Published : Nov 24, 2023, 11:42 AM ISTUpdated : Nov 24, 2023, 03:36 PM IST
ಕಿನ್ನರಿ, ಕಸ್ತೂರಿ ನಿವಾಸ, ಬಂದೇ ಬರತಾವ ಕಾಲ, ಜೋಗುಳ ಸೇರಿ ಇದೀಗ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಹೊಂಗನಸು ಸೀರಿಯಲ್‌ನಲ್ಲಿ ಪ್ರೊಫೆಸರ್ ಆಗಿ ಕಾಣಿಸಿಕೊಳ್ಳುತ್ತಿರುವ ಜ್ಯೋತಿ ರೈ ಬಹುತೇಕ ಸೀರೆಯಲ್ಲಿಯೇ ಕಂಗೊಳಿಸಿದ್ದು ಹೆಚ್ಚು. ಆದರೀಗ ಸಿಕಾಪಟ್ಟೆ ಮಾಡರ್ನ್ ಡ್ರೆಸ್‌ನಲ್ಲೂ ಕಾಣಿಸಿಕೊಳ್ಳುತ್ತಿದ್ದು, ಪಡ್ಡೆ ಹುಡುಗರ ಹೃದಯ ಕದಿಯುತ್ತಿದ್ದಾರೆ. ಇತ್ತೀಚೆಗೆ ಮತ್ತೊಂದು ಮದ್ವೆಯಾಗಿದ್ದಾರೆಂದು ಸುದ್ದಿಯಲ್ಲಿರುವ ಜ್ಯೋತಿ ತಮ್ಮ ಸರ್ ನೇಮ್ ರೈ ಅನ್ನು ಎಲ್ಲೆಡೆ ಏನೂ ತೆಗೆದು ಹಾಕಿಲ್ಲ.
ಸದಾ ಸೀರೆಯಲ್ಲಿ ತಮ್ಮ ದೇಹ ಸಿರಿಯನ್ನು ತೋರಿಸುವ ಜ್ಯೋತಿ ರೈ ಇದೀಗ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದು, ತುಂಡುಡೆಗೆಯೂ ಜೈ ಎಂದಿದ್ದಾರೆ.
212
ಇದೀಗ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಪ್ರಸಾರವಾಗಲು ಸಿದ್ಧವಾಗಿರುವ ಪ್ರೆಟಿ ಗರ್ಲ್ ಎಂಬ ವೆಬ್ ಸೀರಿಸ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ತೊಡುತ್ತಿರುವ ಉಡುಗೆ ಎಲ್ಲರ ಗಮನ ಸೆಳೆಯುತ್ತಿದೆ.
312
ಮೈ ತೂಂಬಾ ಸೀರೆಯುಟ್ಟು ಕಂಗೊಳಿಸುತ್ತಿದ್ದ ನಟಿ ಈ ಪ್ರೆಟಿ ಗರ್ಲ್‌ನಲ್ಲಿ ಅರೆ ಬರೆ ಡ್ರೆಸ್‌ನಲ್ಲಿಯೇ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದ್ದು, ಎದೆಯುದ್ದ ಬೆಳೆದ ಮಗನಿದ್ದರೂ ದೇಹಸಿರಿಯನ್ನು ಮೆಂಟೈನ್ ಮಾಡಿದ್ದು ಎಲ್ಲರನ್ನೂ ಆಶ್ಚರ್ಯ ಮೂಡಿಸಿದೆ.
412
ಈಗಾಗಲೇ ಜ್ಯೋತಿ ದಿಯಾ, ಮದಿಪು ಸೇರಿ ಹಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದು, ಕಿರುತೆರೆ, ಸಿನಿಮಾ ಮತ್ತೀಗ ವೆಬ್ ಸೀರಿಸ್‌ನಲ್ಲಿ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
512
Pretty Girl ಅಂತ ಹೆಸರಿರೋ ವೆಬ್ ಸೀರಿಸ್ ಆದರೂ The Good Wife's Castle ಅನ್ನೋ ಟ್ಯಾಗ್ ಲೈನ್ ಇರೋ ಕಥೆ ಬಗ್ಗೆ ಎಲ್ಲರಿಗೂ ಸಾಕಷ್ಟು ಕುತೂಹಲವಿದೆ.
