ಏನೂ ಬದಲಾಗಿಲ್ಲ, ಜೀವದ ಗೆಳೆಯ ಸಿಕ್ಕಿದ್ದು ಖುಷಿಯಾಗಿದೆ; ಬಿಗ್ ಬಾಸ್ ಬಳಿಕ ಭೇಟಿಯಾದ ರಾಕೇಶ್-ಅಮೂಲ್ಯಾ ಗೌಡ

First Published Jan 10, 2023, 4:35 PM IST

ಬಿಗ್ ಬಾಸ್ ಬಳಿಕ ರಾಕೇಶ್ ಅಡಿಗ ಮತ್ತು ಅಮೂಲ್ಯಾ ಗೌಡ ಇಬ್ಬರೂ ಭೇಟಿಯಾಗಿದ್ದು ಫೋಟೋ ಶೇರ್ ಮಾಡಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 9 ಮುಕ್ತಾಯವಾಗಿ ಅನೇಕ ದಿನಗಳೇ ಕಳೆಯಿತು. ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ರೂಪೇಶ್ ಶೆಟ್ಟಿ ಹೊರಹೊಮ್ಮಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ ಮುಗಿಸಿದ ಬಳಿಕ ಸ್ಪರ್ಧಿಗಳು ಭೇಟಿಯಾಗಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.  

ಇದೀಗ ರಾಕೇಶ್ ಅಡಿಗ ಮತ್ತು ಅಮೂಲ್ಯಾ ಗೌಡ ಇಬ್ಬರೂ ಭೇಟಿಯಾಗಿದ್ದಾರೆ. ಕೆಫೆಯಲ್ಲಿ ಒಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಕೇಶ್ ಜೊತೆ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿಯನ್ನು ಅಮೂಲ್ಯಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಅಂದಹಾಗೆ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಮತ್ತು ಅಮೂಲ್ಯಾ ನಡುವೆ ಉತ್ತಮ ಸ್ನೇಹ ಬಾಂಧವ್ಯ ಬೆಳೆದಿತ್ತು. ಇಬ್ಬರೂ ಹೆಚ್ಚು ಕ್ಲೋಸ್ ಆಗಿದ್ದರು. ರಾಕೇಶ್ ಒಟಿಟಿ ಬಿಗ್ ಬಾಸ್ ಗೆದ್ದು ಟಿವಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಒಟಿಟಿಯಲ್ಲಿ ಸೋನು ಗೌಡ ಜೊತೆ ಆಪ್ತರಾಗಿದ್ದರು. ಬಳಿಕ ಟಿವಿ ಬಿಗ್ ಬಾಸ್ ನಲ್ಲಿ ಅಮೂಲ್ಯಾ ಗೌಡ ಜೊತೆ ಸ್ನೇಹ ಬೆಳೆಸಿಕೊಂಡರು. 

ರಾಕೇಶ್ ಮತ್ತು ಅಮೂಲ್ಯಾ ನಡುವೆ ಸ್ನೇಹಕ್ಕಿಂತ ಬಿಗಿಲಾದ ಬಂಧವಿದೆ ಎನ್ನುವ ಮಾತು ಕೇಳಿ ಬಂದಿತ್ತು. ಬಿಗ್ ಬಾಸ್ ಮುಗಿದ ಬಳಿಕವೂ ಇಬ್ಬರೂ ಇಬ್ಬರ ಸ್ನೇಹ ಸಂಬಂಧ ಹಾಗೆ ಇದೆ. ಇದೀಗ ಇಬ್ಬರೂ ಭೇಟಿಯಾಗಿದ್ದು ಫೋಟೋ ಹಂಚಿಕೊಂಡಿದ್ದಾರೆ. 

'ಯೆಸ್, ನಾವು ಭೇಟಿಯಾದೆವು.  ಏನೂ ಬದಲಾಗಿಲ್ಲ. ಬಿಗ್‌ಬಾಸ್ ಮನೆಯಲ್ಲಿ ಜೀವದ ಗೆಳೆಯ ಸಿಕ್ಕಿದ್ದಕ್ಕೆ ಖುಷಿಯಾಗಿದೆ. ನೀವು ನನಗೆ ತುಂಬಾ ಕಲಿಸಿದ್ದೀರಿ ಮತ್ತು ನೀವು ಪ್ಯೂರ್ ಸೋಲ್. ನಿಮ್ಮಂತೆ ಶಾಂತವಾಗಿ ಹೇಗೆ ಇರುತ್ತಾರೆ ಎಂದು ನಾನು ಆಶ್ವರ್ಯ ಪಡುತ್ತೇನೆ' ಎಂದು ಹೇಳಿದ್ದಾರೆ. 

ಇಬ್ಬರ ಫೋಟೋಗಳಿಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನಿಮ್ಮಿಬ್ಬರ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ. ಇನ್ನು ಕೆಲವರು ಸೂಪರ್ ಜೋಡಿ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸೋನು ಗೌಡ ಅವರನ್ನು ಯಾವಾಗ ಭೇಟಿ ಮಾಡ್ತೀರಿ ಎಂದು ಕೇಳುತ್ತಿದ್ದಾರೆ. ಮೇಡ್ ಫಾರ್ ಈಚ್ ಅದರ್ ಎಂದು ಹೇಳುತ್ತಿದ್ದಾರೆ. 

click me!