ಭೂತಾಯಿ ಮೀನಂತಿದ್ದೋಳು ಬಂಗಡೆ ಥರ ಆದ್ರೆ ಹೇಗೆ ಪ್ರಪೋಸ್​ ಮಾಡೋದು ಅನು ಡಿಯರ್​?

Published : Feb 14, 2026, 09:34 PM IST

ಕಿರುತೆರೆಯಲ್ಲಿ ಬಹುಬೇಡಿಕೆಯ ಆ್ಯಂಕರ್ ಆಗಿರುವ ಅನುಶ್ರೀ, ತಮ್ಮ ನಿರರ್ಗಳ ಮಾತಿನಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ಕೋರಿಯೋಗ್ರಫರ್ ಒಬ್ಬರು ಅವರನ್ನು 'ಬಂಗಡೆ ಮೀನು' ಎಂದು ಹಾಸ್ಯ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.  

PREV
16
ಭಾರಿ ಡಿಮಾಂಡ್​

ಆ್ಯಂಕರ್​ ಅನುಶ್ರೀ (Anchor Anushree) ಅವರಿಗೆ ಕಿರುತೆರೆಯಲ್ಲಿ ಭಾರಿ ಡಿಮಾಂಡ್​ ಇರುವುದು ಗೊತ್ತೇ ಇದೆ. ಜೀ ಟಿವಿ, ಕಲರ್ಸ್​ ಕನ್ನಡ ಸೇರಿದಂತೆ ಕೆಲವು ಚಾನೆಲ್​ಗಳಲ್ಲಿ ಇವರು ಆ್ಯಂಕರಿಂಗ್​ ಮಾಡಿದ್ದಾರೆ. ಯಾವ ರಿಯಾಲಿಟಿ ಷೋ ನೋಡಿದರೂ ಅದರಲ್ಲಿ ಅನುಶ್ರೀ ಅವರೇ ಇರುತ್ತಾರೆ. ಇಂಥ ರಿಯಾಲಿಟಿ ಷೋ ಎಂದರೆ ಸಾಕು, ಅದರ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾತನಾಡಬಲ್ಲೆ, ಇದಕ್ಕೇ ತಮಗೆ ಅಷ್ಟು ಡಿಮಾಂಡ್​ ಇರುವುದು ಎಂದು ಕೂಡ ಅನುಶ್ರೀ ಅವರು ಹೇಳಿದ್ದಾರೆ. ಈ ಮೂಲಕ ಇವರಿಗೆ ಅಷ್ಟು ಬೇಡಿಕೆ ಯಾಕೆ ಎನ್ನುವುದು ಗೊತ್ತಾಗುತ್ತದೆ.

26
ಆ್ಯಂಕರಿಂಗ್​ನಲ್ಲಿ ಪಳಗಿದ ಅನುಶ್ರೀ

ಪಟಪಟ ಎಂದು ಮಾತನಾಡುತ್ತಾ, ವೇದಿಕೆಯ ಮೇಲೆ ಆ ಸನ್ನಿವೇಶಕ್ಕೆ ತಕ್ಕಂತೆ ಆ ವಿಷಯವನ್ನು ಹೇಳುತ್ತಾ, ಸದಾ ಎಲ್ಲರನ್ನೂ ನಕ್ಕು ನಗಿಸೋರು ಎಂದರೆ ಅವರು ಆ್ಯಂಕರ್​ ಅನುಶ್ರೀ ಎನ್ನುವ ಮಾತಿದೆ. ಆ್ಯಂಕರಿಂಗ್​ ಎನ್ನುವ ಕಲೆ ಬೇಕು ಎಂದರೆ ಕರಗತವಾಗುವಂಥದ್ದಲ್ಲ. ಅದರಲ್ಲಿಯೂ ರಿಯಾಲಿಟಿ ಷೋ ಸಕ್ಸಸ್​ ಮಾಡುವಲ್ಲಿ ಆ್ಯಂಕರ್ಸ್​ ಪಾತ್ರ ಬಹು ಮುಖ್ಯವಾಗಿರುತ್ತದೆ. ಅವರಿಗೆ ಹೀಗೆಯೇ ಮಾತನಾಡಬೇಕು ಎಂದು ಮೊದಲೇ ಸ್ಕ್ರಿಪ್ಟ್​ ನೀಡುತ್ತಾರೆಯಾದರೂ, ಎಲ್ಲವೂ ಸ್ಕ್ರಿಪ್ಟ್​ನಿಂದಲೇ ನಡೆಯುವಂಥ ಕಲೆ ಆ್ಯಂಕರಿಂಗ್​ ಅಲ್ಲ. ಆ ಕ್ಷಣದಲ್ಲಿ, ಆ ಪರಿಸ್ಥಿತಿಗೆ ತಕ್ಕಂತೆ ಮಾತನಾಡುವ, ಜನರನ್ನು ನಗಿಸುವ ಕಲೆ ಸುಲಭವೂ ಅಲ್ಲ. ಅದು ಒಲಿದಿರುವುದು ಆ್ಯಂಕರ್​ ಅನುಶ್ರೀ ಅವರಂಥ ಕೆಲವೇ ಕೆಲವು ಆ್ಯಂಕರ್​ಗಳಿಗೆ.

