'ದಿಲೀಪ್‌ ಸರ್‌ ನಿಮ್ಮನ್ನ ತುಂಬಾ ಮಿಸ್‌ ಮಾಡ್ಕೋತೇನೆ..' ಬ್ರಹ್ಮಗಂಟು ಸೀರಿಯಲ್‌ ಕೊನೆ ಆಗ್ತಿದ್ದಂತೆ ಕಾವ್ಯಾ ರಮೇಶ್‌ ಭಾವುಕ

Published : Aug 03, 2026, 05:00 PM IST

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು' ತನ್ನ ಪ್ರಸಾರವನ್ನು ಮುಕ್ತಾಯಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟಿ ಕಾವ್ಯ ರಮೇಶ್ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದದಾರೆ.

PREV
15
ಮುಕ್ತಾಯದತ್ತ ‘ಬ್ರಹ್ಮಗಂಟು’ ಪಯಣ

ಜೀ ಕನ್ನಡ ವಾಹಿನಿಯಲ್ಲಿ ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಗೆ ಈಗ ತೆರೆಬೀಳುತ್ತಿದೆ. ಸದ್ಯ ಈ ಧಾರಾವಾಹಿಯ ಕೊನೆಯ ಸಂಚಿಕೆಗಳು (Climax Episodes) ಪ್ರಸಾರವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಂತ್ಯಗೊಳ್ಳಲಿದೆ.

25
ನಟಿ ಕಾವ್ಯ ರಮೇಶ್ ಭಾವುಕ ಪೋಸ್ಟ್

ಧಾರಾವಾಹಿಯಲ್ಲಿ 'ರೂಪ' ಎಂಬ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಕಾವ್ಯ ರಮೇಶ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಬ್ರಹ್ಮಗಂಟು' ಸೀರಿಯಲ್‌ನ ಮೊದಲ ಪ್ರೋಮೊ ಹಂಚಿಕೊಂಡಿದ್ದಾರೆ. ಧಾರಾವಾಹಿ ಮುಕ್ತಾಯವಾಗುತ್ತಿರುವ ಬೆನ್ನಲ್ಲೇ ಹಳೆಯ ನೆನಪುಗಳನ್ನು ಮೆಲಕು ಹಾಕಿ ಭಾವುಕರಾಗಿ ಸುದೀರ್ಘ ಸಾಲುಗಳನ್ನು ಬರೆದುಕೊಂಡಿದ್ದಾರೆ.

35
'ರೂಪ' ಪಾತ್ರಕ್ಕೆ ಸಿಕ್ಕ ಪ್ರೀತಿಗೆ ಧನ್ಯವಾದ

ಸುಮಾರು ಎರಡೂವರೆ ವರ್ಷಗಳ ಕಾಲ ನಡೆದ ಈ ಸುಂದರ ಪಯಣ ತಮಗೆ ಅಮೂಲ್ಯವಾದ ನೆನಪುಗಳು, ಕಲಿಕೆ ಮತ್ತು ಉತ್ತಮ ಅನುಭವವನ್ನು ನೀಡಿದೆ ಎಂದು ಕಾವ್ಯ ತಿಳಿಸಿದ್ದಾರೆ. ಇಷ್ಟು ದಿನಗಳ ಕಾಲ 'ರೂಪ' ಪಾತ್ರವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ, ಬೆಂಬಲಿಸಿದ ಎಲ್ಲಾ ವೀಕ್ಷಕರಿಗೆ ಹಾಗೂ ಇಡೀ ಧಾರಾವಾಹಿ ತಂಡಕ್ಕೆ ಮನತುಂಬಿ ಧನ್ಯವಾದ ಅರ್ಪಿಸಿದ್ದಾರೆ.

45
ದಿವಂಗತ ನಟ ದಿಲೀಪ್‌ಗೆ ನಮನ

ತಮಗೆ ಈ ಧಾರಾವಾಹಿಯಲ್ಲಿ ನಟಿಸಲು ಅಮೂಲ್ಯವಾದ ಅವಕಾಶ ನೀಡಿದ್ದಕ್ಕಾಗಿ ಶ್ರೀವಿದ್ಯಾ ಮೇಡಂ ಹಾಗೂ ದಿವಂಗತ ನಟ ದಿಲೀಪ್ ಅವರಿಗೆ ನಟಿ ಕಾವ್ಯ ರಮೇಶ್ ಕೃತಜ್ಞತೆ ಸಲ್ಲಿಸಿದ್ದಾರೆ. "ದಿಲೀಪ್ ಸರ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ, ಈ ಪಯಣ ಯಾವಾಗಲೂ ನನ್ನ ಹೃದಯದಲ್ಲಿ ವಿಶೇಷವಾಗಿ ಉಳಿಯುತ್ತದೆ" ಎಂದು ತಮ್ಮ ಪೋಸ್ಟ್‌ನಲ್ಲಿ ನೆನೆದಿದ್ದಾರೆ.

55
ಕನ್ನಡ ಕಿರುತೆರೆಯಲ್ಲಿ ಕಾವ್ಯ ಛಾಪು

ನಟಿ ಕಾವ್ಯ ರಮೇಶ್ ಕನ್ನಡ ಕಿರುತೆರೆಯ ಜನಪ್ರಿಯ ನಟಿಯಾಗಿದ್ದು, 'ಬ್ರಹ್ಮಗಂಟು' ಮಾತ್ರವಲ್ಲದೆ 'ಸೀತಾ ವಲ್ಲಭ', 'ಮಾಂಗಲ್ಯಂ ತಂತುನಾನೇನ' ಹಾಗೂ 'ಗೌರಿಶಂಕರ' ಮುಂತಾದ ಸೂಪರ್ ಹಿಟ್ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ವೀಕ್ಷಕರ ಪ್ರೀತಿ ಗಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories