ಕಾರನಲ್ಲಿ ಮಲಗಿದ್ದ ಬಿಗ್ ಬಾಸ್ ಕೃಷಿ ತಾಪಂಡ ; ಉರುಳಾಡಬೇಡಿ ಮೇಡಂ ಹುಡುಗ್ರು ಇಣುಕಿ ನೋಡ್ತಾರೆ ಎಂದ ನೆಟ್ಟಿಗರು!

First Published | Aug 14, 2024, 5:32 PM IST

ಕಾರಿನಲ್ಲಿ ಫೋಟೋಶೂಟ್ ಮಾಡಿಸಿದ ಕೃಷಿ ತಾಪಂಡ. ಹಾಟ್ ಪೋಸ್‌ ನೋಡಿ ಹುಡುಗರು ಕ್ಲೀನ್ ಬೋಲ್ಡ್‌......

ಬಿಗ್ ಬಾಸ್ ಸುಂದರಿ, ಸ್ಯಾಂಡಲ್‌ವುಡ್‌ ಬೆಡಗಿ ಕೃಷಿ ತಾಪಂಡಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಅಕ್ಟಿವ್ ಆಗಿದ್ದಾರೆ, ಆಗಾಗ ಫೋಟೋಶೂಟ್‌ ಮಾಡಿಸುತ್ತಿರುತ್ತಾರೆ.

ಕೆಲವು ದಿನಗಳ  ಹಿಂದೆ ಕೃಷಿ ತಾಪಂಡ ತಮ್ಮ ಐಷಾರಾಮಿ ಕಾರಿನಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. ಕಾರಿನಲ್ಲಿ ಮಲಗಿಕೊಂಡು ಹಾಟ್ ಪೋಸ್ ಕೊಟ್ಟಿದ್ದಾರೆ.

Tap to resize

ಹಸಿರು ಬಣ್ಣದ ಜ್ಯಾಕೆಟ್‌ಗೆ ಕಪ್ಪು ಬಣ್ಣದ ಜೀನ್ಸ್‌ ಪ್ಯಾಂಟ್ ಧರಿಸಿರುವ ಕೃಷಿ ಮೇಕಪ್ ಧರಿಸಿಲ್ಲ. ಈ ಸೂಟ್ ಆಗುವಂತೆ ಬಿಳಿ ಬಣ್ಣದ ಶೂ ಧರಿಸಿದ್ದಾರೆ.

ಕೃಷಿ ಈ ಹಾಟ್‌ ಲುಕ್‌ ಫೋಟೋವನ್ನು ಶಿವು ಸ್ನಾಪ್‌ ಎಂಬುವವರು ಕ್ಲಿಕ್ ಮಾಡಿದ್ದಾರೆ. ಕಾರಿನಲ್ಲಿ ಮಲಗಿ ಉರುಳಾಡಿಕೊಂಡು ಫೋಟೋ ಕ್ಲಿಕ್ ಮಾಡಿದ್ದಾರೆ.

ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ 'ಮೇಡಂ ಇದು ನಿಮ್ಮ ಬೆಡ್‌ ರೂಮ್‌ ಅಲ್ಲ ಕಾರು ನೀವು ಉರುಳಾಡಬೇಡಿ ಹುಡುಗರು ಇಣುಕಿ ನೋಡುತ್ತಾರೆ'ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ 5 ಲಕ್ಷ 42 ಸಾವಿರ ಫಾಲೋವರ್ಸ್ ಹೊಂದಿರವ ಕೃಷಿ ತಾಪಂಡ ಲೇಬಲ್ ಬೀರು ಎನ್ನುವ ಬಟ್ಟೆ ಬ್ರ್ಯಾಂಡ್‌ನ ಓನರ್. 

Latest Videos

click me!