ನಟರಿಗೆ ಭಾಷೆಗಳ ಬೇಲಿ ಅಡ್ಡ ಬರೋದಿಲ್ಲ, ಅನ್ನೋದು ನಾವು ಹಿಂದಿನಿಂದ ಕೇಳಿಕೊಂಡು ಬಂದಿರೋ ಮಾತುಗಳು. ಹಲವಾರು ವರ್ಷಗಳಿಂದ, ಚಲನಚಿತ್ರ ತಾರೆಯರು ತಮ್ಮ ಮಾತೃ ಭಾಷೆ ಅಲ್ಲದೇ, ಬೇರೆ ಭಾಷೆಗಳಲ್ಲೂ ನಟಿಸುತ್ತಿರುವ ಟ್ರೆಂಡ್ ಇದೆ. ಇದೀಗ ಟಿವಿಯಲ್ಲೂ ಈ ಟ್ರೆಂಡ್ ಹೆಚ್ಚಾಗಿದೆ. ಹಲವು ವರ್ಷಗಳಿಂದ, ಅನೇಕ ಕನ್ನಡ ಸಣ್ಣ ಕಿರುತೆರೆ ನಟರು ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ನಟಿಸಿ, ಅಲ್ಲೂ ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂತಹ ಜನಪ್ರಿಯ ನಟ ನಟಿಯರ ಬಗ್ಗೆ ಇಲ್ಲಿದೆ ಮಾಹಿತಿ. ಗಡಿ, ಭಾಷೆ ಮೀರಿದ್ದು ಕಲೆ ಎನ್ನೋದನ್ನು ಸಾಬೀತು ಪಡಿಸಿದೆ.
ಚಂದನ್ ಕುಮಾರ್ ಕನ್ನಡ ಸೀರಿಯಲ್ ಪ್ರೇಮಿಗಳ ಫೆವರಿಟ್ ನಟ. ಇವರು ಕನ್ನಡದ ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ, ಸರ್ವಮಂಗಳ ಮಾಂಗಲ್ಯೆ, ಮರಳಿ ಮನಸಾಗಿದೆ ಸೀರಿಯಲ್ ನಲ್ಲಿ ನಟಿಸಿದ್ದರು. ಅಲ್ಲದೇ ತೆಲುಗು ಧಾರಾವಾಹಿ ಸಾವಿತ್ರಮ್ಮಗರು ಅಬ್ಬಾಯಿ, ಶ್ರೀಮತಿ ಶ್ರೀನಿವಾಸ್ ಸೀರಿಯಲ್ ಗಳಲ್ಲಿ ನಟಿಸಿ, ತೆಲುಗು ಮಂದಿಗೂ ಇಷ್ಟವಾಗಿದ್ದರು.
211
ರಂಜನಿ ರಾಘವನ್ (Ranjani Raghavan):
ಪುಟ್ಟಗೌರಿ ಮದುವೆ ಹಾಗೂ ಕನ್ನಡತಿ ಸೀರಿಯಲ್ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿರೋ ಕನ್ನಡ ಮಿಸ್ ಭುವಿ ಕನ್ನಡಿಗರ ಫೆವರಿಟ್ ಹೌದು. ಇವರು ಪುಟ್ಟ ಗೌರಿ ಮದುವೆ ಮೂಲಕ ಮಿನಿ ಸ್ಕ್ರೀನ್ ಗೆ ಎಂಟ್ರಿ ಕೊಟ್ರು. ಈ ನಟಿ ಮಲಯಾಳಂ ಧಾರಾವಾಹಿ ಪೌರ್ಣಮಿ ತಿಂಗಳ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.
311
ರಶ್ಮಿ ಪ್ರಭಾಕರ್: ( Rashmi Prabhakar)
ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಲಚ್ಚಿಯಾಗಿ ಗುರುತಿಸಿಕೊಂಡ ರಶ್ಮಿ ಪ್ರಭಾಕರ್ ತಮಿಳಿನ ಅರುಂಧತಿ, ತೆಲುಗಿನ ಪೌರ್ಣಮಿ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಇದೀಗ ಕಾವ್ಯಾಂಜಲಿ, ಕಣೈ ಕಲೈಮಾನೆ ಸೀರಿಯಲ್ ಗಳಲ್ಲೂ ಸಹ ನಟಿಸುತ್ತಿದ್ದಾರೆ.
