ಇತ್ತೀಚೆಗಷ್ಟೇ ಸ್ನೇಹಿತೆ ಜೊತೆ ಯುಎಸ್’ಎಯಲ್ಲಿ ತುಂಡುಡುಗೆ ತೊಟ್ಟು ಎಂಜಾಯ್ ಮಾಡ್ತಿದ್ದ ನಿವೇದಿತಾ ಗೌಡ, ಇದೀಗ ಭಾರತಕ್ಕೆ ಹಿಂದಿರುಗುತ್ತಿದ್ದಂತೆ ಸೀರೆಯುಟ್ಟು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರನ್ನ ನೋಡಿ ಜನ ಆಂಟಿ ಎಂದು ಕರೆದಿದ್ದಾರೆ.
ರಿಯಾಲಿಟಿ ಶೋ ಬ್ಯೂಟಿ ನಿವೇದಿತಾ ಗೌಡ (Niveditha Gowda) ಆರಂಭದಲ್ಲಿ ಕ್ವಾಟ್ಲೆ ಕಿಚನ್ ನಲ್ಲಿ ಕಾಣಿಸಿಕೊಂಡಿದ್ದರು. ನಂತ್ರ ಫ್ರೆಂಡ್ಸ್ ಜೊತೆ ದೇಶ ವಿದೇಶ ಸುತ್ತೋದ್ರಲ್ಲಿ ಬ್ಯುಸಿಯಾಗಿದ್ದರು. ಇತ್ತೀಚೆಗೆ ನಿವೇದಿತಾ ಗೌಡ ಯುಎಸ್’ಎ ತೆರಳಿದ್ದು, ಅಲ್ಲಿನ ಸಖತ್ ಮಸ್ತಿ ಮಾಡಿರುವ ಫೋಟೊಗಳನ್ನು ಅಪ್ ಲೋಡ್ ಮಾಡಿದ್ದರು.
27
ಯುಎಸ್’ಎ ಬೀದಿಯಲ್ಲಿ ನಿವ್ವಿ
ಯುಎಸ್ ನ ಬೀದಿ ಬೀದಿಯಲ್ಲಿ ಸುತ್ತಾಡಿ, ನ್ಯೂಯಾರ್ಕ್ ಸಿಟಿಯಲ್ಲಿ ಓಡಾಡಿ ಡ್ಯಾನ್ಸ್ ಮಾಡುತ್ತಾ, ಹಾಡು ಹೇಳುತ್ತಾ, ಪಬ್, ಪಾರ್ಟಿ ಎಂದು ಎಂಜಾಯ್ ಮಾಡುತ್ತಿರುವ ಫೋಟೊಗಳಂತೂ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಟ್ರಾವೆಲ್ ಭಾರಿ ಜೋರಾಗಿಯೇ ನಡಿತಿದೆ ಎಂದು ಜನ ಕಾಮೆಂಟ್ ಮಾಡುತ್ತಿದ್ದರು.
37
ಸೀರೆಯಲ್ಲಿ ನಿವೇದಿತಾ ಗೌಡ
ಇದೀಗ ನಿವೇದಿತಾ ಗೌಡ ಭಾರತಕ್ಕೆ ಬಂದಿದ್ದು, ಸೋಶಿಯಲ್ ಮೀಡಿಯಾಕ್ಕೆ ಒಂದು ಕ್ಷಣವೂ ಗ್ಯಾಪ್ ಕೊಡದ ಬೆಡಗಿ ಸೀರೆಯುಟ್ಟು ಫೋಟೊಗೆ ಪೋಸ್ ಕೊಟ್ಟಿದ್ದಾರೆ. ಬ್ರೌನ್ ಬಣ್ಣದ ಸೀರೆ ಜೊತೆಗೆ ಕಪ್ಪು ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ.
ಸೀರೆಯಲ್ಲಿ ನಿವೇದಿತಾ ಗೌಡನನ್ನು ನೋಡಿ ಅಭಿಮಾನಿಗಳು ಕಾಮೆಂಟ್ ಮಾಡಿ ಹೊಗಳಿದ್ದು, ನಡೆದಾಡುವ ಸೌಂದರ್ಯ ಇವಳೆ, ಧರೆಗಿಳಿದ ದೇವಲೋಕದ ಅಪ್ಸರೆ, ನಾನಾಗುವಾಸೆ ಇವಳ ಕೈಸೆರೆ. ನೀವು ನಿಜವಾದ ಸೌಂದರ್ಯ, ನೀವು ಸ್ವರ್ಗದಿಂದ ಬಂದ ದೇವತೆಯಂತೆ ಕಾಣುತ್ತೀರಿ. ಅರ್ಧ ಚಂದಿರನ ಮೇಲಾಣೆ ಪೂರ್ತಿ ಒಲವಾಗಿದೆ ನಿನ್ನ ಮೇಲೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
57
ಆಂಟೀ ಎಂದ ಪಡ್ಡೆಗಳು
ಇನ್ನೂ ಕೆಲವು ಪಡ್ಡೆಗಳಂತೂ ಸೀರೆಯಲ್ಲೂ ತುಂಬಾನೆ ಹಾಟ್, ಸೆಕ್ಸಿಯಾಗಿ ಕಾಣಿಸ್ತಿದ್ದೀಯ ಎಂದಿದ್ದಾರೆ. ಕನಸಲ್ಲೂ ನೀವೆ ಬರುತ್ತಿರುವೆ ಸೌಂದರ್ಯ ದೇವತೆ ಎಂದಿದ್ದಾರೆ. ಜೊತೆಗೆ ಕೆಲವರು ನಿವ್ವಿಯನ್ನ ಆಂಟಿ ಎಂದು ಕರೆದಿದ್ದಾರೆ. ಬ್ಯೂಟಿಯಂಟಿರುವ ನಿವ್ವಿಯನ್ನು ಆಂಟಿ ಎಂದು ಯಾಕೆ ಕರೆದರು ಅನ್ನೋದು ಮಾತ್ರ ಗೊತ್ತಾಗಿಲ್ಲ.
67
ರೀಲ್ಸ್ ಮೂಲಕ ಮನಗೆದ್ದ ಸುಂದರಿ
ಫೋಟೊಗಳನ್ನು ಶೇರ್ ಮಾಡುವ ಮುನ್ನ ನಿವೇದಿತಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ವರೀಲ್ಸ್ ಮಾಡಿ ಶೇರ್ ಮಾಡಿದ್ದು, ಯಾರು ಭೂಮಿಗೆ ಮೊದಲಬಾರಿಗೆ ಹಾಡನ್ನು ಹಿನ್ನೆಲೆಯಲ್ಲಿ ಹಾಕಿ, ಅದಕ್ಕೆ ತಕ್ಕಂತೆ ನಾಚುತ್ತಾ ಹೆಜ್ಜೆ ಹಾಕಿಕೊಂಡು ಬಂದಿದ್ದಾರೆ.
77
ಚಂದನ್ ಗೆ ವಿಚ್ಚೇಧನ
ಚಂದನ್ ಶೆಟ್ಟಿ ಜೊತೆಗೆ ಕೆಲವು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿವೇದಿತಾ ಗೌಡ, ನಂತರ ಆತನಿಂದ ದೂರವೇ ಉಳಿದಿದ್ದರು. ಕೆಲ ತಿಂಗಳ ಹಿಂದೆ ಈ ಜೋಡಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದು, ಸದ್ಯ ಇಬ್ಬರು ಬೇರೆ ಬೇರೆ ಹಾದಿಯಲ್ಲಿ ನಡೆಯುತ್ತಿದ್ದಾರೆ.