ಐದನೇ ಬಾರಿಗೆ, ಆರು ಮಕ್ಕಳ ತಂದೆ ಆಗ್ತಿರೋ Bigg Boss ಸ್ಪರ್ಧಿ; ಸಾಕು, ಸಿಲ್ಲಿಸಿ-ತರಾಟೆಗೆ ತಗೊಂಡ ವೀಕ್ಷಕರು

Published : Feb 15, 2026, 11:18 AM IST

Bigg Boss: ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿದ್ದ ಯುಟ್ಯೂಬರ್ ಅರ್ಮಾನ್‌ ಮಲಿಕ್‌ ಅವರು ಐದನೇ ಬಾರಿಗೆ ತಂದೆ ಆಗುತ್ತಿದ್ದಾರೆ. ಈ ಬಾರಿ ಕೂಡ ಅವಳಿ ಮಕ್ಕಳು ಜನಿಸಲಿದ್ದಾರಂತೆ.‌ ಈಗಾಗಲೇ ನಾಲ್ಕು ಮಕ್ಕಳ ತಂದೆ ಆಗಿರೋ ಅರ್ಮಾನ್‌, ಶೀಘ್ರದಲ್ಲೇ ಆರು ಮಕ್ಕಳ ತಂದೆ ಆಗಲಿದ್ದಾರೆ. 

PREV
15
7 ದಿನದಲ್ಲೇ ಲವ್‌, ಮದುವೆ

ಅರ್ಮಾನ್‌ ಮಲಿಕ್‌ ಅವರು ಪಾಯಲ್‌ ಅವರನ್ನು ಭೇಟಿಯಾಗಿ ಏಳು ದಿನಕ್ಕೆ ಲವ್‌ ಮಾಡಿ ಮದುವೆಯಾಗಿದ್ದರು. ಪಾಯಲ್ ಪಾಲಕರ ವಿರೋಧದಲ್ಲಿ‌ ಈ ಮದುವೆ ನಡೆದಿತ್ತು. ಇದಾದ ಬಳಿಕ ಇವರಿಗೆ ಓರ್ವ ಮಗ ಚಿರಾಗ್‌ ಜನಿಸಿದ್ದನು. ಪಾಯಲ್‌ ಅವರ ಸ್ನೇಹಿತೆ ಕೃತಿಕಾ ಕೂಡ ಪದೇ ಪದೇ ಪಾಯಲ್‌ ಮನೆಗೆ ಬರುತ್ತಿದ್ದರು.

25
ಪತ್ನಿಯ ಗೆಳೆತಿಯನ್ನೇ ಮತ್ತೆ ಮದುವೆಯಾದ್ರು

ಒಮ್ಮೆ ಟ್ರಿಪ್‌ ಪ್ಲ್ಯಾನ್‌ ಮಾಡಿದ್ದು, ಕೃತಿಕಾ ಅವರು ಪಾಯಲ್‌ ಮನೆಗೆ ಬಂದಿದ್ದರು. ಆಮೇಲೆ ಆ ಟ್ರಿಪ್‌ ಕ್ಯಾನ್ಸಲ್‌ ಆಯ್ತು. ಕೃತಿಕಾ ಮೇಲೆ ಅರ್ಮಾನ್‌ ಅವರಿಗೆ ಲವ್‌ ಆಗಿ ಏಳೇ ದಿನಕ್ಕೆ ಇವರಿಬ್ಬರು ಮದುವೆಯಾದರು. ಪಾಯಲ್‌ ಇದರಿಂದ ಬೇಸರಗೊಂಡು ಒಂದು ವರ್ಷಗಳ ಕಾಲ ಮನೆಯಿಂದ ದೂರ ಆದರು.

35
ಅವಳಿ ಮಕ್ಕಳಿಗೆ ಜನನ

ಪಾಯಲ್‌ ಹಾಗೂ ಅರ್ಮಾನ್‌ ಮತ್ತೆ ಹತ್ತಿರ ಆಗಿದ್ದರು. ಅರ್ಮಾನ್‌ ಹಾಗೂ ಕೃತಿಕಾ ಮಾಡಿದ ತಪ್ಪನ್ನು ಪಾಯಲ್‌ ಕ್ಷಮಿಸಿದ್ದಾರೆ. ಈ ಮೂವರು ಒಂದೇ ಮನೆಯಲ್ಲಿದ್ದಾರೆ. ಪಾಯಲ್‌ ಹಾಗೂ ಕೃತಿಕಾ ಏಕಕಾಲಕ್ಕೆ ಗರ್ಭಿಣಿಯಾಗಿದ್ದರು. ಈ ವಿಷಯ ಮಾತ್ರ ದೊಡ್ಡ ಸಂಚಲನ ಮೂಡಿಸಿತ್ತು. ಕೃತಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ 20 ದಿನಗಳ ಬಳಿಕ, ಪಾಯಲ್‌ ಅವರು ಅವಳಿ ಮಕ್ಕಳಿಗೆ ಜನಿಸಿದ್ದಾರೆ. ಅವಳಿ ಮಕ್ಕಳಲ್ಲಿ ಒಂದು ಗಂಡು, ಒಂದು ಹೆಣ್ಣು ಆಗಿದೆ.

45
ಪಾಯಲ್‌ ಮತ್ತೆ ಗರ್ಭಿಣಿ

ಈಗ ಪಾಯಲ್‌ ಮತ್ತೆ ಗರ್ಭಿಣಿಯಾಗಿದ್ದು, ಮತ್ತೆ ಅವಳಿ ಮಕ್ಕಳು ಎನ್ನಲಾಗುತ್ತಿದೆ. ಮೊದಲ ಪತ್ನಿಯಿಂದ ಮೂವರು ಮಕ್ಕಳು, ಎರಡನೇ ಪತ್ನಿಯಿಂದ ಓರ್ವ ಮಗ ಇರುವ ಅರ್ಮಾನ್‌ ಈಗ ಮತ್ತೆ ತಂದೆಯಾಗುತ್ತಿದ್ದು, ಅದು ಅವಳಿ ಮಕ್ಕಳು ಎನ್ನೋದು ವಿಶೇಷವಾಗಿದೆ.

55
‌ಮತ್ತೆ ತಂದೆ ಆಗ್ತಿರೋ ಅರ್ಮಾನ್

ಅರ್ಮಾನ್‌ ಮಲಿಕ್‌ ಅವರು ಪದೇ ಪದೇ ತಂದೆ ಆಗುತ್ತಿರೋದು ನೋಡಿ, ಅನೇಕರು ಬೇಸರ ಹೊರಹಾಕಿದ್ದಾರೆ. ನಾಲ್ಕು ಮಕ್ಕಳಿದ್ದರೂ ಕೂಡ, ಮತ್ತೆ ತಂದೆ ಆಗುತ್ತಿದ್ದಾರೆ, ಜನಸಂಖ್ಯೆ ಜಾಸ್ತಿ ಆಯ್ತು, ನಿಲ್ಲಿಸಿ ಎಂದೆಲ್ಲ ಕಾಮೆಂಟ್‌ ಮಾಡಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories