ನಮ್ರತಾ ಗೌಡ ಮತ್ತು ಭವ್ಯಾ ಗೌಡ ಇಬ್ಬರೂ ಸಹ ಕನ್ನಡ ಕಿರುತೆರೆಯ ಜನಪ್ರಿಯ ನಟಿಯರು. ಕರ್ಣನ ಇಬ್ಬರು ಮುದ್ದಾದ ನಾಯಕಿಯರು ಜೊತೆಯಾಗಿ ಫೋಟೊ ಶೂಟ್ ಮಾಡಿಸಿದ್ದು, ಅಭಿಮಾನಿಗಳು ಖುಷಿ ಪಡುವ ಬದಲು ಕಾಮೆಂಟ್ ಸೆಕ್ಷನ್ ನಲ್ಲಿ ವಾರ್ ಮಾಡ್ತಿದ್ದಾರೆ.
ನಮ್ರತಾ ಗೌಡ ಮತ್ತು ಭವ್ಯಾ ಗೌಡ ಹೆಸರು ಈಗ ಮರೆತು ಹೋದಂತಿದೆ, ಯಾಕಂದ್ರೆ ಎಲ್ಲೆಡೆ ಈಗ ನಿತ್ಯಾ ಮತ್ತು ನಿಧಿಯದ್ದೇ ಕಾರುಬಾರು. ಇಬ್ಬರೂ ಕೂಡ ಕನ್ನಡ ಕಿರುತೆರೆಯ ಜನಪ್ರಿಯ ತಾರೆಯರು. ಈಗಂತೂ ಕರ್ಣ ಧಾರಾವಾಹಿ ಮೂಲಕ ಇಬ್ಬರು ನಟಯರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
26
ಅಕ್ಕ ತಂಗಿಯ ಫೋಟೊ ಶೂಟ್
ಕರ್ಣ ಧಾರಾವಾಹಿಯಲ್ಲಿ ನಮೃತಾ ಮತ್ತು ಭವ್ಯಾ ಗೌಡ ಅಕ್ಕ-ತಂಗಿಯಾಗಿ ನಟಿಸುತ್ತಿದ್ದಾರೆ. ತಂಗಿ ಪ್ರೀತಿಸುತ್ತಿದ್ದ ಹುಡುಗ ಕರ್ಣನನ್ನು ಅಕ್ಕ ನಿತ್ಯಾ ಮದುವೆಯಾಗಿದ್ದಾಳೆ. ನಿಜವಾಗಿ ಮದುವೆ ಆಗಿಲ್ಲ ಅಂದ್ರೂ ಎಲ್ಲರೆದುರು ಇಬ್ಬರಿಗೂ ಮದುವೆ ಆಗಿದೆ. ಇದೀಗ ಈ ಅಕ್ಕ ತಂಗಿ ಜೋಡಿ ಮುದ್ದಾದ ಫೋಟೊ ಶೂಟ್ ಮಾಡಿಸಿದೆ.
36
ಮುದ್ದಾಗಿ ಪೋಸ್ ಕೊಟ್ಟ ನಟಿಯರು
ಉಮೇಶ್ ಫೋಟೊಗ್ರಾಫಿ Scenes together, bond forever ಎಂದು ಕ್ಯಾಪ್ಶನ್ ಕೊಟ್ಟು ಫೋಟೊ ಶೂಟ್ ಶೇರ್ ಮಾಡಿದ್ದು, ಇಬ್ಬರು ಕೂಡ ಮುದ್ದು ಮುದ್ದಾಗಿ, ತುಂಬಾನೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದು, ತುಂಬಾನೆ ಸುಂದರವಾಗಿ ಬಂದಿದೆ ಈ ಫೋಟೊ ಶೂಟ್. ಆದರೆ ಕಾಮೆಂಟ್ ಸೆಕ್ಷನ್ ಪೂರ್ತಿ ಫ್ಯಾನ್ಸ್ ವಾರ್ ಗಳಿಂದ ತುಂಬಿದೆ.
ಕರ್ಣ ಧಾರಾವಾಹಿ ಶುರುವಾದಾಗಿನಿಂದ ಭವ್ಯಾ ಗೌಡ ಮತ್ತು ನಮ್ರತಾ ಗೌಡ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಾರ್ ನಡೆಯುತ್ತಿದೆ. ನಿಧಿ-ಕರ್ಣ ಒಂದಾಗಬೇಕು ಅಂದ್ರೆ, ನಿತ್ಯಾ-ಕರ್ಣ ಒಂದಾಗಬೇಕು ಎನ್ನುವವರು ಇನ್ನೊಬ್ಬರು. ಈ ವಾರ್ ಎಷ್ಟರ ಮಟ್ಟಿಗೆ ಹೋಗಿದೆ ಅಂದ್ರೆ, ರಿಯಲ್ ಲೈಫಲ್ಲೂ ಇಬ್ಬರು ನಟಿಯರ ಮೇಲೆ ಅಭಿಮಾನಿಗಳು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಎಲ್ಲಾ ಫ್ಯಾನ್ ವಾರ್ ಗಳ ಮಧ್ಯೆ ನಮ್ರತಾ ಮತ್ತು ಭವ್ಯಾ ಗೌಡ ಮಾತ್ರ ಯಾರ್ ಏನ್ ಬೇಕಾದ್ರೂ ಹೇಳ್ಲಿ ತಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ.
56
ನಮ್ರತಾ ಗೌಡ
ನಮೃತಾ ಗೌಡ ಬಾಲಕಲಾವಿದೆಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟವರು, ಇವತ್ತಿಗೂ ಸಹ ಇವರು ಬಹುಬೇಡಿಕೆಯ ನಟಿ. ಪುಟ್ಟ ಗೌರಿಯ ಮದುವೆ, ನಾಗಿಣಿ 2 ಸೀರಿಯಲ್ ಹಾಗೂ ಕರ್ಣ ಧಾರಾವಾಹಿಗಳಲ್ಲಿ ನಟಿಸಿದ ಇವರು, ಬಿಗ್ ಬಾಸ್ ಸೀಸನ್ 10ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
66
ಭವ್ಯಾ ಗೌಡ
ಟಿಕ್ ಟಾಕ್ ಮೂಲಕ ಜನಪ್ರಿಯತೆ ಪಡೆದ ಭವ್ಯಾ ಗೌಡ, ಗೀತಾ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದರು. ಬಳಿಕ ಬಿಗ್ ಬಾಸ್ ಸೀಸನ್ 11ರಲ್ಲೂ ಸ್ಪರ್ಧಿಯಾಗಿ, ಟಫ್ ಕಾಂಪಿಟೀಶನ್ ನೀಡಿದ್ದರು. ಸದ್ಯ ಕರ್ಣ ಧಾರಾವಾಹಿಯಲ್ಲಿ ಅಭಿಮಾನಿಗಳು ಪ್ರೀತಿಯ ಕರ್ಣನ ಪ್ರೀತಿಯಲ್ಲಿ ಬಿದ್ದಿರುವ ನಿಧಿಯಾಗಿ ನಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.