Charu Asopa: ಖ್ಯಾತ ಟಿವಿ ನಟಿ ಚಾರು ಅಸೋಪಾ ಅವರು 'ಬಿಗ್ ಬಾಸ್ 20' ಶೋನ ದೊಡ್ಡ ಆಫರ್ ಅನ್ನು ತಿರಸ್ಕರಿಸಿದ್ದಾರೆ. ತನ್ನ ಮಗಳನ್ನು ಬಿಟ್ಟು ಇರಲು ಸಾಧ್ಯವಿಲ್ಲ, ಹಾಗಾಗಿ ಕೆರಿಯರ್‌ಗಿಂತ ಕುಟುಂಬವೇ ಮುಖ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟಿವಿ ಲೋಕದ ಜನಪ್ರಿಯ ನಟಿ ಚಾರು ಅಸೋಪಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 'ಮೇರೆ ಆಂಗನೇ ಮೇ', 'ಟಶನ್-ಎ-ಇಶ್ಕ್' ಮತ್ತು 'ಅಕ್ಬರ್ ಕಾ ಬಲ್ ಬೀರ್‌ಬಲ್' ನಂತಹ ಶೋಗಳಲ್ಲಿ ನಟಿಸಿ ಫೇಮಸ್ ಆಗಿರುವ ಚಾರು, ಇತ್ತೀಚೆಗೆ ತಮಗೆ ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ 'ಬಿಗ್ ಬಾಸ್ 20'ಗೆ ಆಫರ್ ಬಂದಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಈ ದೊಡ್ಡ ಅವಕಾಶವನ್ನು ಅವರು ನಿರಾಕರಿಸಿದ್ದಾರೆ. ಇದಕ್ಕೆ ಕಾರಣ ಯಾವುದೇ ಸಿನಿಮಾ ಅಥವಾ ಸೀರಿಯಲ್ ಕಮಿಟ್‌ಮೆಂಟ್ ಅಲ್ಲ, ಬದಲಾಗಿ ಅವರ ಮಗಳು ಜಿಯಾನಾ. ತನ್ನ ಜೀವನದಲ್ಲಿ ಮಾಡಿಕೊಂಡಿರುವ ಎಲ್ಲಾ ಬದಲಾವಣೆಗಳು ಮಗಳಿಗಾಗಿಯೇ, ಹಾಗಾಗಿ ಸದ್ಯಕ್ಕೆ ಅವಳನ್ನು ಬಿಟ್ಟು ದೂರ ಇರಲು ಸಾಧ್ಯವಿಲ್ಲ ಎಂದು ಚಾರು ಹೇಳಿದ್ದಾರೆ.
25
ಚಾರು ಅಸೋಪಾ 'ಬಿಗ್ ಬಾಸ್ 20' ಆಫರ್ ತಿರಸ್ಕರಿಸಿದ್ದೇಕೆ?
ತಮ್ಮ ಇತ್ತೀಚಿನ ವ್ಲಾಗ್‌ನಲ್ಲಿ ಮಾತನಾಡಿದ ಚಾರು ಅಸೋಪಾ, "ನಿಜ ಹೇಳಬೇಕೆಂದರೆ, ಎರಡು ದಿನಗಳ ಹಿಂದೆ ನನಗೆ ಬಿಗ್ ಬಾಸ್ ತಂಡದಿಂದ ಕಾಲ್ ಬಂದಿತ್ತು. ಆದರೆ ನಾನು ಸ್ಪಷ್ಟವಾಗಿ ಈ ಶೋನಲ್ಲಿ ಭಾಗವಹಿಸಲ್ಲ ಅಂತ ಹೇಳಿದೆ. ಯಾಕಂದ್ರೆ, ಈ ಸಮಯದಲ್ಲಿ ನಾನು ನನ್ನ ಜೀವನದಲ್ಲಿ ಮಾಡಿಕೊಂಡಿರುವ ಎಲ್ಲಾ ಬದಲಾವಣೆಗಳು ನನ್ನ ಮಗಳು ಜಿಯಾನಾಗೋಸ್ಕರ. ಅವಳನ್ನು ಬಿಟ್ಟು ದೂರ ಇರೋಕೆ ನನಗೆ ಇಷ್ಟ ಇಲ್ಲ. ನಾನು ಅವಳ ಜೊತೆ ಇದ್ದುಕೊಂಡು, ಒಬ್ಬ ತಾಯಿಯಾಗಿ ನನ್ನ ಜವಾಬ್ದಾರಿಗಳನ್ನು ನಿಭಾಯಿಸುವಂತಹ ಕೆಲಸ ಮಾಡಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.
35
ಮಗಳನ್ನು ಬಿಟ್ಟು ಕೆಲಸ ಮಾಡಲು ಇಷ್ಟವಿಲ್ಲ
ಸದ್ಯಕ್ಕೆ ತಮ್ಮ ಮೊದಲ ಆದ್ಯತೆ ಮಗಳು ಮಾತ್ರ ಎಂದು ಚಾರು ಹೇಳಿದ್ದಾರೆ. ಹಾಗಾಗಿ, ಹೆಚ್ಚು ದಿನಗಳ ಕಾಲ ಮನೆಯಿಂದ ದೂರ ಇರಬೇಕಾದ ಯಾವುದೇ ಪ್ರಾಜೆಕ್ಟ್‌ಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ಜಿಯಾನಾಳಿಂದ ದೂರ ಇರಬೇಕಾದ ಯಾವುದೇ ಕೆಲಸಕ್ಕೆ ಸದ್ಯಕ್ಕೆ ತಾನು ಸಿದ್ಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣಕ್ಕೆ ಮುಂಬೈ ತೊರೆದು ಸಿಂಗಿಂಗ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಷನ್ ಆಯ್ಕೆ ಮಾಡಿಕೊಂಡಿದ್ದಾಗಿ ಚಾರು ಅಸೋಪಾ ತಿಳಿಸಿದ್ದಾರೆ. "ಒಂದು ವೇಳೆ ಜಿಯಾನಾಳಿಂದ ದೂರ ಇದ್ದು ಕೆಲಸ ಮಾಡೋಕೆ ನಾನು ಓಕೆ ಆಗಿದ್ರೆ, ಮುಂಬೈ ಬಿಟ್ಟು ಬರ್ತಾನೇ ಇರಲಿಲ್ಲ," ಎಂದು ಅವರು ಹೇಳಿದ್ದಾರೆ.
