Naa Ninna Bidalaare ಅಂಬಿಕಾ ಜೊತೆ ಯಾರೀ ಪುಟಾಣಿ? ಹಿತಾ ರೋಲ್​ ಚೇಂಜ್​ ಆಗೋಯ್ತಾ? ಫ್ಯಾನ್ಸ್​ ಶಾಕ್​

Published : Dec 04, 2025, 06:47 PM IST

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಅಂಬಿಕಾಳ ಆತ್ಮದ ಗುಟ್ಟು ಮಾಳವಿಕಾಗೆ ತಿಳಿದಿದೆ. ಇದರ ನಡುವೆ ನಟಿ ನೀತಾ ಅಶೋಕ್ ಬೇರೊಂದು ಮಗುವಿನೊಂದಿಗೆ ಕಾಣಿಸಿಕೊಂಡಿದ್ದು, ಹಿತಾ ಪಾತ್ರ ಬದಲಾಯಿತೇ ಎಂಬ ಗೊಂದಲಕ್ಕೆ ಕಾರಣವಾಗಿದೆ. ಈ ಲೇಖನವು ಈ ಕುರಿತ ಸತ್ಯಾಂಶ ಇಲ್ಲಿದೆ.  

PREV
17
ದುರ್ಗಾ-ಅಂಬಿಕಾ ಗುಟ್ಟು ರಟ್ಟು

ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್​ನಲ್ಲಿ ಸದ್ಯ ಹಿತಾಳನ್ನು ಮುಗಿಸಿ ಸರ್ವಶಕ್ತಿ ತನ್ನ ವಶ ಮಾಡಿಕೊಳ್ಳಲು ಮಾಳವಿಕಾ ಹೊಂಚು ಹಾಕುತ್ತಿದ್ದಾಳೆ. ಅಷ್ಟಕ್ಕೂ ಅಂಬಿಕಾ ಆತ್ಮ ದುರ್ಗಾಗೆ ಮಾತ್ರ ಕಾಣಿಸುತ್ತಿದೆ. ಆದರೆ ಮಾಟದ ಮಾಯೆಯಿಂದಾಗಿ ಈ ಗುಟ್ಟು ಇದೀಗ ಮಾಳವಿಕಾಗೂ ಗೊತ್ತಾಗಿಬಿಟ್ಟಿದೆ.

27
ಅಮ್ಮನಿಗಾಗಿ ಹಿತಾ ಹಂಬಲ

ಅದೇ ಇನ್ನೊಂದೆಡೆ, ಪುಟಾಣಿ ಹಿತಾ ಅಮ್ಮನಿಗಾಗಿ ಹಂಬಲಿಸುತ್ತಾ ಇದ್ದಾಳೆ. ಕನಸಿನಲ್ಲಿ ಅಮ್ಮ ಬಂದು ಪ್ರೀತಿಯ ಧಾರೆ ಹರಿಸೋದು ಬಿಟ್ಟರೆ ಅಮ್ಮ ಆಕೆಗೆ ಕಾಣಿಸುತ್ತಿಲ್ಲ. ಹಿತಾ ಮತ್ತು ಶರತ್​ನನ್ನು ದೂರ ಮಾಡುವಲ್ಲಿ ಪುನಃ ಕುತಂತ್ರಿಗಳು ಸಕ್ಸಸ್​ ಆಗಿದ್ದಾರೆ.

37
ನೀತಾ ಅಶೋಕ್​- ಮಹಿತಾ

ಅದೇನೇ ಇದ್ದರೂ, ಅಂಬಿಕಾ ಪಾತ್ರಧಾರಿಯಾಗಿರುವ ನೀತಾ ಅಶೋಕ್ (Neetha Ashok) ಹಾಗೂ ಹಿತಾ ಪಾತ್ರಧಾರಿಯಾಗಿರುವ ಮಹಿತಾ (Mahita) ಮಾತ್ರ ಇಡೀ ಸೀರಿಯಲ್​ ಹೈಲೈಟ್​. ಅಮ್ಮ-ಮಗಳ ಬಾಂಧವ್ಯಕ್ಕೆ ವೀಕ್ಷಕರು ಫಿದಾ ಆಗಿರೋದು ಇದೆ. ಸೀರಿಯಲ್​ನಲ್ಲಿ ಮಾತ್ರವಲ್ಲದೇ ರಿಯಲ್​ ಲೈಫ್​ನಲ್ಲಿಯೂ ಸಕತ್​ ಫೇಮಸ್​ ಆಗಿದ್ದಾರೆ. ಇವರಿಬ್ಬರೂ ಹಲವಾರು ರೀಲ್ಸ್​ಗಳನ್ನು ಮಾಡುತ್ತಿರುತ್ತಾರೆ.

