ಜೀ ವಾಹಿನಿಯ ಕುಂಕುಮ್ ಭಾಗ್ಯ ಮತ್ತು ಕುಂಡಲಿ ಭಾಗ್ಯ ಧಾರಾವಾಹಿಗಳು ಅಂಜುಮ್ ಫಕ್ಹಿಗೆ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿವೆ. ಸಂಪ್ರದಾಯಬದ್ಧವಾದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಅಂಜುಮ್ ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ ಅಂತ ಹೇಳಿಕೊಂಡಿದ್ದಾರೆ.
ಅಂಜುಮ್ ಮೂಲತಃ ಮಹಾರಾಷ್ಟ್ರದ ರತ್ನಗಿರಿಯ ನಿವಾಸಿಯಾಗಿದ್ದಾರೆ. ಸಂದರ್ಶನದಲ್ಲಿ ಬಣ್ಣದ ಲೋಕಕ್ಕೆ ಹೇಗೆ ಪ್ರವೇಶವಾಯ್ತು? ಕುಟುಂಬಸ್ಥರ ಬೆಂಬಲ ಇತ್ತಾ ಅಥವಾ ಇಲ್ಲವಾ ಎಂಬಿತ್ಯಾದಿ ವಿಷಯಗಳ ಕುರಿಯಿ ಅಂಜುಮ್ ಮಾತನಾಡಿದ್ದಾರೆ.
ನಮ್ಮ ಕುಟುಂಬ ಕಟ್ಟುನಿಟ್ಟಾಗಿ ಎಲ್ಲಾ ನಿಯಮಗಳನ್ನು ಪಾಲಿಸುತ್ತದೆ. ಟಿವಿ ನೋಡೋದ ಸಹ ತಪ್ಪು ಎಂಬ ನಂಬಿಕೆ ಕುಟುಂಬಸ್ಥರಲ್ಲಿದೆ. ನಾನು 9ನೇ ಕ್ಲಾಸ್ ಓದುತ್ತಿರುವಾಗ ತಂದೆ ಮನೆಗೆ ಹೊಸದಾಗಿ ಟಿವಿ ತಂದಿದ್ದರು. ಟಿವಿ ತಂದ ಕಾರಣ ಅಜ್ಜ ನಮ್ಮ ಮನೆಗೆ ಎರಡು ವರ್ಷ ಬಂದಿರಲಿಲ್ಲ. ಸಂಪ್ರದಾಯ ಪಾಲನೆ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಯೋಚನೆಯನ್ನು ಪೋಷಕರು ಹೊಂದಿದ್ದರು.
ನನ್ನ ತಂದೆಗೆ ನಾನು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಆಸೆ ಇತ್ತು. ಆದ್ರೆ 2009ರಲ್ಲಿ ಶಿಕ್ಷಣ ನಿಲ್ಲಿಸಿ ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿಷಯ ತಿಳಿಸಿದಾಗ ತಂದೆ ತುಂನಾ ನೊಂದುಕೊಂಡಿದ್ದರು. ಈ ಸಮಯದಲ್ಲಿ ಜಗಳವೇ ಆಗಿತ್ತು.
ಮಾಡೆಲಿಂಗ್ ಆಯ್ಕೆ ಮಾಡಿಕೊಂಡ ನಮ್ಮ ಮೊದಲ ಅಸೈನ್ಮೆಂಟ್ ಗೋವಾದಲ್ಲಿ ನಿಗದಿಯಾಗಿತ್ತು. ಫೋಟೋಶೂಟ್‌ಗಾಗಿ ಬಿಕಿನಿ ಧರಿಸುವ ಅನಿವಾರ್ಯತೆ ಎದುರಾಯ್ತು ಎಂದು ಅಂಜುಮ್ ಹೇಳಿಕೊಂಡಿದ್ದಾರೆ.
ಬಿಕಿನಿ ಧರಿಸಿ ಫೋಟೋ ಕ್ಲಿಕ್ಕಿಸಿಕೊಂಡ ವಿಷಯ ತಿಳಿಯತ್ತಲೇ ಪೋಷಕರು ಒಂದು ವರ್ಷ ನನ್ನ ಜೊತೆ ಮಾತನಾಡಲಿಲ್ಲ. ಒಂದು ರೀತಿ ನಾನು ಮನೆಯಿಂದನೇ ದೂರವಾಗಿದ್ದೆ. ಕಾಲಕ್ರಮೇಣ ಪೋಷಕರು ನನ್ನ ಕೆಲಸವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಅಂಜುಮ್ ತಾವು ನಡೆದ ಬಂದ ದಾರಿಯನ್ನು ವಿವರಿಸಿದ್ದಾರೆ.
ಮಾಡೆಲಿಂಗ್ ಜೊತೆ ಹಲವು ಧಾರಾವಾಹಿ ಅವಕಾಶಗಳು ನನಗೆ ಸಿಕ್ಕಿವೆ. ನನ್ನನ್ನು ತೆರೆಯ ಮೇಲೆ ಪೋಷಕರು ಸಲ್ವಾರ್-ಕಮೀಜ್ ನಂತಹ ಸಾಂಪ್ರದಾಯಿಕ ಉಡುಗೆಯಲ್ಲಿ ನೋಡಲು ಇಷ್ಟಪಡ್ತಾರೆ ಎಂಬ ವಿಷಯವನ್ನು ಅಂಜುಮ್ ಹಂಚಿಕೊಂಡಿದ್ದಾರೆ.