ವೀಕ್ಷಕರ ಮತ ಎಂದು Bigg Bossನಿಂದ ಭಾರಿ ಮೋಸ- ಮಿಡ್​ವೀಕ್​ ಎಲಿಮಿನೇಷನ್​ ಬಗ್ಗೆ ಸ್ಪರ್ಧಿ ಶಾಕಿಂಗ್​ ಹೇಳಿಕೆ!

Published : Nov 14, 2025, 04:38 PM IST

ಬಿಗ್ ಬಾಸ್‌ನಲ್ಲಿ ಫೈನಲಿಸ್ಟ್  ಆಗುವೆ ಎನ್ನುವ ಕಾರಣಕ್ಕೆ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಹಾಕಲು ವೀಕ್ಷಕರ ಬದಲು ಅಲ್ಲಿಯೇ ಜನರನ್ನು ಕರೆಸಿ ಮತ ಚಲಾಯಿಸಲಾಗಿತ್ತು ಎಂಬ ಬಹು ದೊಡ್ಡ ಆರೋಪವನ್ನು ಸ್ಪರ್ಧಿಯೊಬ್ಬರು ಮಾಡಿದ್ದಾರೆ. ಅವರು ಹೇಳಿದ್ದೇನು? 

PREV
17
ಜಾಹ್ನವಿ ಆರೋಪವೇನು?

ಬಿಗ್​ಬಾಸ್​​ (Bigg Boss Kannada 12) ನಲ್ಲಿ ನಿನ್ನೆಯಷ್ಟೇ ನಿರೂಪಕಿ ಜಾಹ್ನವಿ ಅವರು ವಾಹಿನಿ ವಿರುದ್ಧವೇ ಆರೋಪ ಮಾಡಿ ಪರ-ವಿರೋಧ ಚರ್ಚೆಗಳಿಗೆ ಆಸ್ಪದ ಮಾಡಿಕೊಡುತ್ತಿದ್ದಾರೆ. ಸ್ಪಂದನಾ ಸೋಮಣ್ಣ ಅವರ ಪರವಾಗಿ ವಾಹಿನಿ ಇರುವ ಕಾರಣ, ಆಕೆಯನ್ನು ಎಲಿಮಿನೇಟ್ ಮಾಡುತ್ತಿಲ್ಲ ಎನ್ನುವುದು ಅವರ ವಾದವಾಗಿದ್ದು, ಇದಕ್ಕಾಗಿ ಜಾಹ್ನವಿ ಅವರನ್ನೇ ಹಲವರು ತರಾಟೆಗೆ ತೆಗೆದುಕೊಳ್ತಿರೋದೂ ನಡೆದಿದೆ.

27
ಸ್ಪರ್ಧಿ ಶಾಕಿಂಗ್​ ಹೇಳಿಕೆ

ಅದರ ನಡುವೆಯೇ ಇದೀಗ ಮತ್ತೊಂದು ಭಾರಿ ಆರೋಪ ಕೇಳಿಬಂದಿದೆ. ಅದೇನೆಂದರೆ, ವೀಕ್ಷಕರು ನೀಡುವ ಮತದ ಆಧಾರದ ಮೇಲೆ ಹೆಚ್ಚು ವೋಟ್​ ಬರುತ್ತದೆ ಎನ್ನುವ ಕಾರಣಕ್ಕೆ, ಬಿಗ್​ಬಾಸ್​​ನಲ್ಲಿಯೇ 50 ಮಂದಿಯನ್ನು ಕರೆಸಿ, ನನ್ನ ವಿರುದ್ಧ ಮತ ಹಾಕಿಸಿರುವುದಾಗಿ ಗೆಲ್ಲುವ ಅಭ್ಯರ್ಥಿಯಿಂದಲೇ ಶಾಕಿಂಗ್​ ಹೇಳಿಕೆ ಬಂದಿದೆ.

37
ಹಿಂದಿ ಬಿಗ್​ಬಾಸ್​ ಆರೋಪ

ಅಂದಹಾಗೆ, ಇದು ಬಿಗ್​ಬಾಸ್​ 19 ಅಂದರೆ ನಟ ಸಲ್ಮಾನ್​ ಖಾನ್​ ನಡೆಸಿಕೊಂಡು ಬಿಗ್​ಬಾಸ್​ನಿಂದ ಕೇಳಿಬಂದಿರುವ ಆರೋಪ. ಇಂಥದ್ದೊಂದು ಆರೋಪ ಮಾಡಿರುವವರು ಫೈನಲಿಸ್ಟ್​ ಎಂದೇ ಬಿಂಬಿತರಾಗಿರುವ ಸೋಷಿಯಲ್​​ ಮೀಡಿಯಾದ ಇನ್​ಫ್ಲುಯೆನ್ಸರ್ ​ಮೃದುಲ್ ತಿವಾರಿ.

