ಸೀರಿಯಲ್‌ನಲ್ಲಿ ಇಬ್ರು ಹೆಂಡ್ರು ಇದ್ದೋರೆಲ್ಲಾ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ್ರಾ?

First Published | Jan 17, 2023, 7:14 PM IST

ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ನಟರಿದ್ದಾರೆ, ಅವರು ಕನ್ನಡ ಚಿತ್ರರಂಗದಲ್ಲೂ ತಮ್ಮ ಕೌಶಲ್ಯವನ್ನು ತೋರಿಸಿ ಬಂದಿದ್ದಾರೆ. ಕೆಲವರು ಕಿರುತೆರೆ ಮಂದಿಗೆ ಇಷ್ಟವಾದರೆ, ಮತ್ತೆ ಕೆಲವರು ಹಿರಿತೆರೆಯಲ್ಲಿ ಮಿಂಚದೇ ಮತ್ತೆ ಕಿರುತೆರೆಯಲ್ಲಿಯೇ ಮಿಮ್ಚುತ್ತಾ ಇದ್ದಾರೆ. ಆ ನಟರು ಯಾರು ಅನ್ನೋದನ್ನು ನೋಡೋಣ. 

ಕಿರಣ್ ರಾಜ್ (Kiran Raj)

ಸದ್ಯ ಕನ್ನಡತಿ ಸೀರಿಯಲ್ ನ ಬ್ಯುಸಿನೆಸ್ ಮ್ಯಾನ್ ಹರ್ಷ ಆಗಿ ಮಿಂಚ್ತಾ ಇರುವಂತಹ ಕಿರಣ್ ರಾಜ್, ಈಗಾಗಲೇ ಸಾಕಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದಕ್ಕೂ ಮೊದಲು ಇವರು ಹಿಂದಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರು. ಇನ್ನು ಇವರು ಹಿರಿತೆರೆಯಲ್ಲೂ ಕಾಣಿಸಿಕೊಂಡಿದ್ದು, ಮಾರ್ಚ್ 22, ಅಸತೋಮ ಸದ್ಗಮಯ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

ಕಾರ್ತಿಕ್ ಜಯರಾಂ (Karthik Jayaram)

ಕನ್ನಡ ಕಿರುತೆರೆಯಲ್ಲಿ ಜೆಕೆ ಅಂತಾನೆ ಜನಪ್ರಿಯತೆ ಪಡೆದಿರುವ ನಟ ಕಾರ್ತಿಕ್ ಜಯರಾಂ. ಇವರು ನಟಿಸಿದ ಅಶ್ವಿನಿ ನಕ್ಷತ್ರಾ ಸೀರಿಯಲ್ ತುಂಬಾನೆ ಜನಪ್ರಿಯತೆ ಗಳಿಸಿತ್ತು. ಅಲ್ಲದೇ ಇವರು ಅಶ್ವಿನಿ ನಕ್ಷತ್ರಾ, ನಾಗಿಣಿ 2, ಅಲ್ಲದೇ ಹಿಂದಿಯ ಸಿಯಾ ಕೆ ರಾಮ್ ಧಾರವಾಹಿಯಲ್ಲೂ ನಟಿಸಿದ್ದರು. ಈ ನಟ ಸಿನಿಮಾದಲ್ಲೂ ತಮ್ಮ ಕೌಶಲ್ಯ ತೋರಿಸಿದ್ದರು. ಇವರು ಕೆಂಪೇಗೌಡ, ವಿಷ್ಣುವರ್ಧನ ಸೇರಿ ಇಪ್ಪತ್ತಕ್ಕೂ ಹೆಚ್ಚು ಚಲನಚಿತ್ರದಲ್ಲೂ ನಟಿಸಿದ್ದಾರೆ. 

Tap to resize

ಚಂದನ್ ಕುಮಾರ್  (Chandan Kumar)

ಚಂದನ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' , ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದು ಪಾತ್ರ ನಿರ್ವಹಿಸಿದ್ದರು. ಇವರು ಕನ್ನಡದ ಹಲವಾರು ಚಿತ್ರಗಳಲ್ಲೂ ಸಹ ನಟಿಸಿದ್ದಾರೆ.

ಶ್ರೀ ಮಹಾದೇವ (Shri mahadev)

ಶ್ರೀ ತಮ್ಮ ನಟನಾ ವೃತ್ತಿಜೀವನವನ್ನು ಜನಪ್ರಿಯ ದೈನಂದಿನ ಧಾರಾವಾಹಿ 'ಚಿಟ್ಟೆ ಹೆಜ್ಜೆ' ಮೂಲಕ ಪ್ರಾರಂಭಿಸಿದರು. ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟರಾದ ಶ್ರೀ ಮಹಾದೇವ್ ಮುಖ್ಯವಾಗಿ ಕನ್ನಡ ಮನರಂಜನಾ ಉದ್ಯಮದಲ್ಲಿ ಕೆಲಸ ಮಾಡಿದ್ದಾರೆ ಚಿಟ್ಟೆ ಹೆಜ್ಜೆ, ನೀಲಿ ಮತ್ತು ಶ್ರೀರಸ್ತು ಶುಭಮಸ್ತು ಮುಂತಾದ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಇವರು ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿದರು. ಇನ್ನೂ ಹಲವು ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ.

