ಅಬ್ಬಬ್ಬಾ! 16ನೇ ವೆಡ್ಡಿಂಗ್ ಅನಿವರ್ಸರಿಗೆ ವಿನಯ್ ಬರೆದಿರುವ ಪತ್ರ ನೋಡಿ ಎಲ್ಲರೂ ಶಾಕ್

First Published Jun 15, 2024, 12:32 PM IST

ವಿವಾಹ ವಾರ್ಷಿಕೋತ್ಸವಕ್ಕೆ ಸ್ಪೆಷಲ್ ವಿಶ್ ಮಾಡಿದ ವಿನಯ್ ಗೌಡ. ಇಷ್ಟೋಂದು ರೊಮ್ಯಾಂಟಿಕಾ ನಮ್ ಹುಡುಗ ಎಂದ ನೆಟ್ಟಿಗರು....

ಕನ್ನಡ ಕಿರುತೆರೆಯ ಮಹಾ ಶಿವ, ಬಿಗ್ ಬಾಸ್ ವಿನಯ್ ಗೌಡ ಮತ್ತು ಪತ್ನಿ ಅಕ್ಷತಾ ಇಂದು 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಪತ್ನಿಗಾಗಿ ವಿನಯ್ ಬರೆದಿರುವ ಪೋಸ್ಟ್‌ ಇದು.

 ನನ್ನ ಪ್ರೀತಿಯ ಡಾರ್ಲಿಂಗ್ ಹೆಂಡತಿ, ನಾವಿಬ್ಬಿರೂ ಕೈ ಕೈ ಹಿಡಿದು ಒಟ್ಟಿಗೆ ಜೀವನ ನಡೆಯಲು ನಿರ್ಧರಿಸಿ ಇಂದಿಗೆ 16 ವರ್ಷ ಕಳೆದಿದೆ ಎಂದು ವಿನಯ್ ಬರೆದುಕೊಂಡಿದ್ದಾರೆ. 

ಈ ಅದ್ಭುತವಾದ ಜರ್ನಿಯನ್ನು ನೆನಪಿಸಿಕೊಂಡರೆ ನನ್ನ ಮನಸ್ಸಿನ ತುಂಬಾ ಪ್ರೀತಿ ಮತ್ತು ಕೃತಜ್ಞತೆ ತುಂಬಿದೆ. ಬಾಲ್ಯ ಸ್ನೇಹಿತರಿಂದ ಸೋಲ್‌ಮೆಟ್‌ಗಳವರೆಗೂ ನಮ್ಮ ಬಾಂಡ್‌ ಒಂದೊಳ್ಳೆ ಪ್ರೀತಿ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ. 

ಪತ್ನಿಯಾಗಿ ನೀನು ನನ್ನ ವಿಶ್ವಾಸ, ನನ್ನ ರಾಕ್ ಮತ್ತು ನನ್ನ ದೊಡ್ಡ ಸಂತೋಷವಾಗಿದ್ದೆ. ನಾವು ಸೃಷ್ಟಿ ಮಾಡಿಕೊಂಡಿರುವ ನೆನಪುಗಳು, ನಾವು ಎದುರಿಸಿರುವ ಚಾಲೇಂಜ್‌ಗಳು, ನಾವು ಹಂಚಿಕೊಂಡ ಕನಸುಗಳು ಪ್ರೀತಿಯ ವಸ್ತ್ರವನ್ನು ಹೆಣೆದಿವೆ, ಅದು ಪದಗಳನ್ನು ವ್ಯಕ್ತಪಡಿಸುವುದಕ್ಕಿಂತ ಹೆಚ್ಚು ನಾನು ಪ್ರೀತಿಸುತ್ತೇನೆ.

ನಮ್ಮ ಮದುವೆ ಇಷ್ಟು ಸುಂದರವಾಗಿರಲು ಕಾರಣ ಕೇವಲ ಖುಷಿ ಸಂತೋಷಗಳಿಂದ ಮಾತ್ರವಲ್ಲ ನಂಬಿಕೆ ಮತ್ತು ಪ್ರೀತಿಯ ಅಡಿಪಾಯ ಹಾಕಿರುವುದಕ್ಕೆ.

ನಿಜವಾದ ಲೈಫ್‌ ಪಾರ್ಟನರ್‌ ಹೇಗಿರುತ್ತಾರೆಂದು ತೋರಿಸಿಕೊಟ್ಟಿರುವೆ, ಇಲ್ಲಿ ಪ್ರೀತಿ ಮತ್ತು ನಂಬಿಕೆ ಒಟ್ಟಿಗೆ ಸೇರಿ ಒಂದೊಳ್ಳೆ ಮ್ಯಾಜಿಕ್‌ ಕ್ರಿಯೇಟ್ ಮಾಡಿದೆ.

ನನ್ನ ಬೆಸ್ಟ್‌ ಫ್ರೆಂಡ್‌, ನನ್ನ ದೃಢ ಸಂಗಾತಿ ಹಾಗೂ ಲವ್‌ ಅಫ್‌ ಮೈ ಲೈಫ್‌. ಇದು ನಮ್ಮ ಜರ್ನಿ ಹೀಗೆ ಒಟ್ಟಿಗೆ ವರ್ಷಗಳಷ್ಟು ಖುಷಿ ಮತ್ತು ಸಂತೋಷ ಕಾಣೋನ ಎಂದಿದ್ದಾರೆ ವಿನಯ್.

Latest Videos

click me!