ಅಕ್ಕನಿಗಾಗಿ ಜೀವ ಮುಡಿಪಿಟ್ಟ ತಂಗಿ ಕಥೆ ‘ಬ್ರಹ್ಮಗಂಟು’ ಆರಂಭ; ಪ್ರೊಮೋ ನೋಡಿನೇ ಬೈತಿದ್ದಾರೆ ಜನ

Published : Jun 02, 2024, 05:28 PM IST

ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ ಝೀ ಕನ್ನಡದಲ್ಲಿ ಇದೀಗ ಜೂನ್ 17ರಿಂದ ಹೊಸ ಧಾರಾವಾಗಿ ಬ್ರಹ್ಮಗಂಟು ಆರಂಭವಾಗಲಿದೆ.   

PREV
17
ಅಕ್ಕನಿಗಾಗಿ ಜೀವ ಮುಡಿಪಿಟ್ಟ ತಂಗಿ ಕಥೆ ‘ಬ್ರಹ್ಮಗಂಟು’ ಆರಂಭ; ಪ್ರೊಮೋ ನೋಡಿನೇ ಬೈತಿದ್ದಾರೆ ಜನ

ಝೀ ಕನ್ನಡ (Zee Kannada) ವಾಹಿನಿ ವಿಭಿನ್ನ ಕಥೆಗಳನ್ನು ನೀಡೋದರಲ್ಲಿ ಮುಂದಿದೆ. ಇದೀಗ ಹಳೆಯ ಟೈಟಲ್ ಇಟ್ಟುಕೊಂಡು ಹೊಸ ಕಥೆಯೊಂದಿಗೆ ಹೊಸ ಸೀರಿಯಲ್ ಪ್ರಸಾರವಾಗಲು ಸಿದ್ಧವಾಗಿದೆ. ಸೀರಿಯಲ್ ಪ್ರೋಮೋ ಬಿಡುಗಡೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. 
 

27

ಹೌದು ಝೀ ಕನ್ನಡದಲ್ಲಿ ಇದೇ ಜೂನ್ 17ರಿಂದ ಅಕ್ಕನಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟ ತಂಗಿಯ ಕತೆಯಾಗಿರುವ  ‘ಬ್ರಹ್ಮಗಂಟು (Bramhagantu) ಸೀರಿಯಲ್ ಆರಂಭವಾಗಲಿದೆ. ಸೀರಿಯಲ್ ನ ಪ್ರೊಮೋ ಬಿಡುಗಡೆಯಾಗಿದ್ದು, ಈಗಾಗಲೇ ವೀಕ್ಷಕರು ಅಂದುಕೊಂಡಂತೆ, ಅದೇ ಹಳೆಯ ಕಥೆಯನ್ನು ಹೊಂದಿರುವ ಹೊಸ ಸೀರಿಯಲ್ ಇದಾಗಿದೆ. 
 

37

ಅಕ್ಕನಿಗಾಗಿ ತಾನು ಇಷ್ಟಪಟ್ಟಿದ್ದೆಲ್ಲವನ್ನೂ ಬಿಟ್ಟುಕೊಡುವ ತಂಗಿ, ತನ್ನನ್ನು ಎಲ್ಲರೂ ಚೆನ್ನಾಗಿಲ್ಲ ಎಂದು ಧೂಷಿಸುತ್ತಿದ್ದರೂ, ಅಕ್ಕ ಸೌಂದರ್ಯವತಿ ಎಂದು ಹೆಮ್ಮೆ ಪಟ್ಟುಕೊಳ್ಳುವ ತಂಗಿ, ಕೊನೆಗೆ ಅಕ್ಕನ ಮದುವೆಯಲ್ಲಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿ, ಕೊನೆಗೆ ತಾನೆ ವಧುವಾಗಿ ತಾಳಿ ಕಟ್ಟಿಸಿಕೊಳ್ಳುವ ಕಥೆ ಇದಾಗಿದೆ. 
 

