ನಿನ್ನೆ ಸೀರೆಯುಟ್ಟು ದೇವತೆಯಂತೆ ಕಂಡ ಸಾರಾ, ಇವತ್ತು ಮಿನಿ ಡ್ರೆಸ್ಸಲ್ಲಿ ಸಖತ್ ಹಾಟ್ ಲುಕ್

First Published | Aug 14, 2024, 4:45 PM IST

ಅಮೃತಧಾರೆಯ ನಟಿ ಸಾರಾ ಅಣ್ಣಯ್ಯ ನಿನ್ನೆಯಷ್ಟೇ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿಕೊಂಡು, ದೇವತೆಯಂತೆ ಕಾಣಿಸ್ತಿದ್ರು, ಇದೀಗ ನಟಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
 

ಸಾರಾ ಅಣ್ಣಯ್ಯ (Sara Annaiah) ಅಂದ್ರೆ ನೆನಪಾಗೋದು ಅವರ ಹಾಟ್ನೆಸ್. ಯಾಕಂದ್ರೆ ಹೆಚ್ಚಾಗಿ ಸಾರಾ ತುಂಬಾನೆ ಬೋಲ್ಡ್ ಎನಿಸುವಷ್ಟು ಬೋಲ್ಡ್ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತೆರೆ ಮೇಲೆಯೂ, ತೆರೆ ಹಿಂದಿಯೂ ನಟಿ ತುಂಬಾನೆ ಸ್ಟೈಲಿಶ್ ಅನ್ನೋದು ಗೊತ್ತೇ ಇದೆ. 
 

ಅಮೃತಧಾರೆ ಧಾರಾವಾಹಿಯಲ್ಲಿ (Amruthadhare serial) ಮಹಿಮಾ ಪಾತ್ರದ ಮೂಲಕ ಮನೆಮಾತಾಗಿರುವ ಸಾರಾ ಅಣ್ಣಯ್ಯ, ಧಾರಾವಾಹಿಯಲ್ಲೂ ಫ್ಯಾಷನ್ ಜಗತ್ತಿನಲ್ಲಿ ಗುರುತಿಸಿಕೊಂಡಿರೋ ಡಿಸೈನರ್ ಆಗಿ ಕಾಣಿಸಿಕೊಂಡಿದ್ದು, ಅವರ ಡ್ರೆಸ್ಸಿಂಗ್ ಕೂಡ ತುಂಬಾನೆ ಸ್ಟೈಲಿಶ್ ಆಗಿರುತ್ತೆ. 
 

Tap to resize

ಅಷ್ಟೇ ಯಾಕೆ ಸಾರಾ ಅಣ್ಣಯ್ಯ ಮೊದಲ ಬಾರಿಗೆ ಕಾಣಿಸಿಕೊಂಡು ಕನ್ನಡಿಗರ ಮನೆಮಾತಾಗಿದ್ದ ಕನ್ನಡತಿಯ (Kannadathi)ವರೂಧಿನಿ ಪಾತ್ರದಲ್ಲೂ ಸಾರಾ ತಮ್ಮ ಸ್ಟೈಲ್, ಬೋಲ್ಡ್ನೆಸ್ ಗಳಿಂದಲೇ ಗುರುತಿಸಿಕೊಂಡಿದ್ದರು. ಇದೀಗ ಮತ್ತಷ್ಟು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸಾರಾ ನಿನ್ನೆಯಷ್ಟೇ ಕಪ್ಪು ಬಣ್ಣದ ಸೀರೆಯುಟ್ಟು, ದೃಷ್ಟಿ ಬೀಳೋವಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದರು. ಇದೀಗ ಶಾರ್ಟ್ ಡ್ರೆಸ್ಸಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. 
 

ಸಾರಾ ಅಣ್ಣಯ್ಯ, ಥ್ರೆಡ್ ಸ್ಲೀವ್ಸ್ ಹೊಂದಿರುವ ಬ್ಯಾಕ್ ಲೆಸ್ ತಿಳಿ ನೀಲಿ ಬಣ್ಣದ ಶಾರ್ಟ್ ಡ್ರೆಸ್ ಧರಿಸಿದ್ದು, ಕ್ಲೀವೇಜ್ ಕಾಣಿಸುವಂತೆ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ನಟಿ She saw love in empty hearts!  ಎಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. 
 

ನಿನ್ನೆ ನನಗೆ ಫ್ರೆಶ್ ಹೂವುಗಳು ಮತ್ತು ಹಳೇ ಪ್ರೀತಿ (old love)ಕೊಡಿ ಎಂದು ಬರೆದುಕೊಂಡಿದ್ದ ಸಾರಾ ಇವತ್ತು ಕೂಡ ಅಷ್ಟೇ ಟ್ರಿಕ್ಕಿಯಾಗಿ ಆಕೆ ಖಾಲಿ ಹೃದಯದಲ್ಲಿ ಪ್ರೀತಿ ಕಂಡಳು ಎಂದು ಬರೆದುಕೊಂಡಿದ್ದಾರೆ. ಇದರರ್ಥ ಸಾರಾ ಹೊಸದಾಗಿ ಲವ್ವಲ್ಲಿ ಬಿದ್ದಿದ್ದಾರೋ? ಅಥವಾ ಪ್ರೀತಿಗಾಗಿ ಕಾಯ್ತಿದ್ದಾರೋ ಅನ್ನೋದು ಗೊತ್ತಾಗಿಲ್ಲ. 
 

ಅಭಿಮಾನಿಗಳು ನಟಿಯ ಫೋಟೊಗಳನ್ನ ಮೆಚ್ಚಿಕೊಂಡಿದ್ದು, ಕನ್ನಡದಲ್ಲಿಯೇ ಇಂಥಹ ಸುಂದರಿ ಇರೋವಾಗ, ಯಾಕೆ ಬೇರೆ ಇಂಡಸ್ಟ್ರಿಯಿಂದ ಸಿನಿಮಾಗೆ ಕರೆಸುತ್ತಾರೆ ಎಂದಿದ್ದಾರೆ. ಅಲ್ಲದೇ ಸೆಕ್ಸಿ, ಹಾಟ್, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಕೂಡ ಮಾಡಿದ್ದಾರೆ. 
 

Latest Videos

click me!