36
ಡಿಕೆಡಿ ವೇದಿಕೆಯಲ್ಲಿ...

ಇದೀಗ ಅವರು ಡಾನ್ಸ್​ ಕರ್ನಾಟಕ ಡಾನ್ಸ್​ ವೇದಿಕೆಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಸಂದರ್ಭದಲ್ಲಿ, ಡಿಕೆಡಿಯ ಎಲ್ಲಾ ಕೋರಿಯೋಗ್ರಫರ್​ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ರು. ಆ ಸಂದರ್ಭದಲ್ಲಿ ನಡೆದ ಹಾಸ್ಯದ ತುಣುಕೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್​ ಆಗಿದೆ.

46
ಬಂಗಡೆಯಾದ ಅನುಶ್ರೀ

ಅದೇನೆಂದರೆ, ಕೋರಿಯೋಗ್ರಫರ್​ ಒಬ್ಬರು, ಅನುಶ್ರೀ ಅವರಿಗೆ, ಭೂತಾಯಿ ಮೀನಿನಂತಿದ್ದೋಳು, ಬಂಗಡೆ ಮೀನಿನ ರೀತಿ ಆದ್ರೆ ಹೇಗೆ ಪ್ರಪೋಸ್​ ಮಾಡೋದು ಅಂತನಾ ಗೊತ್ತಾಗ್ತಿಲ್ಲ ಎಂದಿದ್ದಾರೆ! ಭೂತಾಯಿಗೆ ಪ್ರಪೋಸ್​ ಮಾಡ್ಲಾ, ಬಂಗಡೆ ಮೀನಿಗೋ ಎಂದಾಗ ಅನುಶ್ರೀ ಸದ್ಯ ಬಂಗಡೆ ಮೀನಿಗೆ ಮಾಡು ಎಂದಾಗ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ. ಇದರ ಪ್ರೊಮೋ ಅನ್ನು ವಾಹಿನಿ ಬಿಡುಗಡೆ ಮಾಡಿದೆ.

56
20 ವರ್ಷಗಳ ಸಂಭ್ರಮ

ಅಷ್ಟಕ್ಕೂ ಈಚೆಗಷ್ಟೇ ಅರ್ಥಾತ್​ ಕಳೆದ ಜನವರಿ 25ರಂದು ಅನುಶ್ರೀ ಅವರು 38ನೇ ವರ್ಷಕ್ಕೆ ಕಾಲಿಟ್ಟರು. ಆದರೆ, 18ನೇ ವಯಸ್ಸಿನಲ್ಲಿಯೇ ಆ್ಯಂಕರಿಂಗ್​ ಕ್ಷೇತ್ರಕ್ಕೆ ಬಂದಿರೋ ಅನುಶ್ರೀ ಅವರ ಈ ಪಯಣಕ್ಕೆ ಇದೀಗ 20 ವರ್ಷಗಳ ಸಂಭ್ರಮ. ಇದನ್ನು ಜೀ ಕನ್ನಡ ವೇದಿಕೆ ಸೆಲಬ್ರೇಟ್​ ಮಾಡಿತ್ತು. ಈ ಸಂದರ್ಭದಲ್ಲಿ, ತಾವು ಅನುಭವಿಸಿದ ಕಷ್ಟದ ದಿನಗಳನ್ನು ನೆನೆದು ಅನುಶ್ರೀ ಭಾವುಕರಾದರು. ವೇದಿಕೆಯ ಮೇಲೆಯೇ ಕಣ್ಣೀರಾಗಿದ್ದರು.

66
ನೋವಿನ ಹಾದಿ

ಯಾವುದೇ ಕ್ಷೇತ್ರದ ಸೆಲೆಬ್ರಿಟಿಯ ಹಿನ್ನೆಲೆ, ಬಾಲ್ಯ ತೆಗೆದುಕೊಂಡಾಗ, ಅದರಲ್ಲಿ ನೋವಿನ ಹಾದಿಗಳೇ ತುಂಬಿರುತ್ತದೆ. ಅದೇ ರೀತಿ ಅನುಶ್ರೀ ಅವರೂ ಇಂದು ಈ ಮಟ್ಟಕ್ಕೆ ಬೆಳೆಯಬೇಕು ಎಂದರೆ, ಅದರ ಹಿಂದೆ ನೋವಿನ ಹಾದಿಗಳಿವೆ, ಮುಳ್ಳಿನ ಮೇಲೆ ನಡೆದ ದಿನಗಳಿವೆ. ಅದನ್ನೇ ನೆನೆದು ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈಚೆಗಷ್ಟೇ ಮದುವೆಯಾಗಿರುವ ಅನುಶ್ರೀ ಯಾವಾಗ ಗುಡ್​ನ್ಯೂಸ್​​ ಕೊಡ್ತಾರೆ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories