ಮಜಾ ಭಾರತ (Maja Bharatha) ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಜಗಪ್ಪ- ಸುಶ್ಮಿತಾ ಮದುವೆಯಾಗಿದ್ದಾರೆ.
ಹಲವು ವರ್ಷಗಳ ಕಾಲ ಪ್ರೀತಿಸಿ ಫೋಷಕರ ಒಪ್ಪಿಗೆ ಪಡೆದುಕೊಂಡು ಸುಶ್ಮಿತಾ ಮತ್ತು ಜಗಪ್ಪ ನವೆಂಬರ್ 18-19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಬೆಂಗಳೂರಿನ ಸಿಂಧೂರ್ ಕನ್ವೆನ್ಶನ್ ಹಾಲ್‌ನಲ್ಲಿ ಆರತಕ್ಷತೆ ಮತ್ತು ಮುಹೂರ್ತ ನಡೆದಿದೆ. ಸಿನಿಮಾ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ದರು.
ಮೆಹೆಂದಿ ಶಾಸ್ತ್ರದಲ್ಲಿ ಜಗಪ್ಪ ಮತ್ತು ಸುಶ್ಮಿತಾ ಒಂದೇ ಡಿಸೈನರ್ ಡ್ರೆಸ್ ಧರಿಸಿ ಮಿಂಚಿದ್ದರು. ಡಿಸೈನರ್ ಮೆಹೇಂದಿ ಕೂಡ ಸಖತ್ ವೈರಲ್ ಆಗಿತ್ತು.
ಬೆಂಗಳೂರಿಗೆ ಬಂದಾಗ ಬಟ್ಟೆನೇ ಇಲ್ಲದ ನಂಗೆ ಬದುಕನ್ನು ಕಟ್ಟಿಕೊಟ್ಟಿರುವ ನೀನು ಅದಿಕ್ಕೆ ನೀನು ಅಂದ್ರೆ ನಂಗೆ ತುಂಬಾ ಇಷ್ಟ ಎಂದು ಜಗಪ್ಪ ಪ್ರಪೋಸ್ ಮಾಡಿದ್ದರು.
'ಜೀವನದಲ್ಲಿ ಸರಿಯಾಗಿ ಐ ಲವ್ ಯು ಅಂತಾನೂ ಹೇಳಿರಲಿಲ್ಲ. ಖುಷಿ ಆಯ್ತು' ಎಂದು ಸುಶ್ಮಿತಾ ಜೀ ವೇದಿಕೆ ಮೇಲೆ ಪ್ರಪೋಸಲ್ ಒಪ್ಪಿಕೊಂಡಿದ್ದರು.
ಇಷ್ಟು ದಿನ ನಾನು ನೋಡಿದ್ದೇಲ್ಲಾನೂ ಇಂದು ಪ್ರಪಂಚ ನಿನ್ನ ಮದುವೆಯಾಗುತ್ತಿರುವೆ...ಇನ್ನು ಮುಂದೆ ನೀನೇ ನನ್ನ ಪ್ರಪಂಚ' ಎಂದು ಜಗಪ್ಪ ಗುಲಾಬಿ ಕೊಟ್ಟಿದ್ದರು.