411
ರಘು (Raghu) :
ಕನ್ನಡದ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ನಟ ರಘು, ನಂತರ ಜನರಿಗೆ ಹೆಚ್ಚು ಹತ್ತಿರವಾದುದು ನಮ್ಮನೆ ಯುವರಾಣಿಯ ಸಾಕೇತ್ ಆಗಿ. ಕನ್ನಡ ಚಲಚಿತ್ರಗಳಲ್ಲೂ ನಟಿಸಿರುವ ಇವರು ಸದ್ಯ ತೆಲುಗಿನ ಚಿರಂಜೀವಿ ಲಕ್ಷ್ಮೀ ಸೌಭಾಗ್ಯವತಿ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.
511
ಭೂಮಿ ಶೆಟ್ಟಿ (Bhoomi Shetty):
ಕಿನ್ನರಿ ಧಾರಾವಾಹಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರಲ್ಲಿ ಇವರ ನಟನೆಗೆ ಎಲ್ಲರೂ ಸೋತಿದ್ದರು. ನಂತರ ಕನ್ನಡ ಬಿಗ್ ಬಾಸ್ ನಲ್ಲೂ ಹೆಚ್ಚು ಸದ್ದು ಮಾಡಿದ್ದರು. ಅವರು ತೆಲುಗು ಧಾರಾವಾಹಿ ನಿನ್ನೆ ಪೆಲ್ಲಡುಥಾದಲ್ಲಿ ನಟಿಸುತ್ತಿದ್ದಾರೆ.
611
ಅಂಕಿತಾ ಅಮರ್ (Ankita Amar):
ಪುಟ್ಟ ಗೌರಿ ಮದುವೆ ಸೀರಿಯಲ್ ನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ್ರೂ ಇವರು ನಾಯಕಿಯಾಗಿ ಅಭಿನಯಿಸಿದ ‘ನಮ್ಮನೆ ಯುವರಾಣಿ’ ಮೂಲಕ ಅಂಕಿತಾ ತುಂಬಾ ಜನಪ್ರಿಯತೆ ಗಳಿಸಿದ್ರು. ಇವರು ತೆಲುಗಿನ ಶ್ರೀಮತಿ ಶ್ರೀನಿವಾಸ್ ನಲ್ಲೂ ನಟಿಸಿದರು. ಸದ್ಯ ಇವರು ಕನ್ನಡದ ಎರಡು ಚಿತ್ರಗಳಲ್ಲಿ ಫುಲ್ ಬಿಜಿಯಾಗಿದ್ದಾರೆ. ನಿರೂಪಣೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.
711
ನಿಶಾ ರವಿಕೃಷ್ಣನ್ (Nisha Ravikrishnan) :
ನಿಶಾ ಅನ್ನೋದಕ್ಕಿಂತ ರೌಡಿ ಬೇಬಿ ಅಮೂಲ್ಯ ಅಂದ್ರೆನೆ ಜನಕ್ಕೆ ಬೇಗ ಗೊತ್ತಾಗೋದು. ಯಾವ ಪಾತ್ರಕೊಟ್ಟರೂ ಸೈ ಎನ್ನುವ ಈ ಸುಂದರಿ ಸದ್ಯ ಕನ್ನಡದ ‘ಗಟ್ಟಿಮೇಳ’ ಸೀರಿಯಲ್ ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಇವರು ತೆಲುಗಿನ ‘ಅಮ್ಮಾಯಿಗಾರು’, ‘ಮುತ್ಯಾಮಂತ ಮುತ್ತು’ ಸೀರಿಯಲ್ ನಲ್ಲೂ ಅಭಿನಯಿಸಿ ತೆಲುಗು ಜನರ ಫೆವರಿಟ್ ಆಗಿದ್ದಾರೆ.