ಚಾರು ಪ್ರಕಾರ, ಅವರಿಗೆ ಕೆಲಸ ಮಾಡಬೇಕು, ಜೊತೆಗೆ ಮಗಳ ಜೊತೆಗೂ ಇರಬೇಕು. ಈ ಎರಡನ್ನೂ ಬ್ಯಾಲೆನ್ಸ್ ಮಾಡುವ ಕಾರಣಕ್ಕಾಗಿಯೇ ಅವರು ತಮ್ಮ ಕೆರಿಯರ್‌ನಲ್ಲಿ ಹೊಸ ದಾರಿ ಹಿಡಿದಿದ್ದಾರೆ. ಈಗ ಅವರ ಜೀವನ ಸಂಪೂರ್ಣವಾಗಿ ಮಗಳು ಜಿಯಾನಾಳ ಸುತ್ತಲೇ ಗಿರಕಿ ಹೊಡೆಯುತ್ತಿದೆ. "ನಾನು ಜಿಯಾನಾಳ ಎಲ್ಲಾ ಕನಸುಗಳನ್ನು ಪೂರೈಸಬೇಕು. ಅದಕ್ಕಾಗಿ ಹೆಚ್ಚು ಕಷ್ಟಪಡಬೇಕಾದರೂ, ಹೆಚ್ಚುವರಿ ಕೆಲಸ ಮಾಡಬೇಕಾದರೂ ನಾನು ಖುಷಿಯಿಂದ ಮಾಡುತ್ತೇನೆ. ಜಿಯಾನಾ ಮಲಗಿದಾಗ ಅಥವಾ ಶಾಲೆಗೆ ಹೋದಾಗ, ನಾನು ನನ್ನ ಉಳಿದ ಕೆಲಸಗಳನ್ನು ಮುಗಿಸುತ್ತೇನೆ. ಈ ವ್ಯವಸ್ಥೆಯಿಂದ ನಾನು ಸಂತೋಷವಾಗಿದ್ದೇನೆ," ಎಂದು ಅವರು ಹೇಳಿದ್ದಾರೆ.
55
ಮುಂಬೈ ದಿನಗಳನ್ನು ನೆನೆದು ಭಾವುಕರಾದ ಚಾರು
ಮುಂಬೈನಲ್ಲಿ ತಾನು ಪಟ್ಟ ಕಷ್ಟದ ದಿನಗಳನ್ನು ನೆನಪಿಸಿಕೊಂಡ ಚಾರು, ತುಂಬಾ ಕಡಿಮೆ ಸಪೋರ್ಟ್‌ನೊಂದಿಗೆ ಮಗಳನ್ನು ಬೆಳೆಸಿದ್ದಾಗಿ ಹೇಳಿದರು. ಕೆಲಸ ಮಾಡುವಾಗಲೂ ತಮ್ಮ ಸಂಪೂರ್ಣ ಗಮನ ಜಿಯಾನಾ ಮೇಲೆಯೇ ಇರುತ್ತಿತ್ತು ಮತ್ತು ಯಾವಾಗಲೂ ಅವಳ ಬಗ್ಗೆ ಚಿಂತೆ ಮಾಡುತ್ತಿದ್ದೆ ಎಂದು ತಿಳಿಸಿದರು. ಆದರೆ, ಈಗ ಆ ಹಳೆಯ ದಿನಗಳ ಬಗ್ಗೆ ಯೋಚಿಸಲು ಅವರು ಇಷ್ಟಪಡುವುದಿಲ್ಲ. "ನಾನು ಈಗ ನನ್ನ ಜೀವನದಲ್ಲಿ ಮುಂದೆ ಸಾಗಿದ್ದೇನೆ ಮತ್ತು ಇಂದು ನಿಜವಾಗಿಯೂ ಸಂತೋಷವಾಗಿದ್ದೇನೆ. ಕೆಲವೊಮ್ಮೆ ಸುಸ್ತಾಗುತ್ತದೆ, ಆದರೆ ಅದು ಜೀವನದ ಒಂದು ಭಾಗ," ಎಂದು ಚಾರು ಹೇಳಿದ್ದಾರೆ. ಅಂದಹಾಗೆ, ಚಾರು ಅಸೋಪಾ ಅವರು ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರನ್ನು ಮದುವೆಯಾಗಿದ್ದರು. ಜೂನ್ 2023 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ವಿಚ್ಛೇದನದ ನಂತರ ಚಾರು ತಮ್ಮ ಮಗಳು ಜಿಯಾನಾ ಜೊತೆ ರಾಜಸ್ಥಾನದ ಬಿಕಾನೇರ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಈಗ ಫುಲ್-ಟೈಮ್ ತಾಯಿಯಾಗಿರುವುದರ ಜೊತೆಗೆ, ಕಂಟೆಂಟ್ ಕ್ರಿಯೇಟರ್ ಮತ್ತು ಗಾಯಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.