ರಾಖಿ ಸಾವಂತ್ ಪ್ರೆಗ್ನೆಂಟ್ ಇದೇನು ನಿಜನಾ ಅಥವಾ ಮತ್ತೊಂದು ಸುಳ್ಳಾ?
First Published | Jan 17, 2023, 5:14 PM ISTನಟಿ ರಾಖಿ ಸಾವಂತ್ (Rakhi Sawant) ಯಾರಿಗೆ ಗೊತ್ತಿಲ್ಲ ಹೇಳಿ. ದಿನಕೊಂದು ಹೊಸ ನಾಟಕಗಳ ಮೂಲಕವೇ ಒಂದಲ್ಲೊಂದು ಸುದ್ದಿಯಲ್ಲಿರುವ ರಾಖಿ ಸಾವಂತ್ ಶೋ ಪೇಜಿನ ಫೇಮಸ್ ಮುಖವಾಗಿದ್ದಾರೆ. ತಮ್ಮ ಕೆಲಸಗಳಿಗಿಂತರ ಹೆಚ್ಚು ವಿವಾದಗಳಿಂದಲೇ ಗಮನ ಸೆಳೆಯುವ ರಾಖಿ ಮತ್ತು ಬಾಯ್‌ಫ್ರೆಂಡ್ ಅದಿಲ್ ಜೊತೆಯ ಮದುವೆಯ ಡ್ರಾಮಾ ಕೆಲವು ದಿನಗಳಿಂದ ಸಾಕಷ್ಟು ಮನರಂಜನೆ ಒದಗಿಸಿದೆ ಎಂದರೆ ತಪ್ಪಿಲ್ಲ. ಈಗ ರಾಖಿ ಅವರಿಗೆ ಇನ್ನೊಂದು ಸುದ್ದಿ ಹೊರ ಬಂದಿದೆ. ಹರಡುತ್ತಿರುವ ವಿಷಯದ ಪ್ರಕಾರ ರಾಖಿ ಸಾವಂತ್ ಪತಿ ಅದಿಲ್ ಖಾನ್ ಅವರ ಮಗುವಿನ ತಾಯಿಯಾಗಲಿದ್ದಾರಂತೆ. ಹೌದು ರಾಖಿ ಪ್ರೆಗ್ನೆಂಟ್ ಎಬ್ಬ ಸುದ್ದಿ ಸದ್ಯಕ್ಕೆ ವರದಿಯಾಗುತ್ತಿದೆ. ಅಷ್ಷಕ್ಕೂ ಇದು ನಿಜನಾ?