Brahmagantu ದೀಪಾ ಕೈಯಲ್ಲಿ ಮಗು! ಅಬ್ಬಬ್ಬಾ ಇದೇನಿದು ಭಾರಿ ಟ್ವಿಸ್ಟ್‌? ಸೀರಿಯಲ್‌ ಪ್ರಿಯರಿಗೆ ಇಲ್ಲಿದೆ ಚಮಕ್‌!

Published : Nov 05, 2025, 07:49 PM IST

‘ನಾ ನಿನ್ನ ಬಿಡಲಾರೆ’ ಮತ್ತು ‘ಬ್ರಹ್ಮಗಂಟು’ ಸೀರಿಯಲ್‌ಗಳ ಮಹಾಸಂಗಮದ ನಡುವೆ, ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಮಗುವಿನೊಂದಿಗಿನ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಬ್ರಹ್ಮಗಂಟು ಸೀರಿಯಲ್​ನಲ್ಲಿ ದೀಪಾಗೆ ಮಗುವಾಗುತ್ತಾ? ಏನಿದು ಟ್ವಿಸ್ಟ್​?

PREV
19
ಸೀರಿಯಲ್‌ ಮಹಾಸಂಗಮ

ಬ್ರಹ್ಮಗಂಟು (Brahmagantu) ಸೀರಿಯಲ್‌ ಮತ್ತು ನಾ ನಿನ್ನ ಬಿಡಲಾರ ಸೀರಿಯಲ್‌ಗಳ ಮಹಾ ಸಂಗಮ ನಡೆಯುತ್ತಿದೆ. ಇಬ್ಬರ ತಾಳಿಗೂ ಕುತ್ತು ಬಂದಿದೆ ಎಂದು ಹೇಳಿರುವ ಕಾರಣದಿಂದ ಇತ್ತ ದೀಪಾ, ಅತ್ತ ದುರ್ಗಾ ಇಬ್ಬರೂ ವ್ರತ ಆಚರಿಸುತ್ತಿದ್ದಾರೆ.

29
ವ್ರತಕ್ಕೆ ಅಡ್ಡಿ

ಈ ವ್ರತಕ್ಕೆ ಅಡ್ಡಿ ಹಾಕಲು ಸೌಂದರ್ಯ, ಮಾಯಾ ಕುತಂತ್ರ ಅನುಸರಿಸುತ್ತಿದ್ದರೂ, ಸದ್ಯ ಅವರ ಬೆಂಬಲಕ್ಕೆ ಆತ್ಮ ಅಂಬಿಕಾ ನಿಂತಿದ್ದಾಳೆ. ಸದ್ಯ ಸೀರಿಯಲ್‌ ಇಷ್ಟು ಟ್ವಿಸ್ಟ್‌ ಜೊತೆ ಸಾಗಿದೆ.

39
ದೀಪಾಳ ಕೈಯಲ್ಲಿ ಮಗು

ಇದರ ನಡುವೆಯೇ, ದೀಪಾಳ ಕೈಯಲ್ಲಿ ಮಗು ಬಂದಿದೆ. ಮುದ್ದಾದ ಮಗುವಿನ ಜೊತೆ ದೀಪಾ ಆಡುತ್ತಿರುವ ವಿಡಿಯೋ ಅನ್ನುಖುದ್ದು ದೀಪಾ ಅರ್ಥಾತ್‌ ನಟಿ ದಿಯಾ ಪಾಲಕ್ಕಲ್‌ ಅವರು ಶೇರ್‌ ಮಾಡಿಕೊಂಡಿದ್ದಾರೆ.

49
ದೀಪಾ- ಚಿರಾಗ್‌ ಒಂದಾದ್ರಾ?

ಅಂದ ಮೇಲೆ ದೀಪಾ- ಚಿರಾಗ್‌ ಒಂದಾದ್ರಾ ಎಂದು ಕೇಳಬಹುದು. ಅಸಲಿಗೆ ಇದು ಸೀರಿಯಲ್‌ನ ಮಗುವಲ್ಲ. ಬದಲಿಗೆ ದೀಪಾ ಪಾತ್ರಧಾರಿಯಾಗಿರು ದಿಯಾ ಅವರ ಸಹೋದರನ ಪಾಪು. ಅದರ ಜೊತೆ ವಿಡಿಯೋಶೂಟ್‌ ಮಾಡಿಸಿಕೊಂಡಿರೋ ನಟಿ ಸೋಕ್ಯೂಟ್‌ ಎಂದು ಬರೆದುಕೊಂಡಿದ್ದಾರೆ.