47

ಹೊಸ ಪ್ರೊಮೋದಲ್ಲಿ ಅಕ್ಕನ ಮದುವೆಯಲ್ಲಿ ಸಂಭ್ರಮದಿಂದ ಡ್ಯಾನ್ಸ್ ಮಾಡುವ, ಅಕ್ಕ, ಭಾವನಿಗೆ ಹರಸುವ ತಂಗಿಯನ್ನು ಕಾಣಬಹುದು. ಕೊನೆಗೆ ಮದುವೆ ಹುಡುಗ ಮದುವೆ ಮುಗಿಸಿ, ತನ್ನ ಮನೆಗೆ ಹೋಗುವಾಗ ಆತನ ಜೊತೆಗಿರೋದು ತಂಗಿ, ನಿನ್ನ ಅಕ್ಕನ ಸೌಂದರ್ಯ ನೋಡಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದು, ನಿನ್ನಂತವಳು ನಮಗೆ ಬೇಕಿಲ್ಲ, ಎಂದು ಹುಡುಗನ ಅಕ್ಕ ಬಾಗಿಲಲ್ಲೇ ನಿಲ್ಲಿಸಿ, ಅವಳ ತಾಳಿ ತೆಗೆದು ನೀನೋಬ್ಬನೇ ಒಳಗೆ ಬಾ ಎನ್ನುತ್ತಾರೆ. ಅಲ್ಲಿಗೆ ಕಥೆ ಏನು ಅನ್ನೋದು ಎಲ್ಲರಿಗೂ ಅರ್ಥವಾಗಿ ಹೋಯ್ತು. 
 

57

ಈ ಪ್ರೊಮೋ ನೋಡಿಯೇ ವೀಕ್ಷಕರು ಕೋಪಗೊಂಡಿದ್ದು, ಎಲ್ಲಾ ಸೀರಿಯಲ್ ನಲ್ಲೂ ಇದೇ ಕಥೆ, ಮತ್ತೆ ಮತ್ತೆ ಯಾಕೆ ಅಂತದ್ದೆ ಕಥೆ ತರುತ್ತೀರಿ, ಇದು ತೆಲುಗು ಸೀರಿಯಲ್ ರಿಮೇಕ್ ಅಲ್ವಾ? ಈ ಜೀ ಕನ್ನಡಕ್ಕೆ ಸ್ವಮೇಕ್ ಸೀರಿಯಲ್ ಮಾಡೋಕೆ ಬರಲ್ಲ, ಎಲ್ಲವೂ ರಿಮೇಕ್, ಇಂತ ದರಿದ್ರ ಕಾನ್ಸೆಪ್ಟ್ ಇಟ್ಟುಕೊಂಡು ಮಾಡುವಂತಹ ಸೀರಿಯಲ್ ದಯವಿಟ್ಟು ನಿಲ್ಲಿಸಿ, ಇದರಿಂದ ಯುವ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ. 
 

67

ಅದೇ ಕಥೆ ಅಕ್ಕ ಓಡಿಹೋಗ್ತಾಳೆ ತಂಗಿ ಮದ್ವೆ ಆಗ್ತಾಳೆ ಆಮೇಲೆ ಅಕ್ಕ ಮತ್ತೆ ಬರ್ತಾಳೆ ಜಟಾಪಟಿ ಆಗುತ್ತೆ, ಇದು ಯಾರೇ ನೀ ಅಭಿಮಾನಿ ಸಿನಿಮಾದ ಕಥೆ ಅನಿಸುತ್ತೆ. ಮತ್ತೆ ಅಕ್ಕ ಬರ್ತಾರೆ, ತಂಗಿಗೆ ಕಾಟ ಕೊಡ್ತಾಳೆ,  ಮೊದಲಿಗೆ ನಾಯಕನಿಗೆ ಇಷ್ಟ ಇರಲ್ಲ, ಕೊನೆಗೆ ನಾಯಕನಿಗೆ ಇವಳೇ ಇಷ್ಟ ಆಗ್ತಾನೆ, ಇಂಥ ಕಥೆ ಎಷ್ಟು ಬಂದಿಲ್ಲ ಎಂದಿದ್ದಾರೆ. 
 

77

ಇನ್ನು ಬ್ರಹ್ಮಗಂಟು ಸೀರಿಯಲ್ ನಲ್ಲಿ ನಾಯಕ ಆಗಿ ಪುಣ್ಯವತಿ ಸೀರಿಯಲ್ ನಟ ಭುವನ್ ಸತ್ಯ ನಟಿಸುತ್ತಿದ್ದಾರೆ, ನಾಯಕಿಯಾಗಿ ದಿಯಾ ಪಾಲಕ್ಕಲ್ ಮತ್ತು ಕಾವ್ಯಾ ರಮೇಶ್ ನಟಿಸುತ್ತಿದ್ದಾರೆ. ಸೀರಿಯಲ್ ಇದೇ ಜೂನ್ 17 ರಿಂದ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories