ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಗೌತಮ್ ಮತ್ತು ಭೂಮಿಕಾ ದುಃಖದ ಕಡಲಲ್ಲಿದ್ದಾರೆ. ಆದರೆ, ಈ ವಿಷಯ ತಿಳಿದ ಜೈದೇವ ಮತ್ತು ಶಕುಂತಲಾ ಸಂಭ್ರಮಿಸುತ್ತಿದ್ದು, ಭೂಮಿಕಾಳ ನೋವನ್ನು ಬಳಸಿಕೊಂಡು 'ಕಣ್ಣೀರಧಾರೆ' ಎಂಬ ಹೊಸ ಪುಸ್ತಕ ಬರೆಯಲು ಜೈದೇವ ಸಿದ್ಧನಾಗಿದ್ದಾನೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಭೂಮಿಕಾಳ ಕಣ್ಣೀರಧಾರೆಯೇ ನಡೆಯುತ್ತಿದೆ. ಭೂಮಿಕಾ ಮತ್ತು ಗೌತಮ್ ಅವರ ಸವಿನಯ ಪ್ರೀತಿಯ ಅಮೃತಧಾರೆ ಈಗ ಕಣ್ಣೀರಧಾರೆಯಾಗಿ ಹರಿಯುತ್ತಿದೆ. ಭೂಮಿಕಾಗೆ ಕ್ಯಾನ್ಸರ್ ಎನ್ನುವ ವಿಷಯ ತಿಳಿದಾಗಿನಿಂದ ಸೀರಿಯಲ್ ಪ್ರಿಯರು ಕೂಡ ಕಣ್ಣೀರು ಹಾಕುತ್ತಿದ್ದಾರೆ.
26
ವಿಷಯ ತಿಳಿದುಕೊಂಡ ಜೈ, ಶಕು
ಆದರೆ ಅದೇ ಇನ್ನೊಂದೆಡೆ, ಜೈದೇವ್ ಮತ್ತು ಶಕುಂತಲಾಗೂ ಈ ವಿಷಯ ತಿಳಿದಿದ್ದು, ಅವರು ಸಕತ್ ಖುಷಿಯಾಗಿದ್ದಾರೆ. ತಾವು ಮಾಡಲು ಸಾಧ್ಯವಾಗದ್ದು ವಿಧಿಯೇ ಮಾಡಿಸಿತು ಎಂದು ಇನ್ನಿಲ್ಲದಂತೆ ಗೆದ್ದು ಬೀಗುತ್ತಿದ್ದಾರೆ.
36
ಭೂಮಿಕಾಳ ಅಮೃತಧಾರೆ
ಭೂಮಿಕಾ ಬರೆದ ಅಮೃತಧಾರೆ ಪುಸ್ತಕವನ್ನು ಕೆಲವು ದಿನಗಳ ಹಿಂದೆ ಗೌತಮ್ ಸರ್ಪ್ರೈಸ್ ಆಗಿ ಬಿಡುಗಡೆ ಮಾಡಿದ್ದ. ಅದನ್ನು ನೋಡಿ ಜೈದೇವ ಮತ್ತು ಶಕುಂತಲಾ ಹೊಟ್ಟೆ ಉರಿದುಕೊಂಡಿದ್ದರು.
ಆದ್ದರಿಂದ ಇದೀಗ, ಹೊಸ ಪುಸ್ತಕ ಬರೆಯಲು ಜೈದೇವ ರೆಡಿಯಾಗಿದ್ದಾನೆ. ಅದಕ್ಕೆ ಕಣ್ಣೀರಧಾರೆ ಎಂದು ಟೈಟಲ್ ಕೊಡುವುದಾಗಿ ಹೇಳಿದ್ದಾನೆ. ಅಮೃತಧಾರೆ ಪಾರ್ಟ್-2 ಪುಸ್ತಕ ಇದಾಗಿದ್ದು ಇದಕ್ಕೆ ಕಣ್ಣೀರಧಾರೆ ಎಂದು ಹೆಸರು ಕೊಡುವುದಾಗಿ ಹೇಳಿದ್ದಾನೆ//
56
ವರ್ಷಪೂರ್ತಿ ನೋವು
ಈ ವಿಷಯವನ್ನು ಮನೆಯವರಿಗೆಲ್ಲರಿಗೂ ತಿಳಿಸಿ, ಖುಷಿ ಪಡುವ ಧಾವಂತದಲ್ಲಿ ಜೈದೇವ ಇದ್ದರೆ, ಶಕುಂತಲಾ ಅವನನ್ನು ತಡೆದು, ಒಟ್ಟಿಗೇ ಎಲ್ಲರಿಗೂ ಹೇಳಿದರೆ, ಒಂದಷ್ಟು ದಿನ ಮಾತನಾಡಿ ಮರೆತುಬಿಡುತ್ತಾರೆ. ಆದ್ದರಿಂದ ಒಬ್ಬೊಬ್ಬರಿಗೇ ಈ ವಿಷಯ ತಿಳಿಯುವಂತೆ ಮಾಡಿದರೆ ವರ್ಷಪೂರ್ತಿ ಒಬ್ಬೊಬ್ಬರೇ ಅದರ ಬಗ್ಗೆ ಮಾತನಾಡುತ್ತಾ ನೋವು ಅನುಭವಿಸುತ್ತಾರೆ ಎನ್ನುತ್ತಾಳೆ.
66
ಬುದ್ಧಿ ಕಲಿಸಬೇಕಿದೆ ಮಲ್ಲಿ
ಅಮ್ಮನ ಈ ಟಿಪ್ಸ್ ಜೈದೇವ್ಗೆ ಭಾರಿ ಖುಷಿ ಕೊಡುತ್ತದೆ. ಒಟ್ಟಿನಲ್ಲಿ ಜೈದೇವ್ ಮತ್ತು ಶಕುಂತಲಾ ಸೆಲೆಬ್ರೇಷನ್ ಮಾಡುತ್ತಿದ್ದು, ಇವರಿಗೆ ಸದ್ಯ ಮಲ್ಲಿನೇ ಬುದ್ಧಿ ಕಲಿಸಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.