59
ಸೀರಿಯಲ್‌ ಫ್ಯಾನ್ಸ್‌ ಆಶಯ

ಸೀರಿಯಲ್‌ನಲ್ಲಿಯೂ ನೀವು ಮತ್ತು ಚಿರಾಗ್ ಒಂದಾಗಿ ಇದೇ ರೀತಿ ಪಾಪು ಬರಲಿ ಎಂದು ಸೀರಿಯಲ್‌ ಪ್ರೇಮಿಗಳು ಹಾರೈಸುತ್ತಿದ್ದಾರೆ.

69
ದಿಯಾ ಪಾಲಕ್ಕಲ್‌

ಅಂದಹಾಗೆ, ನಟಿ ಅಷ್ಟಕ್ಕೂ, ದಿಯಾ ಪಾಲಕ್ಕಲ್​ ನಿಜ ಜೀವನದಲ್ಲಿ ಸುರಸುಂದರಿ. ಸೀರಿಯಲ್​, ಸಿನಿಮಾಗಳಲ್ಲಿ ನಟರನ್ನು ಸುಂದರವಾಗಿ ಕಾಣಿಸುವ ಸಲುವಾಗಿ ಕೆ.ಜಿಗಟ್ಟಲೆ ಮೇಕಪ್​ ಮಾಡುವುದು ಇದೆ. ಆದರೆ ಈ ಸೀರಿಯಲ್​ನಲ್ಲಿ, ದೀಪಾಳನ್ನು ಈ ಪರಿಯಲ್ಲಿ ಕಾಣುವಂತೆ ಮಾಡಲು ಕೂಡ ಮೇಕಪ್​ ಮಾಡಲಾಗುತ್ತಿದೆ.

79
ಒಂದು ಗಂಟೆ ಮೇಕಪ್‌

ನನಗೆ ಕನಿಷ್ಠ ಒಂದು ಗಂಟೆಯಾದ್ರೂ ಕಪ್ಪು ಬಣ್ಣ ಬಳಿಯಲು ಬೇಕು. ಎಲ್ಲರಿಗಿಂತಲೂ ಮೊದಲೇ ನಾನು ಮೇಕಪ್​ಗೆ ಕುಳಿತರೂ ನನ್ನ ಮೇಕಪ್​ ಎಲ್ಲರಿಗಿಂತಲೂ ಕೊನೆಯದಾಗಿ ಆಗುತ್ತದೆ. ಮುಖಕ್ಕೆ ಮೈ, ಹೊಟ್ಟೆ, ಕುತ್ತಿಗೆ, ಬೆನ್ನು ಎಲ್ಲವೂ ಮ್ಯಾಚ್​ ಮಾಡುವುದು ಕಷ್ಟವೇ ಎಂದಿದ್ದರು ದೀಪಾ.

89
ಕನ್ನಡದ ಹುಡುಗಿ

ಅಷ್ಟಕ್ಕೂ ದಿಯಾ, ಕನ್ನಡದ ಹುಡುಗಿ. ಆದರೂ ತಮಿಳು ಸೀರಿಯಲ್​ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್​ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು.

99
ಬ್ರಹ್ಮಗಂಟುವಿನಲ್ಲಿ ನಾಯಕಿ

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಬ್ರಹ್ಮಗಂಟುವಿನಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಗೆಟಪ್ಪೇ ಬದಲಾಗಿದೆ. ಅಂದಹಾಗೆ ದಿಯಾ ಅವರು ಸಿನಿಮಾದಲ್ಲಿಯೂ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು.

ನಟಿಯ ವಿಡಿಯೋ ನೋಡಲು ಇದರ ಮೇಲೆ ಕ್ಲಿಕ್​  ಮಾಡಿ

Read more Photos on
click me!

Recommended Stories