ಕನ್ನಡ ಕಿರುತೆರೆ ಜನಪ್ರಿಯ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ವೀಕ್ಷಕರ ಮನಸ್ಸು ಗೆದ್ದ ವಿಜಯ್ ಸೂರ್ಯ ಇದೀಗ ಮಾಸ್ ಲುಕ್ ಆಯ್ಕೆ ಮಾಡಿಕೊಂಡಿದ್ದಾರೆ.
ಚಾಕೋಲೇಟ್ ಬಾಯ್ ವಿಜಯ್ ಸೂರ್ಯ ಮದುವೆಯಾಗಿ ಎರಡು ಮಕ್ಕಳಿದ್ದರೂ ಹುಡುಗಿಯರಿಗೆ ಅವರ ಮೇಲಿನ ಕ್ರೇಜ್ ಒಂದು ಚೂರು ಕಡಿಮೆ ಆಗಿಲ್ಲ.
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ದೃಷ್ಟಿಬೊಟ್ಟ ಆರಂಭವಾಗುತ್ತಿದೆ, ಈ ಧಾರಾವಾಹಿಗೆ ವಿಜಯ್ ಸೂರ್ಯನೇ ನಾಯಕ.
ಸಣ್ಣದಾಗಿ ಪ್ರೋಮೋ ರಿಲೀಸ್ ಮಾಡಿರುವ ವಾಹಿನಿ ವಿಜಯ್ ಲುಕ್ ರಿವೀಲ್ ಮಾಡಿಲ್ಲ ಆದರೆ ಮಾಸ್ ಲುಕ್ ಅನ್ನೋದು ಓಪನಿಂಗ್‌ನಲ್ಲಿ ತಿಳಿಯುತ್ತದೆ.
ಅಗ್ನಿಸಾಕ್ಷಿ ಧಾರಾವಾಹಿ ನಂತರ ಇಷ್ಟ ಕಾಮ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ವಿಜಯ್ ಸೂರ್ಯ.
ಇಷ್ಟಕಾಮ್ಯ ಸಿನಿಮಾ ನಂತರ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಅಭಿಮಾನಿಗಳು ವಿಜಯ್‌ನ ಮಿಸ್ ಮಾಡಿಕೊಳ್ಳುತ್ತಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವಿಜಯ್ ಸೂರ್ಯ ಸುಮಾರು 2 ಲಕ್ಷ 87 ಸಾವಿರ ಫಾಲೋವರ್ಸ್ ಹೊಂದಿದ್ದಾರೆ. 290ಕ್ಕೂ ಹೆಚ್ಚು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.