ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಕಾಕ್ರೋಚ್ ಸುಧಿ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ ಮತ್ತು ಮಲ್ಲಮ್ಮ ಅವರಂತಹ ವೈವಿಧ್ಯಮಯ ಸ್ಪರ್ಧಿಗಳು ಇದ್ದು, ಸ್ಪರ್ಧಿಗಳಿಗೂ ಮುನ್ನ 'ಬ್ರೌನ್ ಗರ್ಲ್' ಶಿಲ್ಪಿ ದಾಸ್ ಮನೆಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.
Bigg Boss grand Openingಗೆ ಇನ್ನೇನು ಎರಡೇ ಗಂಟೆಗಳು ಬಾಕಿ ಉಳಿದಿವೆ. ಯಾರ್ಯಾರು ಅಂತಿಮವಾಗಿ ಬಿಗ್‌ಬಾಸ್ ಮನೆಯೊಳಕ್ಕೆ ಹೋಗಲಿದ್ದಾರೆ ಎನ್ನುವುದು ರಿವೀಲ್ ಆಗಲಿದೆ. ಇದಾಗಲೇ ನಾಲ್ಕೈದು ಸ್ಪರ್ಧಿಗಳ ಹೆಸರು ಮಾತ್ರ ರಿವೀಲ್ ಆಗಿದೆ.
28
ದೊಡ್ಮನೆಯಲ್ಲಿ Brown Girl
ಇದೀಗ Brown Girl ಹೆಸರಿನ ಇನ್ಸ್ಟಾಗ್ರಾಮ್ನಿಂದ ಈ ಯುವತಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ಬಿಗ್‌ಬಾಸ್ ಮನೆಯೊಳಕ್ಕೆ ಸ್ಪರ್ಧಿಗಳಿಗಿಂತಲೂ ಮುಂಚಿತವಾಗಿ ನಾನು ಹೋಗಿ ಬಂದೆ ಎಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
38
ಯಾರೀ ಯುವತಿ?
ಶಿಲ್ಪಿ ದಾಸ್ ಎಂದು ಬರೆದುಕೊಂಡಿರುವ ಈ ಯುವತಿ ಬೆಂಗಳೂರಿನವರು ಎಂದು ಹೇಳಿಕೊಂಡಿದ್ದಾರೆ. ಆದರೆ ಕನ್ನಡ ಮಾತನಾಡಲು ಬರುವುದಿಲ್ಲ. ಎಐ ದನಿ ನೀಡಿ ಕನ್ನಡ ಮಾತನಾಡಿದ್ದಾರೆ. ಆರಂಭದಲ್ಲಿ ಇಂಗ್ಲಿಷ್ನಲ್ಲಿ ನಾನು ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದಿರುವ ಇವರು ಕೊನೆಗೆ ಎಐ ಮುದ್ರಿತ ಕನ್ನಡ ಟ್ರಾನ್ಸ್ಲೇಷನ್ ಹಾಕಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಮಿಕ್ಸ್ನಲ್ಲಿ ಬಿಗ್‌ಬಾಸ್-12ರ ಮನೆಯ ಬಗ್ಗೆ ಅವರು ವಿವರಿಸಿದ್ದಾರೆ. ನಾನು ಬಿಗ್‌ಬಾಸ್ ಪ್ರವೇಶಿಸಿದೆ. ಅದರಲ್ಲಿಯೂ ಸ್ಪರ್ಧಿಗಳಿಗಿಂತಲೂ ಮುಂಚಿತವಾಗಿ. ಮತ್ತು ಈ ವರ್ಷದ ಥೀಮ್ ಕರ್ನಾಟಕದ ಪರಂಪರೆ, ಸಂಸ್ಕೃತಿ ಮತ್ತು ಜನರು. ನನ್ನ ಅನುಭವ ತುಂಬಾ ಚೆನ್ನಾಗಿತ್ತು. ಕಲರ್ಸ್ ಕನ್ನಡಕ್ಕೆ ತುಂಬಾ ಥ್ಯಾಂಕ್ಸ್ ಎಂದು ಹೇಳಿದ್ದಾರೆ.
58
ತುಳುನಾಡಿನ ಕನ್ನಡತಿ
ಇನ್ನು ಇದಾಗಲೇ ಕೆಲವು ಸ್ಪರ್ಧಿಗಳ ಹೆಸರು ರಿವೀಲ್ ಆಗಿದೆ. ತುಳುನಾಡಿನ ಕನ್ನಡತಿ ಅಂತಾನೇ ಗುರುತಿಸಿಕೊಂಡಿರುವ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕ್ಯೂಟ್ ಕ್ಯೂಟ್ ಮಾತುಗಳಿಂದಲೇ ಫೇಮಸ್ ಆಗಿದ್ದಾರೆ. ಇದೀಗ ಈ ಜನಪ್ರಿಯತೆ ಬಿಗ್‌ಬಾಸ್ ಮನೆಯವರೆಗೂ ಕರೆದುಕೊಂಡು ಬಂದಿದೆ. ಮುಂಬೈನಲ್ಲಿ ಬೆಳೆದಿರುವ ಕಾರಣ ರಕ್ಷಿತಾ ಶೆಟ್ಟಿ ಅವರಿಗೆ ಕನ್ನಡ ಮಾತನಾಡಲು ಸ್ವಲ್ಪ ಕಷ್ಟವಾಗುತ್ತದೆ. ಈ ಕಾರಣದಿಂದಲೇ ರಕ್ಷಿತಾ ಶೆಟ್ಟಿ ಅವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಟ್ರೋಲ್‌ಗೆ ಒಳಗಾಗುತ್ತಿದ್ದರು. ಜನರು ತಮ್ಮನ್ನು ಟ್ರೋಲ್ ಮಾಡಿದರೂ ರಕ್ಷಿತಾ ಶೆಟ್ಟಿ ಮಾತ್ರ ಕನ್ನಡ ಮಾತನಾಡೋದನ್ನು ನಿಲ್ಲಿಸಿಲ್ಲ.