ತ್ರಿವಿಕ್ರಮ್  (Trivikram)

ಕಾಲಿನ ಗಾಯದಿಂದಾಗಿ ಮಹತ್ವಾಕಾಂಕ್ಷಿ ಕ್ರಿಕೆಟಿಗನಾಗಲು ಹೊರಟ ತ್ರಿವಿಕ್ರಮ್ ನಟನಾಗಿ ಕರಿಯರ್ ಆರಂಭಿಸಿದರು. ತ್ರಿವಿಕ್ರಮ್ ಅವರು 'ಪದ್ಮಾವತಿ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು, ಅಲ್ಲಿ ಅವರು ಸೂಪರ್ಸ್ಟಾರ್ ಸಾಮ್ರಾಟ್ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.ಇವರು ರಂಗನಾಯಕಿ, ನವರಾತ್ರಿ ಮೊದಲಾದ ಚಿತ್ರಗಳಲ್ಲೂ ನಟಿಸಿದ್ದರು. 

ರಿತ್ವಿಕ್ (Rithvik)

ಕಿರುತೆರೆಗೆ ಪಾದಾರ್ಪಣೆ ಮಾಡುವ ಮೊದಲು ಚಲನಚಿತ್ರಗಳಲ್ಲಿ ನಟಿಸಿದ್ದ ರಿತ್ವಿಕ್, ಜನರಿಗೆ ಹೆಚ್ಚು ಹತ್ತಿರವಾದದ್ದು ಮಾತ್ರ ತಮ್ಮ ದೈನಂದಿನ ಧಾರಾವಾಹಿ 'ಗಿಣಿರಾಮ' ಮೂಲಕ. ನಟನನ್ನು ಪ್ರೀತಿಯಿಂದ ಶಿವರಾಮ್ ಎಂದು ಕರೆಯಲಾಗುತ್ತದೆ. ಇವರು ಮೂಡಲಮನೆ ಸೀರಿಯಲ್ ನಲ್ಲೂ ನಟಿಸಿದ್ದರು. ಇದರ ನಡುವೆ ಎರಡು ಮೂರು ಚಲನಚಿತ್ರಗಳಲ್ಲೂ ಇವರು ನಟಿಸಿದ್ದರು. 

ರಕ್ಷಿತ್ ಗೌಡ (Rakshith Gowda)

ಕನ್ನಡ ಕಿರುತೆರೆಯ ಈ ಸುಂದರ ಬೆಳ್ಳಿ ಪರದೆಯ ಮೇಲೆಯೂ ತನ್ನ ಅದೃಷ್ಟವನ್ನು ಪರೀಕ್ಷಿಸಿದ್ದಾರೆ. ಆದರೆ ಹಿರಿತೆರೆಯಲ್ಲಿ ಇವರು ಜನಮನ ಸೆಳೆಯುವಲ್ಲಿ ಸೋತಿದ್ದರು. ಪುಟ್ಟ ಗೌರಿ ಮದುವೆ, ನಂತರ ನಟ ಇದೀಗ ದೈನಂದಿನ ಧಾರಾವಾಹಿ 'ಗಟ್ಟಿಮೇಳ' ದೊಂದಿಗೆ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ದೀಕ್ಷಿತ್ ಶೆಟ್ಟಿ (Deekshith Shetty)

ಕಿರುತೆರೆಯ ನಾಗಿಣಿ ಸಿರಿಯಲ್ ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟ ದೀಕ್ಷಿತ್ ಶೆಟ್ಟಿ ಇದೀಗ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇವರು ಕನ್ನಡದ ಸೂಪರ್ ಹಿಟ್ ಚಿತ್ರ ‘ದಿಯಾ’ದಲ್ಲಿ ಸೆಕೆಂಡ್ ಲೀಡ್ ರೋಲ್ ನಲ್ಲಿ ನಟಿಸಿದ್ದರು. ಇದರ ಜೊತೆಗೆ ಮೂರು ತೆಲುಗು ಚಿತ್ರದಲ್ಲೂ ನಟಿಸಿದ್ದಾರೆ.

ವಿಜಯ್ ಸೂರ್ಯ (Vijay Suriya)

ವಿಜಯ್ ಸೂರ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ರವಿಚಂದ್ರನ್ ಅಭಿನಯದ ಕ್ರೇಜಿಸ್ಟಾರ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಷ್ಟ ಕಾವ್ಯ ಚಿತ್ರದಲ್ಲಿ ಹೀರೋ ಆಗಿ ಸಹ ನಟಿಸಿದ್ದರು, ಕನ್ನಡ ಟಿವಿಯಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ ಯ ಸಿದ್ಧಾರ್ಥ್ ಪಾತ್ರ ಇವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತು.

Latest Videos

click me!