ಅಪ್ಪ ಆಗ್ತಿರೋ ಖುಷಿಯಲ್ಲಿ Brahmagantu ನರಸಿಂಹ: ಪತ್ನಿಯ ಸೀಮಂತದ ಫೋಟೋ ಶೇರ್​ ಮಾಡಿದ ನಟ

Published : Nov 06, 2025, 08:53 PM IST

ಬ್ರಹ್ಮಗಂಟು ಧಾರಾವಾಹಿಯಲ್ಲಿ ತಂಗಿಗಾಗಿ ತ್ಯಾಗ ಮಾಡುವ ನರಸಿಂಹ ಪಾತ್ರಧಾರಿ ಭರತ್ ನಾಯಕ್, ನಿಜ ಜೀವನದಲ್ಲಿ ಅಪ್ಪನಾಗುತ್ತಿದ್ದಾರೆ. ಅವರ ಪತ್ನಿ ಪ್ರತಿಭಾ ಅವರ ಸೀಮಂತ ಕಾರ್ಯಕ್ರಮದ ಸಂಭ್ರಮದ ಜೊತೆಗೆ, ಭರತ್ ಅವರ ನಟನೆ, ಗಾಯನ ಹಾಗೂ ಉದ್ಯಮದ ಕುರಿತು ಈ ಲೇಖನ ವಿವರಿಸುತ್ತದೆ.

PREV
16
ಬ್ರಹ್ಮಗಂಟು ಸೀರಿಯಲ್‌ ನರಸಿಂಹ

ಇದ್ದರೆ ಇಂಥ ಅಣ್ಣ ಇರಬೇಕು ಎಂದು ಸೀರಿಯಲ್‌ ನೋಡುಗರು ಹೇಳುವುದು ಒಂದು ಅಣ್ಣಯ್ಯ ಸೀರಿಯಲ್‌ ಶಿವು ಹಾಗೂ ಇನ್ನೊಂದು ಬ್ರಹ್ಮಗಂಟು ಸೀರಿಯಲ್‌ ನರಸಿಂಹ. ನರಸಿಂಹನ ಕುರಿತು ಹೇಳುವುದಾದರೆ, ತಂಗಿ ದೀಪಾಳಿಗಾಗಿ, ಆಕೆಯ ಸುಖಕ್ಕಾಗಿ ಏನು ಬೇಕಾದರೂ ಮಾಡಲು ತಯಾರು ಇರುವ ಅಣ್ಣ ಈತ.

26
ತಂಗಿಗಾಗಿ ತ್ಯಾಗ

ನಾಯಕ ಚಿರು ಅತ್ತಿಗೆ ಸೌಂದರ್ಯ, ಮೋಸದಿಂದ ತನ್ನ ತಮ್ಮನನ್ನು ಸಂಜನಾ ಜೊತೆ ಮದುವೆ ಮಾಡಲು ನೋಡಿದಾಗ ಆಕೆಗೆ ಖುದ್ದು ತಾಳಿ ಕಟ್ಟಿ ತಂಗಿಯ ಜೀವನ ಕಾಪಾಡಿದವನೇ ಈ ನರಸಿಂಹ. ಇದಕ್ಕೂ ಮುನ್ನ ನರಸಿಂಹನನ್ನು ಪ್ರೀತಿ ಮಾಡಿದಂತೆ ಮಾಡಿ ಮೋಸ ಮಾಡಿದ ವಂಚಕಿ ಸಂಜನಾ.

36
ಅಪ್ಪ ಆಗ್ತಿರೋ ನರಸಿಂಹ

ಸದ್ಯ Brahmagantu ಸೀರಿಯಲ್‌ನಲ್ಲಿ ಸಂಜನಾ ಕ್ಷಣ ಕ್ಷಣಕ್ಕೂ ಹಿಂಸೆ ನೀಡುತ್ತಿದ್ದರೆ, ರಿಯಲ್‌ ಲೈಫ್‌ನಲ್ಲಿ ನರಸಿಂಹ ಪಾತ್ರಧಾರಿ ಭರತ್​ ನಾಯಕ್​ ಅಪ್ಪ ಆಗುತ್ತಿದ್ದಾರೆ. ಅವರ ಪತ್ನಿ ಪ್ರತಿಭಾ ಅವರಿಗೆ ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದು, ಅದರ ಫೋಟೋಗಳನ್ನು ಭರತ್‌ ಅವರು ಶೇರ್‌ ಮಾಡಿಕೊಂಡಿದ್ದಾರೆ.

46
ಸಿಂಗರ್‌ ಆಗಿರೋ ನಟ

ಅಂದಹಾಗೆ ಭರತ್​ ಅವರು ಸಿಂಗರ್​. ಅವರದ್ದೇ ಆದ ಮ್ಯೂಸಿಕ್ ಬ್ಯಾಂಡ್‌ ಇದೆ. ರಂಗಭೂಮಿ ಕಲಾವಿದರೂ ಹೌದು. ಈಗ ಬ್ರಹ್ಮಗಂಟು ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದಾರೆ.

56
ಈವೆಂಟ್​ ಮ್ಯಾನೇಜ್​ಮೆಂಟ್

ಮದುವೆಯಾಗಿ ನಾಲ್ಕನೇ ವರ್ಷಕ್ಕೆ ಜೋಡಿ ಕಾಲಿಟ್ಟಿದೆ. ಈ ದಂಪತಿ ಆಗಾಗ್ಗೆ ಕ್ಯೂಟ್​ ವಿಡಿಯೋ, ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇವರು ಪತ್ನಿಯ ಜೊತೆಗೂಡಿ ಕಲಾಧರ ಕ್ರಿಯೇಷನ್ಸ್ ​ಎನ್ನುವ ಈವೆಂಟ್​ ಮ್ಯಾನೇಜ್​ಮೆಂಟ್​ ಅನ್ನು ಕೂಡ ನಡೆಸುತ್ತಿದ್ದಾರೆ.

66
ಮೊದಲ ಬಾರಿಗೆ ಧಾರಾವಾಹಿಯಲ್ಲಿ

ಇದೇ ಮೊದಲ ಬಾರಿಗೆ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ ಭರತ್​. ಸದ್ಯ ರೂಪ ಅವರ ಅಣ್ಣನ ಪಾತ್ರದಲ್ಲಿ ಭರತ್​ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಭರತ್​ ಅವರ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ.

ನಟನ ವಿಡಿಯೋಗಾಗಿ ಇದರ ಮೇಲೆ ಕ್ಲಿಕ್​  ಮಾಡಿ

Read more Photos on
click me!

Recommended Stories