47
ಮಿಡ್​ ವೀಕ್​ ಎವಿಕ್ಷನ್​

ಅವರನ್ನು ವಾರದ ನಡುವೆಯೇ ಹೊರಹಾಕಲಾಗಿದೆ. ಮಹಿಳಾ ಸ್ಪರ್ಧಿಯೊಬ್ಬರಿಗೆ ಹಿಂಸೆ ಕೊಟ್ಟಿರುವ ಆರೋಪದ ಮೇಲೆ, ಕಡಿಮೆ ಮತ ಬಂದಿದೆ ಎಂದು ಹೇಳಿ ಅವರನ್ನು ಹೊರಕ್ಕೆ ಹಾಕಲಾಗಿದೆ. ಇದೀಗ ಅವರು ಭಾರಿ ಆರೋಪ ಮಾಡಿದ್ದಾರೆ.

57
ನನಗೆ ಅನ್ಯಾಯ

ನಾನು ಒಂದು ವೇಳೆ ಆಕೆಯ ಮೇಲೆ ದೌರ್ಜನ್ಯ ಮಾಡಿದ್ದೇ ಆದರೆ, ಅದರ ವಿಡಿಯೋ ತೋರಿಸಲಿ, ಅಲ್ಲಿ ಇರುವ ಕ್ಯಾಮೆರಾದಲ್ಲಿ ಇದು ದಾಖಲಾಗಿ ಇರಬೇಕಲ್ಲವೆ, ಹಾಗಿದ್ದರೆ ಅದನ್ನು ಯಾಕೆ ತೋರಿಸುತ್ತಿಲ್ಲ ಎಂದು ಸಲ್ಮಾನ್​ ಖಾನ್​ (Salman Khan) ಅವರನ್ನೇ ಪ್ರಶ್ನೆ ಮಾಡಿರುವ ​ಮೃದುಲ್ ತಿವಾರಿ ಅವರು, ನನ್ನನ್ನು ವಿನಾಕಾರಣ ತೊಂದರೆಗೆ ಸಿಲುಕಿಸಿದ್ದಾರೆ ಎಂದಿದ್ದಾರೆ.

67
ಅತ್ಯಧಿಕ ವೋಟ್​

ಮೊದಲಿನಿಂದಲೂ ನಾನೇ ಫೈನಲಿಸ್ಟ್​ ಎಂದೇ ಎಲ್ಲರೂ ಅಂದುಕೊಂಡಿದ್ದರು. ನನಗೇ ಅತ್ಯಧಿಕ ವೋಟ್​ ಬರುತ್ತಿತ್ತು. ಇದು ವೀಕ್ಷಕರಿಗೂ ತಿಳಿದಿದೆ. ಆದರೆ, 'ಮಹಿಳೆಯರ ವಿರುದ್ಧದ ಹಿಂಸೆ' ಎಂಬ ಹಣೆಪಟ್ಟಿಯನ್ನು ಕಟ್ಟಿ ಮಿಡ್​ವೀಕ್​ ಎವಿಕ್ಷನ್​ ಮಾಡಲಾಗಿದೆ. ಇದು ಅನ್ಯಾಯ ಎಂದಿದ್ದಾರೆ ಅವರು.

77
ನೇರ ಪ್ರೇಕ್ಷಕರ ಮತ

ಬಿಗ್​ಬಾಸ್​ ನೋಡುವ ಜನರ ಮತ ಎಣಿಸುವ ಬದಲು, ಅಲ್ಲಿಯೇ ಕರೆಸಿದ್ದ ವೀಕ್ಷಕರ ಮೂಲಕ ಮತ ಚಲಾವಣೆ ಮಾಡಿದ್ದರಿಂದ ಕಡಿಮೆ ಮತ ತೋರಿಸಲಾಗಿದೆ. ನೇರ ಪ್ರೇಕ್ಷಕರ ಮತಗಳಿಂದ ಫಲಿತಾಂಶ ನಿರ್ಧರಿಸಿದ್ದರೆ ಅದು ನ್ಯಾಯಯುತವಾಗಿರುತ್ತಿತ್ತು ಎಂದಿದ್ದಾರೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

Read more Photos on
click me!

Recommended Stories