ಸರಕಾರಿ ಆಸ್ಪತ್ರೇಲಿ ಇಂಗ್ಲಿಷ್‌ನಲ್ಲಿ ಮಾತನಾಡೋ ಡಾಕ್ಟರ್‌ಗೆ ಆವಾಜ್ ಹಾಕಿದ ನಟಿ ಇವರು!

Published : Sep 28, 2023, 03:15 PM IST

ಕಿರುತೆರೆ ನಟಿ ಅಶ್ವಿನಿ ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಅಶ್ವಿನಿ ಗೌಡ ಕನ್ನಡದ ಪರ ಧ್ವನಿ ಎತ್ತಿ ಹೋರಾಟ ಪ್ರತಿಭಟನೆ ನಡೆಸುತ್ತಿದ್ದಾರೆ.  ಫೋಟೋಸ್: ರವಿ, ಕನ್ನಡ ಪ್ರಭ  

PREV
17
ಸರಕಾರಿ ಆಸ್ಪತ್ರೇಲಿ ಇಂಗ್ಲಿಷ್‌ನಲ್ಲಿ ಮಾತನಾಡೋ ಡಾಕ್ಟರ್‌ಗೆ ಆವಾಜ್ ಹಾಕಿದ ನಟಿ ಇವರು!

ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ ನಟಿ ಅಶ್ವಿನಿ ಗೌಡ (Ashwini Gowda), ತಮ್ಮ ನಟನೆಗಿಂತ ಹೆಚ್ಚಾಗಿ ಕನ್ನಡಕ್ಕಾಗಿ ಹೋರಾಟ ನಡೆಸುವ ಮೂಲಕವೇ ಸುದ್ದಿಯಲ್ಲಿದ್ದರು. ಇದೀಗ ಮತ್ತೆ ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. 
 

27

ಅಶ್ವಿನಿ ಗೌಡ ತಮ್ಮ ಕಾಂಟ್ರವರ್ಸಿಗಳಿಂದ ಮತ್ತು ಹೋರಾಟಗಳಿಂದ ಮತ್ತು ಪರ್ಸನಲ್ ವಿಷಯಗಳಿಂದಲೇ ಸದಾ ಸುದ್ದಿಯಲ್ಲಿರುತ್ತಿದ್ದ ನಟಿ. ಇದೀಗ ರಾಜ್ಯಾದ್ಯಂತ ಬಿಸಿ ತಟ್ಟಿದ ಕಾವೇರಿ ವಿವಾದದ ಪರ ಕನ್ನಡ ರಕ್ಷಣಾ ವೇದಿಕೆಯಡಿ (Karnataka Rakshana Vedike) ನಟಿ ಪ್ರತಿಭಟನೆಗಿಳಿದಿದ್ದಾರೆ. 
 

37

ಕಾವೇರಿ ನದಿ ನೀರಿನ ವಿಚಾರವಾಗಿ ಕೇಂದ್ರದಲ್ಲಿ ಸಂಘಟಿತ ಹೋರಾಟ ನಡೆಸದ ಎಲ್ಲಾ ಪಕ್ಷಗಳ ಸಂಸದರ ರಾಜಿನಾಮೆಗೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆಯಲ್ಲಿ ಅಶ್ವಿನಿ ಗೌಡ ಭಾಗವಹಿಸಿದ್ದರು. 
 

47

ಈ ಹಿಂದೆ ಅಶ್ವಿನಿ ಕನ್ನಡ ಮಾತನಾಡದ ಮಿಂಟೋ ಆಸ್ಪತ್ರೆಯ ವೈದ್ಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೈದ್ಯರ ಭಾರಿ ಪ್ರತಿಭಟನೆ ನಡೆದಿದ್ದು, ಆ ಸಂದರ್ಭದಲ್ಲಿ ಅಶ್ವಿನಿ ಸೇರಿ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಈ ನಟಿ ಭಾರಿ ಸುದ್ದಿಯಲ್ಲಿದ್ದರು. 
 

57

ಹಲವು ವರ್ಷಗಳಿಂದ ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ (Kannada cinema and smallscreen) ಮಿಂಚುತ್ತಿರುವ ನಟಿ ಸದ್ಯ ಕಾಂಟ್ರವರ್ಸಿಗಳಿಂದಾಗಿಯೇ ಸುದ್ದಿಯಲ್ಲಿದ್ದಾರೆ. ಇವರು ಸುಮಾರು 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ 15 ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ. 
 

67

ಮೂರನೇ ಕ್ಲಾಸ್ ಮಂಜ ಬಿಎಸ್ಸಿ ಭಾಗ್ಯ ಚಿತ್ರದಲ್ಲಿ ಬೋಲ್ಡ್ ಸೀನ್‌ನಲ್ಲಿ (Bold scene) ನಟಿಸುವ ಮೂಲಕ ಸುದ್ದಿಯಾಗಿದ್ದ ನಟಿ ಇವರು. ಆದರೆ ನಟಿಯಾಗಿದ್ರೆ ಕಾಂಟ್ರವರ್ಸಿ ಇದ್ದೇ ಇರುತ್ತೆ, ನನ್ನ ನಟನೆಗೆ ಮನೆಯಲ್ಲಿ ಬೆಂಬಲ ಇದೆ ಎನ್ನುವ ಮೂಲಕ ವಿವಾದಕ್ಕೆ ಅಂತ್ಯ ಹಾಡಿದ್ದರು. 
 

77

17ನೇ ವರ್ಷಕ್ಕೆ ಮದ್ವೆಯಾಗಿ, ಮಗು ಆಗಿ ನಂತರ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡ ನಟಿ ಇವರು. ಸದ್ಯ ಡಿವೋರ್ಸ್ ಆಗಿ ಗಂಡನಿಂದ ಬೇರೆ ಆಗಿದ್ದರೂ ಸಹ, ಗಂಡನ ಕುಟುಂಬದ ಜೊತೆ ಅತ್ಯುತ್ತಮ ಸಂಬಂಧ ಹೊಂದಿದ್ದಾರೆ ನಟಿ. 
 

Read more Photos on
click me!

Recommended Stories