ಸೈಕೋ ಜಯಂತ್‌ಗೆ ನರಕ ತೋರಿಸಿದ ಜಾನು; ಇದು ಚಿನ್ನುಮರಿಯ 2.O ಅಧ್ಯಾಯ, ವೀಕ್ಷಕರು ಹ್ಯಾಪಿ

Published : Apr 06, 2026, 10:14 AM IST

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಹಿಂದೆ ತನ್ನ ಸೈಕೋ ಗಂಡ ಜಯಂತ್‌ಗೆ ಹೆದರುತ್ತಿದ್ದ ಜಾನು ಈಗ ಸಂಪೂರ್ಣ ಬದಲಾಗಿದ್ದಾಳೆ. ತಾನು ಅನುಭವಿಸಿದ ಕಷ್ಟಗಳನ್ನೇ ಜಯಂತ್‌ಗೆ ನೀಡಿ, ಆತನಿಗೆ ನರಕ ದರ್ಶನ ಮಾಡಿಸುತ್ತಿದ್ದಾಳೆ. ಈ ಹೊಸ ತಿರುವು ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

PREV
15
ಬಹುದೊಡ್ಡ ರೋಚಕ ತಿರುವು

ಜೀ ಕನ್ನಡದ ಲಕ್ಷ್ಮೀ ನಿವಾಸ ಸೀರಿಯಲ್‌ ಬಹುದೊಡ್ಡ ರೋಚಕ ತಿರುವು ಪಡೆದುಕೊಂಡಿದೆ. ಕಳೆದ ಎರಡು ವರ್ಷಗಳಿಂದ ಸೈಕೋ ಗಂಡ ಜಯಂತ್‌ ಕಾಣ್ತಿದ್ದಂತೆ ಓಡಿ ಹೋಗ್ತಿದ್ದ ಜಾನು, ಇದೀಗ ಆತನಿಗೆ ನರಕ ಅಂದ್ರೆ ಏನು ಅಂತ ತೋರಿಸುತ್ತಿದ್ದಾಳೆ. ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಎರಡು ವರ್ಷ ಹಿಂದೆಯೇ ಈ ಕೆಲಸ ಮಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

25
ಜಯಂತ್ ಅಂದ್ರೆ ಭಯವಿಲ್ಲ

ಗೆಳೆಯ ವಿಶ್ವನಿಂದಾಗಿ ಜಾನು ಮತ್ತೆ ತಾಯಿ ಮಡಿಲು ಸೇರಿದ್ದಾಳೆ. ಇದೀಗ ಮನೆಮಂದಿಯೆಲ್ಲಾ ಸೇರಿಕೊಂಡು ಜಯಂತ್‌ನನ್ನು ಕರೆಸಿ ಆತನೊಂದಿಗೆ ಜಾಹ್ನವಿಯನ್ನು ಕಳಿಸಿದ್ದಾರೆ. ಈ ಮೊದಲು ಜಯಂತ್ ಅಂದ್ರೆ ಕನಸಿನಲ್ಲಿಯೂ ಬೆಚ್ಚಿಬೀಳುತ್ತಿದ್ದ ಜಾನು, ಇದೀಗ ಸಂಪೂರ್ಣವಾಗಿ ಬದಲಾಗಿದೆ. ಈ ಹಿಂದೆ ತಾನು ಅನುಭವಿಸಿದ ಎಲ್ಲಾ ಕಷ್ಟಗಳನ್ನು ಜಯಂತ್‌ಗೆ ಅರ್ಥ ಮಾಡಿಸುವ ಪ್ರಯತ್ನದಲ್ಲಿದ್ದಾನೆ.

35
ಜಯಂತ್ ಸೈಕೋ

ಜಯಂತ್ ಸೈಕೋ, ಕೊಲೆಗಾರನಾದರೂ ಜಾನುಗೆ ಪ್ರೀತಿಯ ಆರಾಧಕ. ಆಕೆಗೆ ಏನು ಮಾಡೋದಕ್ಕೆ ಜಯಂತ್ ಸಿದ್ಧ. ಜಯಂತ್‌ನ ಈ ನಡವಳಿಕೆಯನ್ನು ಜಾನು ಬಂಡವಾಳವಾಗಿ ಮಾಡಿಕೊಂಡಿದ್ದು, ತನಗೆ ಬೇಕಾದಂತೆ ಸೈಕೋ ಗಂಡನನ್ನು ಜಾನು ಕುಣಿಸುತ್ತಿದ್ದಾಳೆ. ಮೊದಲ ರಾತ್ರಿ ಜಾನುಗೆ ಹೆದರಿಸಿದ್ದ ಜಿರಳೆಯನ್ನು ಜಯಂತ್ ಹಾಲಿನಲ್ಲಿ ಹಾಕಿಕೊಂಡು ಕುಡಿದಿದ್ದನು. ಇದೀಗ ಜಯಂತ್ ಬೇಡ ಅಂದ್ರೂ ಜಯಂತ್‌ಗೆ ಜಿರಳೆ ಹಾಕಿರೋ ಹಾಲನ್ನು ಕುಡಿಸಿದ್ದಾಳೆ.

45
ಜಯಂತ್ ರಕ್ತ ನೋಡಿದ ಚಿನ್ನುಮರಿ

ಈ ಹಿಂದೆ ಜಾನುಗೆ ಗುಲಾಬಿ ನೀಡಿ ಅದರಲ್ಲಿರುವ ಮುಳ್ಳುಗಳು ಆಕೆ ಕೈಗಳಿಗೆ ಗಾಯವಾಗುವಂತೆ ಜಯಂತ್ ಮಾಡಿದ್ದನು. ಇದೀಗ ಜಯಂತ್‌ ಕೈಗೆ ಗುಲಾಬಿಗಳನ್ನು ನೀಡಿ ಆತನ ಕೈಯಿಂದ ರಕ್ತ ಹರಿಸಿದ್ದಾಳೆ. ಜಯಂತ್ ಕೈಯಲ್ಲಿನ ರಕ್ತ ನೋಡಿದ ಜಾನು ಖುಷಿಯಾಗಿದ್ದಾಳೆ. ಇದೀಗ ಜಾನುಗೆ ನೀಡಿದ ಒಂದೊಂದೇ ಕಷ್ಟಗಳು ಜಯಂತ್ ಅನುಭವಿಸುತ್ತಿದ್ದಾನೆ.

55
ಅದ್ದೂರಿ ಪ್ರೋಮೋ

ಇಂದಿನ ಪ್ರೋಮೋವನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಿದ್ದು, ವೀಕ್ಷಕರು ಮುಂದಿನ ಸಂಚಿಕೆ ನೋಡಲು ಕಾಯುತ್ತಿರೋದಾಗಿ ಕಮೆಂಟ್ ಮಾಡ್ತಿದ್ದಾರೆ. ಈ ವಾರದ ಕಿಚ್ಚನ ಚಪಾಳೇ ನಮ್ಮ ಜಾನು ಬೇಬಿಗೆ, ಪ್ರೋಮೋ ಸಖತ್ ಥ್ರಿಲ್ ಆಗಿದೆ. ಹಿಂಸೆ ಮಾಡೋರಿಗೆ ಹೀಗೆ ಮಾಡಬೇಕು. ಆಗ ಅವರಿಗೆ ಅರ್ಥ ಆಗುತ್ತದೆ. ಏನಪ್ಪಾ ಹಿಂಗಾ ಟ್ವಿಸ್ಟ್ ಕೊಡೋದಾ, ತಲೆ ಕೆಡುತ್ತಿದೆ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories