Brahmagantu Serial Update: ಪೆದ್ದು ದೀಪಾ, ಇವ್ನು ಸೀರಿಯಲ್​ ಗಂಡ ಎನ್ನೋದೂ ಗೊತ್ತಾಗಿಲ್ವಾ? ಏನ್​ ಮಾಡ್ದೆ ನೀನು?

Published : Mar 02, 2026, 02:46 PM IST

ಬ್ರಹ್ಮಗಂಟು ಧಾರಾವಾಹಿಯಲ್ಲಿ ಚಿರು ಮತ್ತು ದೀಪಾ ಒಂದಾಗುವ ಕ್ಷಣದಲ್ಲಿ ಹೊಸ ತಿರುವು ಸಿಕ್ಕಿದೆ. ತನ್ನ ಅತ್ತಿಗೆ ಸೌಂದರ್ಯಳನ್ನು ಬಿಟ್ಟು ಬಂದರೆ ಮಾತ್ರ ತಾಳಿ ಕಟ್ಟಿಸಿಕೊಳ್ಳುವುದಾಗಿ ದೀಪಾ ಹೇಳಿದ್ದಾಳೆ. ದೀಪಾಳ ಈ ನಡೆ ಚಿರುವನ್ನು ಕೆರಳಿಸುವ ಸಾಧ್ಯತೆಯಿದ್ದು, ಸಂಬಂಧ ಮುರಿದು ಬೀಳುವ ಸೂಚನೆ ಸಿಕ್ಕಿದೆ.

PREV
16
ಚಿರು ಮತ್ತು ದೀಪಾ

ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿ ಚಿರು ಮತ್ತು ದೀಪಾ ಒಂದಾಗಿದ್ದಾರೆ. ಇನ್ನೇನು ಅವರು ಒಂದಾದ್ರಲ್ಲ, ಸೀರಿಯಲ್​ ಮುಗಿದೇ ಹೋಗತ್ತೆ ಎಂದುಕೊಂಡವರೇ ಹೆಚ್ಚು. ಅದರಲ್ಲಿಯೂ ಸೌಂದರ್ಯ ಬಂಡವಾಳನೂ ಬಯಲಾಗುವ ಕಾಲವೂ ಬಂದಾಗಿದೆ ಎಂದಾಗಿತ್ತು.

26
ಆಗಿದ್ದೇ ಬೇರೆ

ಆದರೆ ಈಗ ಆಗಿದ್ದೇ ಬೇರೆ. ದೀಪಾಳಿಗಾಗಿ ಹಾತೊರೆಯುತ್ತಿರುವ ಚಿರು, ಅವಳಿಗಾಗಿ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಿರೋ ಅತ್ತಿಗೆ ಸೌಂದರ್ಯಳ ಕಣ್ಣು ತಪ್ಪಿಸಿಯೂ ಬರುತ್ತಿದ್ದ. ಇವರಿಬ್ಬರನ್ನೂ ಬೇರೆ ಮಾಡಲು ಸೌಂದರ್ಯ ಇನ್ನಿಲ್ಲದಂತೆ ಹೆಣಗಾಡುತ್ತಿದ್ದಾಳೆ.

