ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮೀ' ಚಿತ್ರೀಕರಣದ ವೇಳೆ ಸುಷ್ಮಾ ರಾವ್ (ಭಾಗ್ಯಾ) ಅವರ ತಲೆಗೆ ಪೆಟ್ಟಾಗಿದೆ. ತಾಂಡವ್ ಮತ್ತು ಆದಿಯ ಅಪಹರಣದ ದೃಶ್ಯದ ಚಿತ್ರೀಕರಣದ ವೇಳೆ ಗೂಂಡಾಗಳು ದೊಣ್ಣೆಯಿಂದ ಹೊಡೆಯುವ ಸನ್ನಿವೇಶದಲ್ಲಿ ಈ ಘಟನೆ ನಡೆದಿದ್ದು, ಇದರ ಮೇಕಿಂಗ್ ವಿಡಿಯೋ ವೈರಲ್ ಆಗಿದೆ.
ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಸೀರಿಯಲ್ ಚಿತ್ರೀಕರಣದ ವೇಳೆ ನಟಿ ಸುಷ್ಮಾ ರಾವ್ ತಲೆಗೆ ಪೆಟ್ಟಾಗಿದೆ. ಸದ್ಯ ಸೀರಿಯಲ್‌ನ ಮೇಕಿಂಗ್ ಸೀನ್ ವೈರಲ್ ಆಗಿದೆ. ಆದಿ, ತಾಂಡವ್ ಇಬ್ಬರನ್ನು ಕಿಡ್ನ್ಯಾಪ್ ಮಾಡಲಾಗಿರುತ್ತದೆ. ಈ ವೇಳೆ ಅಲ್ಲಿಗೆ ಬಂದ ಭ್ಯಾಗ್ಯಾ ಮೇಲೆ ಗೂಂಡಾಗಳು ಅಟ್ಯಾಕ್ ಮಾಡ್ತಾರೆ.
25
ಭಾಗ್ಯಾ ಜೀವನ
ಕಳೆದ ಮೂರ್ನಾಲ್ಕು ವರ್ಷಗಳಿಂದ ಭಾಗ್ಯಲಕ್ಷ್ಮೀ ಸೀರಿಯಲ್ ಜನರಿಗೆ ಮನರಂಜನೆ ನೀಡುತ್ತಿದೆ. ಗಂಡನಿಂದ ದೂರವಾಗಿ ಹೊಸ ಬದುಕು ಕಟ್ಟಿಕೊಂಡು ಸ್ವಾವಲಂಬಿಯಾಗಿರುವ ಭಾಗ್ಯಾ ಜೀವನ ಹಲವರಿಗೆ ಸ್ಪೂರ್ತಿಯಾಗಿದೆ. ಇದೀಗ ಭಾಗ್ಯಾ ಜೀವನದಲ್ಲಿ ಆದಿಯ ಆಗಮನವಾಗಿದ್ದ ಸಮಯದಲ್ಲಿಯೇ ಗಂಡ ತಾಂಡವ್ ಮತ್ತೆ ಬಂದಿದ್ದಾನೆ.
35
ಶ್ರೇಷ್ಠಾ ಕಿತಾಪತಿ
ತಾಂಡವ್‌ನನ್ನು ಕಳೆದುಕೊಂಡ ಶ್ರೇಷ್ಠಾ ತನ್ನ ಕಿತಾಪತಿ ಕೆಲಸಗಳನ್ನು ಆರಂಭಿಸಿದ್ದಾಳೆ. ಭಾಗ್ಯಾಳಿಂದ ತಾಂಡವ್‌ನನ್ನು ದೂರ ಮಾಡಲು ಶ್ರೇಷ್ಠಾ ಪ್ಲಾನ್ ಮಾಡಿಕೊಂಡಿದ್ದಾಳೆ. ಅದಕ್ಕಾಗಿ ಭಾಗ್ಯಾಳನ್ನು ಕೊಲ್ಲಲು ಸಹ ಶ್ರೇಷ್ಠಾ ಮುಂದಾಗಿದ್ದಳು. ಸದ್ಯ ಸೀರಿಯಲ್‌ನಲ್ಲಿ ತಾಂಡವ್ ಮತ್ತು ಆದಿಯನ್ನು ಅಪಹರಿಸಲಾಗಿದೆ. ತಂದೆಗಾಗಿ ತನ್ವಿ ಮನೆಯಲ್ಲಿ ಕಣ್ಣೀರು ಹಾಕುತ್ತಿದ್ದಾಳೆ.
ತಾಂಡವ್ ಹುಡುಕಲು ಬಂದು ಭಾಗ್ಯಾ ಮತ್ತು ಆದಿ ಸಹ ಲಾಕ್ ಆಗಿದ್ದಾರೆ. mallesh_makeup_studio ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್‌ನ ಮೇಕಿಂಗ್ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ವ್ಯಕ್ತಿಯೋರ್ವ ಹಿಂದಿನಿಂದ ಭಾಗ್ಯಾ ತಲೆಗೆ ದೊಣ್ಣೆಯಿಂದ ಹೊಡೆಯುವ ದೃಶ್ಯ ಇದಾಗಿದೆ. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶೂಟಿಂಗ್‌ನಲ್ಲಿ ಬಳಲಾಗುವ ದೊಣ್ಣೆ, ಮಚ್ಚು ಸೇರಿದಂತೆ ಮಾರಕಾಸ್ತ್ರಗಳೆಲ್ಲವೂ ನಕಲಿ ಆಗಿರುತ್ತವೆ. ದೃಶ್ಯಗಳು ರಿಯಲ್ ಆಗಿ ಕಾಣಿಸಲಿ ಎಂದು ಕಲಾವಿದರು ಅವುಗಳು ತಾಗುದಂತೆ ಪೆಟ್ಟು ಬಿದ್ದಂತೆ ನಟಿಸುತ್ತಾರೆ. ಇಂತಹುವುದೇ ಸೀನ್‌ನಲ್ಲಿ ಭಾಗ್ಯಾ ತಲೆಗೆ ದೊಣ್ಣೆಯಿಂದ ಹೊಡೆಯಲಾಗಿದೆ. ಆದ್ರೆ ಭಾಗ್ಯಾ ತಲೆಗೆ ಕೊಂಚ ಏಟು ಬಿದ್ದಂತೆ ಕಾಣಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.