68
ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆ ಮಲ್ಲಮ್ಮ
ಇನ್ನು ಬಿಗ್‌ಬಾಸ್ ಸೀಸನ್ 12ರ ಮನೆಗೆ ಉತ್ತರ ಕರ್ನಾಟಕದ ಗ್ರಾಮೀಣ ಪ್ರತಿಭೆಯಾಗಿರುವ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದರು. ಮಲ್ಲಮ್ಮ ಯಾವುದೇ ಸಿನಿಮಾ, ಧಾರಾವಾಹಿಯಲ್ಲಿಯೂ ನಟಿಸಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದ ಮಲ್ಲಮ್ಮ ಅವರಿಗೆ ಬಹುದೊಡ್ಡ ಅವಕಾಶ ಸಿಕ್ಕಿದೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಮಲ್ಲಮ್ಮ ಅವರು ಸ್ಪರ್ಧಿಯಾಗಿರೋದು ದೃಢವಾಗಿದೆ. ಮಲ್ಲಮ್ಮ ಅವರ ಮಾತುಗಳನ್ನು ಕೇಳಿ ನಿರೂಪಕ, ನಟ ಸುದೀಪ್, ಬಿಗ್‌ಬಾಸ್‌ಗೆ ಸಂದೇಶವೊಂದನ್ನು ರವಾನಿಸಿದ್ದಾರೆ. ಬಿಗ್‌ಬಾಸ್ ಮಲ್ಲಮ್ಮ ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
78
ಮಂಜು ಭಾಷಿಣಿ ಎಂಟ್ರಿ
ಕಿರುತೆರೆಯ ಕಲಾವಿದೆ ಮಂಜು ಭಾಷಿಣಿ ಈ ಬಾರಿಯ ಬಿಗ್‌ಬಾಸ್ ಸೀಸನ್ 12ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಖಾತೆ ಮೂಲಕ ಬಿಗ್‌ಬಾಸ್ ಶೋಗೆ ಹೋಗುತ್ತಿರೋದನ್ನು ನಟಿ ಖಚಿತಪಡಿಸಿದ್ದಾರೆ. ಬಿಗ್‌ಬಾಸ್‌ಗೆ ಹೋಗುತ್ತಿರೋದ್ಯಾಕೆ ಎಂಬುದನ್ನು ಮಂಜು ಭಾಷಿಣಿ ಹೇಳಿದ್ದಾರೆ. ಇಷ್ಟು ವರ್ಷ ಹಲವು ಪಾತ್ರಗಳಲ್ಲಿ ನಟಿಸಿದ್ದು, ಕನ್ನಡಿಗರು ಒಪ್ಪಿಕೊಂಡಿದ್ದಾರೆ. ಇದೀಗ ಮಂಜು ಭಾಷಿಣಿಯಾಗಿ ನಿಮ್ಮೆಲ್ಲರ ಮುಂದೆ ಬರುತ್ತಿದ್ದೇನೆ. ಇದು ನನ್ನ ಹೊಸ ಪಯಣ ಎಂದು ಮಂಜು ಭಾಷಿಣಿ ಹೇಳಿದ್ದಾರೆ. ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಸಮಾಜ ಸೇವಕಿ ಲಲಿತಾಂಬ ಅವರಿಗೆ ಶುಭವಾಗಲಿ, ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.
88
ಕಾಕ್ರೋಚ್ ಸುಧಿ
ಕನ್ನಡ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸುಧಿ ಅಲಿಯಾಸ್ ಕಾಕ್ರೋಚ್ ಈ ಬಾರಿಯ ಬಿಗ್‌ಬಾಸ್ ಮನೆಗೆ ಹೋಗುವ ಮೊದಲ ಸ್ಪರ್ಧಿಯಾಗಿದ್ದಾರೆ. ಟಗರು, ಭೀಮ, ಸಲಗ ಸಿನಿಮಾಗಳಲ್ಲಿ ಸುಧಿ ವಿಲನ್ ಆಗಿ ನಟಿಸಿದ್ದರು. ಟಗರು ಸಿನಿಮಾದಲ್ಲಿ ಕಾಕ್ರೋಚ್ ಪಾತ್ರದಿಂದ ಅವರು ಕಾಕ್ರೋಚ್ ಸುಧಿ ಎಂದೇ ಮನೆಮಾತಾಗಿದ್ದಾರೆ. ಈಗಾಗಲೇ ಒಂದೆರಡು ಬಾರಿ ಸುಧಿಗೆ ಬಿಗ್‌ಬಾಸ್ ಆಫರ್ ಬಂದಿದ್ದರೂ, ಶೂಟಿಂಗ್ ಇದ್ದಿದ್ದರಿಂದ ಹೋಗಿರಲಿಲ್ಲ. ಮತ್ತೆ ಕರೆದರೆ ಹೋಗ್ತೀನಿ ಎಂದಿದ್ದರು. ಅದರಂತೆ ಈ ಸೀಸನ್‌ನ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ ಆಯ್ಕೆಯಾಗಿದ್ದಾರೆ.