36
ಸೀರಿಯಲ್​ ಗಂಡ

ಅದರ ನಡುವೆಯೇ, ಚಿರು ಅತ್ತಿಗೆಯ ಎದುರೇ ದೀಪಾಳಿಗೆ ತಾಳಿ ಕಟ್ಟಲು ಹೋಗಿದ್ದ. ಅಷ್ಟಕ್ಕೂ ಬಹುತೇಕ ಎಲ್ಲಾ ಸೀರಿಯಲ್​ಗಳಂತೆಯೇ, ಇಲ್ಲಿಯೂ ಚಿರುವನ್ನು ಶತದಡ್ಡನ ರೀತಿಯಲ್ಲಿಯೇ ಬಿಂಬಿಸಲಾಗಿದೆ. ಸೀರಿಯಲ್​ಗಳು ಮಹಿಳಾ ಕೇಂದ್ರಿತ ಆಗಿರುವ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿಯೂ ಒಬ್ಬ ಲೇಡಿ ವಿಲನ್​, ಅವಳನ್ನು ಅತಿಯಾಗಿ ನಂಬುದು ಒಬ್ಬ ಶತದಡ್ಡ ಗಂಡಸು ಇದ್ದೇ ಇರುತ್ತಾರೆ. ಇಲ್ಲಿಯೂ ಸೌಂದರ್ಯ ಮತ್ತು ಚಿರು ವಿಷ್ಯದಲ್ಲಿ ಹಾಗೆಯೇ ಆಗಿರೋದು.

46
ಸೌಂದರ್ಯಳಿಗೆ ಸಿಕ್ತು ಛಾನ್ಸ್​

ಇನ್ನು ದೀಪಾ ಏನು ಮಾಡಿದ್ಲು ಎಂದರೆ, ತಾಳಿ ಕಟ್ಟಲು ಹೋದಾಗ ಸೌಂದರ್ಯಳಿಗೆ ಏನು ಮಾಡಬೇಕು ಎನ್ನುವುದೇ ತಿಳಿಯಲಿಲ್ಲ. ಎಲ್ಲವೂ ಕೈಮೀರಿ ಹೋಗ್ತಾ ಇದೆ ಎಂದುಕೊಳ್ಳುವಾಗಲೇ, ದೀಪಾನೇ ಅವಕಾಶ ಮಾಡಿಕೊಟ್ಟುಬಿಟ್ಟಳು.

56
ದೀಪಾಗೆ ಬೇಕಿತ್ತಾ?

ಚಿರು ಬುದ್ಧಿ ಎಂಥದ್ದು ಎಂದು ತಿಳಿದಿದ್ದರೂ, ಸೌಂದರ್ಯಳ ನಿಜ ಮುಖ ಬಯಲು ಮಾಡಲು ಹೋಗಿದ್ದಾಳೆ ಆಕೆ. ನಿಮ್ಮ ಅತ್ತಿಗೆ ಮನುಷ್ಯ ರೂಪದ ರಾಕ್ಷಸಿ ಎಂದೆಲ್ಲಾ ಚಿರು ಎದುರು ಹೇಳಿದ್ದಾಳೆ. ಅತ್ತಿಗೆಯನ್ನು ಬಿಟ್ಟು ನನ್ನ ಬಳಿ ಬಂದರೆ ಮಾತ್ರ ಈ ತಾಳಿ ಕಟ್ಟಿ ಎಂದಿದ್ದಾಳೆ.

66
ನೆಟ್ಟಿಗರ ಪ್ರಶ್ನೆ

ಅದಕ್ಕೇ ನೆಟ್ಟಿಗರು ಅಯ್ಯೋ ದೀಪಾ, ಇವ್ನು ಸೀರಿಯಲ್​ ಗಂಡ ಕಣೆ, ದಡ್ಡ ಶಿಖಾಮಣಿ ಎನ್ನೋದು ಗೊತ್ತಾಗಿಲ್ವಾ, ನಿನ್ನನ್ನಾದ್ರೂ ಬಿಡ್ತಾನೆ, ಅತ್ತಿಗೆಯನ್ನು ಬಿಡಲ್ಲ ಅವ್ನು ಎಂದು ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ದೀಪಾ ಮೇಲೆ ಚಿರು ಮತ್ತಷ್ಟು ಕಿಡಿ ಕಾರಿದ್ರೂ ಕಾರಬಹುದು. ಡಿವೋರ್ಸ್​ ಕೊಟ್ರೂ ಅಚ್ಚರಿಯೇನಿಲ್ಲ ಅಂತಿದ್ದಾರೆ ವೀಕ್ಷಕರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories