ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಈಗ ದಿಶಾ ಆಗಿ ಸೌಂದರ್ಯಳ ಸೊಕ್ಕಡಗಿಸುತ್ತಿದ್ದಾಳೆ. ಇದೀಗ ದೀಪಾ ಪಾತ್ರಧಾರಿ ದಿಯಾ ಮತ್ತು ಅರ್ಚನಾ ಪಾತ್ರಧಾರಿ ಸನ್ಮಿತಾ ಒಟ್ಟಿಗೆ ಡಾನ್ಸ್ ರೀಲ್ಸ್ ಮಾಡಿದ್ದು, ದೀಪಾ-ಅರ್ಚನಾ ಸ್ನೇಹ ಮತ್ತು ದಿಶಾ-ಅರ್ಚನಾ ಪ್ರೀತಿಯಲ್ಲಿ ಯಾವ ಜೋಡಿ ಇಷ್ಟ ಎಂದು ಪ್ರಶ್ನಿಸಿದ್ದಾರೆ.
ಬ್ರಹ್ಮಗಂಟು (Brahmagantu) ಸೀರಿಯಲ್ನಲ್ಲಿ ಸದ್ಯ ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ ಮುಂದುವರೆಯುತ್ತಿದೆ. ದೀಪಾಳನ್ನು ಬದಲಾಯಿಸಬಾರದೇ ಎಂದು ಪದೇ ಪದೇ ವೀಕ್ಷಕರು ಕೇಳ್ತಾನೆ ಬಂದಿದ್ದರು. ಇದೀಗ ದೀಪಾ ದಿಶಾ ಆಗಿ ಸೌಂದರ್ಯಳನ್ನು ಮಟ್ಟ ಹಾಕ್ತಿರೋದನ್ನು ನೋಡುವುದು ಎಂದರೆನೇ ವೀಕ್ಷಕರಿಗೆ ಖುಷಿಯೋ ಖುಷಿ.
26
ಚಮಕ್ ಕೊಡ್ತಿರೋ ದೀಪಾ
ಒಟ್ಟಿನಲ್ಲಿ ದೀಪಾ ದಿಶಾ ಆಗಿ ಎಲ್ಲರಿಗೂ ಚಮಕ್ ಕೊಡುತ್ತಿದ್ದಾಳೆ. ಹೆಜ್ಜೆ ಹೆಜ್ಜೆಗೂ ಸೌಂದರ್ಯಗಳಿಗೆ ಅವಮಾನ ಮಾಡುತ್ತಾ, ಆಕೆಯ ಸೊಕ್ಕನ್ನು ಅಡಗಿಸುತ್ತಿದ್ದಾಳೆ. ದಿಶಾಳ ಜೊತೆ ಒಂದೇ ಒಂದು ಮಾತನಾಡಲು ಸೌಂದರ್ಯ ಕಾದು ಕುಳಿತುಕೊಳ್ಳುವಂಥ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾಳೆ ದೀಪಾ.
36
ಸೌಂದರ್ಯಳ ಸೊಕ್ಕಡಗಿಸ್ತಿರೋ ದೀಪಾ
ಇದೀಗ ಕಾಡಿ ಬೇಡಿದ ಮೇಲೆ ಚಿರು ಕಂಪೆನಿಯಲ್ಲಿ ಕೆಲಸ ಮಾಡಲು ದಿಶಾ ಒಪ್ಪಿಕೊಂಡಿದ್ದಾಳೆ. ಈ ಸಮಯದಲ್ಲಿಯೂ ಸೌಂದರ್ಯಳ ಸೊಕ್ಕನ್ನು ಎಷ್ಟು ಮುರಿಯಬೇಕೋ ಅಷ್ಟನ್ನು ಮುರಿಯುತ್ತಿದ್ದಾಳೆ. ದಿಶಾಳಿಗಾಗಿ ವಿಶೇಷ ಟೀ ರೆಡಿ ಮಾಡಿಸಿರುವುದಾಗಿ ಸೌಂದರ್ಯ ಹೇಳಿದಾಗ, ನನಗೆ ಕೆಲಸ ಮುಖ್ಯ ಇವೆಲ್ಲಾ ಬೇಡ ಎಂದು ತಿರುಗೇಟು ಕೊಟ್ಟಿದ್ದಾಳೆ. ಜೊತೆಗೆ ಸೌಂದರ್ಯ ಹೇಳಿರೋ ಡ್ರೆಸ್ಗಳನ್ನು ರಿಜೆಕ್ಟ್ ಮಾಡಿ, ತನ್ನದೇ ಸ್ಟೈಲಿಷ್ ಡ್ರೆಸ್ ಬಗ್ಗೆ ಚಿರುನ ಮನಸ್ಸನ್ನು ಒಲಿಸಿದ್ದಾಳೆ.
ಇಂತಿಪ್ಪ ದೀಪಾ ಉರ್ಫ್ ದಿಶಾಳ ರಿಯಲ್ ಹೆಸರು ದಿಯಾ ಪಾಲಕ್ಕಲ್. ದೀಪಾಳನ್ನು ದಿಶಾ ಆಗಿ ಬದಲಾಯಿಸಿ ಎಲ್ಲರ ಪ್ರೀತಿಗೆ ಕಾರಣವಾಗಿರುವವಳು ಅರ್ಚನಾ. ಆಕೆಯ ಸ್ವಭಾವದಿಂದ ಅರ್ಚನಾ ಎಂದರೆ ವೀಕ್ಷಕರಿಗೆ ಎಲ್ಲಿಲ್ಲದ ಪ್ರೀತಿ. ಅರ್ಚನಾ ಪಾತ್ರಧಾರಿಯ ರಿಯಲ್ ಹೆಸರು ಸನ್ಮಿತಾ ಪಿ. (Sanmitha P.)
56
ದೀಪಾ- ಅರ್ಚನಾ ಡಾನ್ಸ್
ಇದೀಗ ಇಬ್ಬರೂ ಸೇರಿ ರೀಲ್ಸ್ ಮಾಡಿದ್ದಾರೆ. ಸಕತ್ ಸ್ಟೆಪ್ ಹಾಕಿದ್ದಾರೆ. ಅರ್ಚನಾ ಸೀರಿಯಲ್ ಗೆಟಪ್ ಸೀರೆಯಲ್ಲಿ ಇದ್ದರೆ, ದೀಪಾ ದಿಶಾ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾಳೆ. ಇಬ್ಬರೂ ನಟಿಯರು ರೀಲ್ಸ್ ಮಾಡಿ ಮೋಡಿ ಮಾಡಿದ್ದಾರೆ.
66
ಪ್ರಶ್ನೆ ಕೇಳಿರೋ ನಟಿ
ಇದೀಗ ದೀಪಾ ಉರ್ಫ್ ದಿಯಾ ಅವರು ಈ ವಿಡಿಯೋ ಅನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಒಂದು ಪ್ರಶ್ನೆ ಕೇಳಿದ್ದಾರೆ. ಅದೇನೆಂದರೆ, ನಿಮಗೆ ಅರ್ಚನಾ ಮತ್ತು ದೀಪಾಳ ಸ್ನೇಹ ಸಂಬಂಧ ಇಷ್ಟನಾ ಅಥವಾ ಅರ್ಚನಾ ಮತ್ತು ದಿಶಾಳ ಪ್ರೀತಿ ಗಮನ ಸೆಳೆಯುತ್ತಾ? ಯಾವ ಜೋಡಿ ನಿಮಗೆ ಇಷ್ಟ ಎಂದು ಕೇಳಿದ್ದಾರೆ.