತಿ ಎಂಬ ಪೌರಾಣಿಕ ಕಥೆಯುಳ್ಳ ಡಬ್ಬಿಂಗ್ ಧಾರವಾಹಿಯನ್ನು ಕೂಡ ಪ್ರಸಾರ ಮಾಡುತ್ತಿದೆ.
 

Latest Videos

click me!