612
ಸಿಕ್ಕಾಪಟ್ಟೆ ಹೆಸರು ಮಾಡಿದ ಹೊಂಗನಸು ಸೀರಿಯಲ್‌ನಲ್ಲಿ ಜ್ಯೋತಿ ನಟಿಸುತ್ತಿದ್ದು, ತೆಲಗು ಹಾಗೂ ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಮನೆ ಮಾತಾಗಿದ್ದಾರೆ.
712
ಆದರೆ, ವೆಬ್ ಸೀರಿಸ್ ಚಿತ್ರೀಕರಣದ ಕಾರಣವೋ ಏನೋ, ಹೊಂಗನಸು ಸೀರಿಯಲ್‌ನಲ್ಲಿ ಜಗತಿ ಎಂಬ ಪಾತ್ರವನ್ನು ಸಾಯಿಸಲಾಗುತ್ತಿದೆ. ಜೊತೆಗೆ ಇತ್ತೀಚೆಗೆ ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಹಂಚಿ ಕೊಂಡ ಫೋಟೋಸ್ ಹಲವು ಗಾಸಿಪ್‌ಗಳಿಗೆ ಎಡೆ ಮಾಡಿ ಕೊಟ್ಟಿವೆ.
812
ಕೆಲವೆಡೆ ತಮ್ಮ ಹೆಸರನ್ನು ಜ್ಯೋತಿ ಪೂರ್ವಜ್ ಎಂದು ಬದಲಾಯಿಸಿಕೊಂಡರೂ, ಎಲ್ಲಾ ಕಡೆ ಏನೂ ಬದಲಾಯಿಸಿಕೊಂಡಿಲ್ಲ. ವೆಬ್ ಸೀರಿಸ್ ಕಾರಣವೋ ಏನೋ ಇತ್ತೀಚೆಗೆ ಒಳ ಉಡುಪ ಕಾಣಿಸುವಂಥ ಟ್ರಾನ್ಸಪರೆಂಟ್ ಫೋಟೋಸ್ ಅನ್ನು ಇವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
912
ಒಳ್ಳೇ ಹೆಂಡತಿಯ ಕೋಟೆ ಎಂಬ ಟ್ಯಾಗ್ ಲೈನ್ ಇದ್ದರೂ, ಇದೊಂದು ರೊಮ್ಯಾಂಟಿಕ್ ಡ್ರಾಮಾವೆಂದು ಹೇಳಲಾಗುತ್ತಿದೆ. ರಾಹುಲ್ ದೀಪಕ್ ಈ ವೆವ್ ಸೀರಿಸ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಕೋವಿನ್ ನೆಲ್ಸನ್ ಅವರ ಛಾಯಾಗ್ರಹಣವಿರಲಿದೆ. ಅರ್ಥರ್ ಅಥೆಲ್ ಸಂಗೀತ ನಿರ್ದೇಶಿಸಿದ್ದಾರೆ.
1012
ವೆಬ್ ಸೀರಿಸ್ ಅಂದ್ರೆ ಸ್ವಲ್ಪ ಅಶ್ಲೀಲತೆಗೂ ಜಾಗವಿದ್ದೇ ಇರುತ್ತದೆ. ಒಳ್ಳೇ ಹೆಂಡತಿಯ ಕೋಟೆಯಲ್ಲಿ Illicit Relationshipಗೂ ಜಾಗವಿದ್ದಂಗೆ ಕಾಣಿಸುತ್ತಿದೆ.
1112
ಬರುವ ಹೊಸ ವರ್ಷದಲ್ಲಿ ಈ ವೆಬ್ ಸರಣಿ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಚಿತ್ರೀಕರಣ ಬಹುತೇಕ ಮುಗಿದಿದೆ ಎಂದೇ ಹೇಳಲಾಗುತ್ತಿದೆ.
1212
ಕಿನ್ನರಿ ಖ್ಯಾತಿಯ ಜ್ಯೋತಿ, ಕನ್ನಡದಲ್ಲಿ ರಂಜಿತ್ ಸಿಂಗ್ ರಜಪೂತ್ ನಿರ್ದೇಶಿಸುತ್ತಿರುವ ಸಪ್ಲೈಯರ್ ಶಂಕರ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಸುಕು ಪೂರ್ವಜ್ ನಿರ್ದೇಶನದ ಏ ಮಾಸ್ಟರ್‌ಪೀಸ್: ರೈಸ್ ಆಫ್ ಸೂಪರ್‌ಹೀರೋ" ಎಂಬ ತೆಲಗು ಚಿತ್ರದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ.