ಮದುವೆಯಾಗಿ 3 ತಿಂಗಳಿಗೆ ದೌರ್ಜನ್ಯ,ಹೆಣ್ಣು ಮಗು ಇದ್ದರೂ ಹೊಡೆದ ಪತಿ: ಚೈತ್ರಾ ಹಳ್ಳಿಕೇರಿ ಕಣ್ಣೀರು

Published : Nov 24, 2023, 05:24 PM IST

 ದಾಂಪತ್ಯ ಜೀವನದ ಮತ್ತು ಪತಿಯಿಂದ ಆಗ ತೊಂದರೆ ಬಗ್ಗೆ ಬಿಗ್ ಬಾಸ್‌ನಲ್ಲಿ ಮಾತನಾಡಿದ್ದ ಚೈತ್ರಾ ಹಳ್ಳಿಕೇರಿ...

PREV
19
ಮದುವೆಯಾಗಿ 3 ತಿಂಗಳಿಗೆ ದೌರ್ಜನ್ಯ,ಹೆಣ್ಣು ಮಗು ಇದ್ದರೂ ಹೊಡೆದ ಪತಿ: ಚೈತ್ರಾ ಹಳ್ಳಿಕೇರಿ ಕಣ್ಣೀರು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತಪಟದಲ್ಲಿ ಅಂಜಲಿ ಪಾತ್ರದಲ್ಲಿ ಮಿಂಚುತ್ತಿರುವ ಚೈತ್ರಾ ಹಳ್ಳಿಕೇರಿ ಬಿಗ್ ಬಾಸ್ ಮನೆಯಲ್ಲಿದ್ದಾಗ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದರು.

29

'ತುಂಬಾ ಚಿಕ್ಕ ವಯಸ್ಸಿನಿಂದ ಕೆಲಸ ಮಾಡುವುದಕ್ಕೆ ಶುರು ಮಾಡಿದೆ. ಆ ಸಮಯದಲ್ಲಿ ನಾನು ಪ್ರೀತಿ ಮಾಡಲು ಶುರು ಮಾಡಿದೆ. ಒಬ್ರುನ ಇಷ್ಟ ಪಟ್ಟರೆ ಅವರ ಜೊತೆ ಇರಬೇಕು ಅನ್ನೋದು ಅಷ್ಟೆ ತಲೆಯಲ್ಲಿ ಇರುತ್ತದೆ.

39

ಮದುವೆ ಮಾಡಿಕೊಂಡರೆ ನನ್ನ ಮಗಳಲ್ಲ ಅಂತ ಅಮ್ಮ ಹೇಳುತ್ತಾರೆ. ರಿಲೇಷನ್‌ಶಿಪ್‌ನಲ್ಲಿದ್ದಾಗಲೇ ನೀನು ಸಿನಿಮಾ ಮಾಡಬಾರದು ಆಕ್ಟಿಂಗ್ ಮಾಡಬಾರದು ಅನ್ನೋ ಕಂಡಿಷನ್ ಬರುತ್ತೆ. 

49

ಅದಕ್ಕೆ ಒಪ್ಪಿಕೊಂಡು ಕೆರಿಯರ್ ಬಿಟ್ಟು ಮದುವೆ ಮಾಡಿಕೊಂಡೆ. ತುಂಬಾ ಜೋರಾಗಿ ಮದುವೆ ಮಾಡಿಕೊಂಡೆ. ಮೂರನೇ ದಿನಕ್ಕೆ ಒಂದು ಡೈಲಾಗ್ ಬಂತು ನಾನೇನು ನಿನ್ನ ಪ್ರೀತಿ ಮಾಡಿ ಮದುವೆ ಮಾಡ್ಕೊಂಡಿಲ್ಲ ನೀನು ಎಷ್ಟು ಪ್ರೀತಿ ಮಾಡ್ತೀಯಾ ಅಂತ ನೋಡೋಕೆ ಮದುವೆ ಮಾಡಿಕೊಂಡೆ ಅಂದ್ರು. 

59

 ಅವತ್ತು ಜೀವನದ ಬಗ್ಗೆ ಯೋಚನೆ ಮಾಡಲು ಶುರು ಮಾಡಿದೆ. ಮದ್ವೆಯಾದ ಮೂರು ತಿಂಗಳಿಗೆ ದೌರ್ಜನ್ಯ ಶುರುವಾಯ್ತು. ಸಣ್ಣ ಇದ್ದ ಕಾರಣ ಸುಲಭವಾಗಿ ಹೊಡೆದು ಬಿಸಾಡುವರು. 

69

ಎರಡು ವರ್ಷಗಳ ಕಾಲ ಮನೆಯಲ್ಲಿ ಯಾರಿಗೂ ಈ ವಿಚಾರ ಹೇಳಿರಲಿಲ್ಲ. ಮನೆಯಲ್ಲಿ ಹೊಡೆಯೋದು ಬಡಿಯೋದು ಹೊರಗೆ ಹೋದಾಗ ಕೈ ಹಿಡಿದು ಮುದ್ದಾಡುವುದು ಒಳ್ಳೆ ವ್ಯಕ್ತಿ ರೀತಿ ತೋರಿಸಿಕೊಳ್ಳುವುದು. 

79

ಒಂದು ದಿನ ಜಗಳ ಆಗಿ ರಾತ್ರಿ 1 ಗಂಟೆಗೆ ಮನೆ ಬಿಟ್ಟು 5 ಗಂಟೆಗೆ ನನ್ನ ತಾಯಿ ಮನೆಗೆ ಬಿಟ್ಟರು. ಒಂದು ತಿಂಗಳ ನಂತರ ಬಂದು ಸರಿಯಾಗಿ ವರ್ಕೌಟ್ ಮಾಡೋಣ ಸರಿ ಹೋಗುತ್ತೆ ಅಂದ್ರು. 

89

ಅದಾದ ಮೇಲೆ ಮಗು ಆಯ್ತು. ಆಗಲೂ ಜಗಳ ನಡೆಯುತ್ತಿತ್ತು. ಎರಡನೇ ಮಗು ಆಯ್ತು. ಹೆಣ್ಣು ಮಗು ಆಗಿರುವ ಕಾರಣ ಸರಿ ಹೋಗುತ್ತಾರೆ ಅಂದುಕೊಂಡೆ ಆದರೆ ಏನೂ ಬದಲಾವಣೆ ಆಗಲಿಲ್ಲ. 

99

ಪೊಲೀಸ್ ಮೆಟ್ಟಿಲು ಏರಿ ಬೇಡ ಎಂದು ವಾಪಸ್‌ ಬಂದೆ. ಮತ್ತೊಂದು ಸಲ ನನ್ನ ಮೇಲೆ ಕೈ ಮಾಡಿದರೆ ಹೊರ ಹೋಗುವುದಾಗಿ ಹೇಳಿದೆ...ನನ್ನ ಮೇಲೆ ಸಾಕಷ್ಟು ಆರೋಪಗಳು ಬಂತು ಆದರೂ ಹೊರ ಬಂದಿರುವೆ. ಮಹಿಳೆಯರನ್ನು ಗೌರವಿಸುವುದನ್ನು ಕಲಿಸುತ್ತಿರುವೆ. ಮಗಳು ಹೇಗೆ ಗಟ್ಟಿಯಾಗಿ ನಿಲ್ಲಬೇಕು ಎಂದು ಹೇಳಿಕೊಡುತ್ತಿರುವೆ. 

Read more Photos on
click me!

Recommended Stories