811
ಯಶ್ವಂತ್ ಗೌಡ (Yashwanth Gowda ):
ಕನ್ನಡದ ಕಿರುತೆರೆಯಲ್ಲಿ ಕೆಲತಿಂಗಳ ಹಿಂದಷ್ಟೆ ಮುಕ್ತಾಯಗೊಂಡಿರುವ ಧಾರಾವಾಹಿ ಕನ್ಯಾಕುಮಾರಿಯ ಚಾಕಲೇಟ್ ಹೀರೋ ಯಶ್ವಂತ್ ಗೌಡ ಯಾರಿಗೆ ತಾನೆ ಗೊತ್ತಿಲ್ಲಾ ಅಲ್ವಾ? ಮೊದಲ ಸೀರಿಯಲ್ ನಲ್ಲೇ ಜನಮನ್ನಣೆ ಗಳಿಸಿದ ಈ ನಟ, ಕನ್ನಡ ಸೀರಿಯಲ್ ಮುಗಿಯುತ್ತಿದ್ದಂತೆ ಇದೀಗ ತೆಲುಗು ಸೀರಿಯಲ್ ;ಅಮ್ಮಾಯಿಗಾರು’ ನಲ್ಲಿ ಲೀಡಿಂಗ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
911
ವೈಷ್ಣವಿ (Vaishnavi):
ಮಿಥುನ ರಾಶಿ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ನಟಿ ವೈಷ್ಣವಿ. ಕನ್ನಡ ಸೀರಿಯಲ್ ಮುಗಿದ ಬಳಿಕ ಮಲಯಾಲಂ, ತೆಲುಗು ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಇವರು ಮಿಥುನ ರಾಶಿಯ ತಮಿಳು ರಿಮೇಕ್ ‘ಉಲ್ಲಾತೈಅಲ್ಲಿತಾ’ ನಲ್ಲೂ ನಟಿಸುತ್ತಿದ್ದಾರೆ. ಅಲ್ಲದೇ ಮಲಯಾಲಂ ಸೀರಿಯಲ್ ನಲ್ಲೂ ನಟಿಸುತ್ತಿದ್ದಾರೆ.
1011
ಪೃಥ್ವಿ ರಾಜ್ (Prithvi Raj):
ದೊರೆ ಸಾನಿ ಸೀರಿಯಲ್ ಆರಂಭವಾಗಿ ಬೇಗ ಮುಗಿದು ಹೋಯಿತು ನಿಜ. ಆದರೆ ಈ ಸೀರಿಯಲ್ ನ ನಾಯಕ ಪೃಥ್ವಿ ರಾಜ್ ಜನರಿಗೆ ಇಷ್ಟವಾಗಿರೋದಂತೂ ಸುಳ್ಳಲ್ಲ. ಸದ್ಯಕ್ಕೆ ಈ ನಟ ತೆಲುಗು ಸೀರಿಯಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ಕಲರ್ಸ್ ತಮಿಳಿನ ‘ಉಲ್ಲಾತೈಅಲ್ಲಿತಾ’ ಎಂಬ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.
1111
ಪಲ್ಲವಿ ಗೌಡ (Pallavi Gowda):
2010 ರಿಂದ ಇಂದಿನವರೆಗೂ ಕಿರುತೆಯಲ್ಲಿ ಬ್ಯುಸಿಯಾಗಿರುವ ನಟಿ ಎಂದರೆ ಅದು ಪಲ್ಲವಿ ಗೌಡ. ಮೂಲತಃ ಕನ್ನಡದವರಾದರೂ ಇವರು, ಇದೀಗ ಹೆಚ್ಚಾಗಿ ಮಲಯಾಲಂ, ತೆಲುಗು ಸೀರಿಯಲ್ ಗಳಲ್ಲಿ ಹೆಚ್ಚು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ದಯಾ, ಅಲ್ಲಿಯಾಂಬಲ್, ಸಾವಿತ್ರಿ, ಪುಸುಪು ಕುಂಕುಮ ಇವರಿಗೆ ಜನಪ್ರಿಯತೆ ತಂದುಕೊಟ್ಟ ಸೀರಿಯಲ್ಸ್.