Bigg Boss: ಗಿಲ್ಲಿ ನಟ- ಕಾವ್ಯಾ ಶೈವ ಮದ್ವೆಗೆ ತುಕಾಲಿ ಸಂತೋಷ್‌ ಗ್ರೀನ್​ ಸಿಗ್ನಲ್​! ಮಾಜಿ ಸ್ಪರ್ಧಿ ಏನ್‌ ಹೇಳಿದ್ರು ಕೇಳಿ!

Published : Nov 18, 2025, 09:16 PM IST

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ತಮಾಷೆಯ ಲವ್‌ ಸ್ಟೋರಿ ಸದ್ದು ಮಾಡುತ್ತಿದೆ. ಈ ಪ್ರೇಮಕಥೆಯನ್ನು ಆಟದ ಭಾಗ ಎಂದಿರುವ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್, ಅವರು ನಿಜವಾಗಿಯೂ ಇಷ್ಟಪಟ್ಟರೆ ತಾವೇ ಮುಂದೆ ನಿಂತು ಮದುವೆ ಮಾಡಿಸುವುದಾಗಿ ಹೇಳಿದ್ದಾರೆ.

PREV
16
ಬಿಗ್‌ಬಾಸ್‌ ಲವ್‌ ಸ್ಟೋರಿ

ಸದ್ಯ ಬಿಗ್‌ಬಾಸ್‌ (Bigg Boss) ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಲವ್‌ ಸ್ಟೋರಿ ನಡೆಯುತ್ತಿದೆ. ತಮಾಷೆಯಾಗಿ ಈ ಜೋಡಿ ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರನ್ನೂ ಲವ್‌ಬರ್ಡ್ಸ್ ರೀತಿ ರಂಜಿಸುತ್ತಿದ್ದಾರೆ.

26
ಕಾವು ಕಾವು..

ಗಿಲ್ಲಿ ನಟ ಸದಾ ತಮಾಷೆ ಮಾಡುವ ಕಾರಣ, ಕಾವ್ಯಾ ಅವರನ್ನು ಕಾವು ಕಾವು ಎನ್ನುತ್ತಾ ರೇಗಿಸುತ್ತಿರುತ್ತಾರೆ. ಜೊತೆಗೆ ಕಾವ್ಯಾ ಬಗ್ಗೆ ಲವ್‌ ಸಾಂಗ್‌ ಕ್ರಿಯೇಟ್‌ ಮಾಡಿ ಹಾಡುತ್ತಾರೆ, ಕವನ ಓದುತ್ತಾರೆ.

36
ಗಿಲ್ಲಿ ನಟ- ಕಾವ್ಯಾ ಶೈವ

ಇದೇ ಕಾರಣಕ್ಕೆ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಹೆಸರು ಸಕತ್‌ ಫೇಮಸ್‌ ಆಗಿದೆ. ಹಾಗೆಂದು ಇವರಿಬ್ಬರೂ ಎಲ್ಲಿಯೂ ಗಡಿಯನ್ನು ಮೀರಿದವರಲ್ಲ. ಬಿಗ್‌ಬಾಸ್‌ನಲ್ಲಿ ಪ್ರೀತಿ-ಪ್ರೇಮದ ವಿಷಯದಲ್ಲಿ ಹಿಂದೆ ಕೆಲವು ಸ್ಪರ್ಧಿಗಳು ಯಾವ ರೀತಿ ನಡೆದುಕೊಂಡಿದ್ದರು ಎನ್ನುವುದು ವೀಕ್ಷಕರಿಗೆ ತಿಳಿದದ್ದೇ. ಆದರೆ ಇವರ ವಿಚಾರದಲ್ಲಿ ಹಾಗಿಲ್ಲ.

46
ಮದುವೆಗೆ ಸಜ್ಜು

ಅದೇನೇ ಇದ್ದರೂ ಇದೀಗ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ತುಕಾಲಿ ಸಂತೋಷ್‌ ಅವರು ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಮದುವೆಗೆ ಸಜ್ಜಾಗಿದ್ದಾರೆ!

56
ಇದೂ ಒಂದು ಆಟನೇ

ಈ ಬಗ್ಗೆ ತುಕಾಲಿ ಅವರು, ಗಿಲ್ಲಿ ಸಕತ್‌ ಆಗಿ ಆಡುತ್ತಿದ್ದಾನೆ. ಕಾವ್ಯಾ ಜೊತೆ ಲವ್‌ಸ್ಟೋರಿನೂ ಒಂದು ಆಟನೇ. ಆದರೆ ಅವನ ಮನಸ್ಸಿನಲ್ಲಿ ಕಾವ್ಯಾ ಬಗ್ಗೆ ಏನಿದ್ಯೋ ಗೊತ್ತಿಲ್ಲ. ಒಂದು ವೇಳೆ ಅವನು ನಿಜವಾಗಿಯೂ ಮದುವೆಯಾಗಲು ಇಷ್ಟಪಟ್ಟರೆ ನಾನೇ ಮುಂದೆ ನಿಂತು ಮದುವೆ ಮಾಡಿಸುತ್ತೇನೆ ಎಂದಿದ್ದಾರೆ!

66
ಗಿಲ್ಲಿ ಬಗ್ಗೆ ಶ್ಲಾಘನೆ

ಇದೇ ವೇಳೆ ಗಿಲ್ಲಿಯ ನಡತೆ ಬಗ್ಗೆ ಶ್ಲಾಘಿಸಿರುವ ತುಕಾಲಿ ಸಂತೋಷ್‌, ಆತ ತುಂಬಾ ಒಳ್ಳೆಯ ಹುಡುಗ. ಆತನೇ ವಿನ್‌ ಆಗಬೇಕು, ತುಂಬಾ ಚೆನ್ನಾಗಿ ಆಡುತ್ತಿದ್ದಾನೆ ಎಂದೂ ಹೇಳಿದ್ದಾರೆ.

Read more Photos on
click me!

Recommended Stories