47
ಬೇರೊಬ್ಬ ಬಾಲಕಿ

ಆದರೆ ಇದೀಗ ನೀತಾ ಅಶೋಕ್ ಬೇರೊಬ್ಬ ಬಾಲಕಿಯ ಜೊತೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ. ನಾ ನಿನ್ನ ಬಿಡಲಾರೆ ಹಿತಾ ರೋಲ್​ ಚೇಂಜ್​ ಆಗೋಯ್ತಾ ಎಂದು ಒಂದು ಕ್ಷಣ ಸೀರಿಯಲ್​ ಪ್ರೇಮಿಗಳು ಶಾಕ್​ ಆಗಿದ್ದಾರೆ. ಇದಕ್ಕೆ ಕಾರಣ, ಹಿತಾಳ ನಟನಯಿಂದ ಆಕೆಯ ಜಾಗದಲ್ಲಿ ಯಾರನ್ನು ನೋಡಲೂ ವೀಕ್ಷಕರು ಇಷ್ಟಪಡುವುದಿಲ್ಲ.

57
ಯಾರೀ ಬಾಲಕಿ?

ನೀತಾ ಅಶೋಕ್​ ಅವರು ಎರಡು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದು, ಅವರಿನ್ನೂ ರಿಯಲ್​ ಲೈಫ್​ನಲ್ಲಿ ಅಮ್ಮ ಆಗಲಿಲ್ಲ. ಆದ್ದರಿಂದ ಈ ಬಾಲಕಿ ಕೂಡ ಅವರ ಮಗಳಲ್ಲ. ಹಾಗೆಂದು ಹಿತಾ ರೋಲ್​ ಕೂಡ ಬದಲಾಗಿಲ್ಲ. ಬದಲಿಗೆ ಈ ಪುಟಾಣಿ ನೀತಾ ಅವರ ಸಹೋದರನ ಪುತ್ರಿ. ಅತ್ತೆ-ಸೊಸೆ ಜೋಡಿ ಎಂದು ನೀತಾ ಅವರು ಕ್ಯಾಪ್ಷನ್​ ಕೊಟ್ಟಿದ್ದಾರೆ.

67
ಅಂಬಿಕಾ ಅರ್ಥಾತ್​ ನೀತಾ ಅಶೋಕ್​ ಕುರಿತು

ಇನ್ನು ನಟಿ ನೀತಾ ಅಶೋಕ್ ಕುರಿತು ಹೇಳುವುದಾದರೆ, ಇವರು ಅನೂಪ್‌ ಭಂಡಾರಿ (Anoop Bandhari) ನಿರ್ದೇಶನದ 'ವಿಕ್ರಾಂತ್‌ ರೋಣ' ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರು ಅಪರ್ಣಾ ಬಲ್ಲಾಳ್‌ (ಪನ್ನಾ) ಪಾತ್ರದಲ್ಲಿ ನಟಿಸಿದ್ದಾರೆ. ನೀತಾ ನಟಿಸಿರುವುದು ಒಂದೇ ಸಿನಿಮಾದಲ್ಲಿ ಆದರೂ ಅವರ ಫ್ಯಾನ್ಸ್​ ಸಂಖ್ಯೆ ಹೆಚ್ಚಿನ ಮಟ್ಟದಲ್ಲಿ ಇದೆ.

77
ತುಳು ಚಿತ್ರದಲ್ಲಿಯೂ ಮಿಂಚಿಂಗ್​

ವಿಕ್ರಾಂತ್​ ರೋಣದಲ್ಲಿ ನಟಿಸುವ ಮುನ್ನ ಅಂದರೆ 2019ರಲ್ಲಿ ತುಳು ಚಲನಚಿತ್ರ ಜಬರ್ದಸ್ತ್ ಶಂಕರದಲ್ಲಿ ನೀತಾ ನಟಿಸಿದ್ದರು. ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಯಶೋದಾ' ಧಾರಾವಾಹಿಯ ಮೂಲಕವು ಹೆಸರು ಮಾಡಿದ್ದಾರೆ ನೀತಾ ಅಶೋಕ್​. ಇದರಲ್ಲದೇ ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ದೂರದರ್ಶನದಲ್ಲಿ ಹಿಂದಿ ಧಾರಾವಾಹಿಗಳಲ್ಲಿಯೂ ಇವರು ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories