ಬಿಗ್ಬಾಸ್ ಕನ್ನಡ ಸೀಸನ್ 12 ರ ಮೊದಲ ದಿನವೇ ಸ್ಪರ್ಧಿಗಳಿಗೆ ದಿನಸಿ ಟಾಸ್ಕ್ ನೀಡಲಾಯಿತು. ಆದರೆ, ಸ್ಪರ್ಧಿ ಮಲ್ಲಮ್ಮನವರಿಂದಾದ ಒಂದು ಸಣ್ಣ ತಪ್ಪಿನಿಂದಾಗಿ ಇಡೀ ಮನೆಗೆ ದಿನಸಿ ಸಾಮಗ್ರಿಗಳು ಸಿಗದೆ, ಉಪವಾಸ ಇರುವ ಪರಿಸ್ಥಿತಿ ಎದುರಾಗಿದೆ. ಇದರಿಂದ ಮನೆಯ ಸದಸ್ಯರೆಲ್ಲರೂ ಮಲ್ಲಮ್ಮನ ಮೇಲೆ ಕೋಪಗೊಂಡಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಆರಂಭವಾಗಿದ್ದು, ಇಂದು ಮೊದಲ ದಿನದ ಆಟವನ್ನು ಸ್ಪರ್ಧಿಗಳು ಶುರುವಿಟ್ಟುಕೊಂಡಿದ್ದಾರೆ. ಇದಾಗಲೇ ಸ್ಪರ್ಧಿಗಳಿಗೆ ಟಾಸ್ಕ್ ಕೂಡ ಶುರುವಾಗಿದೆ. ಆರಂಭದಲ್ಲಿ ಒಂಟಿ-ಜಂಟಿ ಎಂದು ಎರಡು ಗ್ರೂಪ್ ಮಾಡಲಾಗಿದೆ. ಇದರಲ್ಲಿ ಸ್ಪರ್ಧಿಗಳು ಭಾರಿ ಪೈಪೋಟಿ ನಡೆಸಿ ಆಟ ಶುರುವಿಟ್ಟುಕೊಂಡಿದ್ದಾರೆ.
28
ಶಾಪಿಂಗ್ ಮಾಲ್ ಕಮಾಲ್
ಇದರ ನಡುವೆಯೇ ಬಿಗ್ಬಾಸ್ ಶಾಪಿಂಗ್ ಮಾಡಲು ಮಾಲ್ಗೆ ಹೋದವರಿಗೆ ಒಂದು ಸರ್ಪ್ರೈಸ್ ಗಿಫ್ಟ್ ಇಟ್ಟಿತ್ತು. ಇದು ಬಿಗ್ಬಾಸ್ ಪ್ರಮೋಷನ್ಗೆ. ಅದರಲ್ಲಿ ಒಂದು ಟಾಸ್ಕ್ ನೀಡಲಾಗಿತ್ತು.
38
ಕಣ್ಣು ಹುಡುಕಿದ್ರೆ ಗಿಫ್ಟ್
ಬಿಗ್ಬಾಸ್ 12ರ ಕಣ್ಣುಗಳನ್ನು ಈ ಮಾಲ್ನ ಚಾಕಲೇಟ್ ಕೌಂಟರ್ನಲ್ಲಿ ಇಡಲಾಗಿತ್ತು. ಅದನ್ನು ತಂದು ಕೊಟ್ಟವರಿಗೆ ಭರ್ಜರಿ ಗಿಫ್ಟ್ ಎಂದು ಅನೌನ್ಸ್ ಮಾಡಲಾಗಿತ್ತು. ಬೇಗ ಶುರುವಿಟ್ಟುಕೊಳ್ಳಿ ಎಂದು ಹೇಳಲಾಗಿತ್ತು. ಅದರಂತೆಯೇ ಕೆಲವರು ಕಣ್ಣುಗಳನ್ನು ಹುಡುಕಿ ಗಿಫ್ಟ್ ಪಡೆದುಕೊಂಡಿದ್ದಾರೆ.
ಗಿಫ್ಟ್ ಪಡೆದುಕೊಂಡವರ ಸಂತಸಕ್ಕೆ ಪಾರವೇ ಇಲ್ಲ. ಖುಷಿಯಿಂದ ಎಲ್ಲರೂ ತೇಲಾಡಿದ್ದಾರೆ. ತಮಗೆ ಮೊದಲೇಗೊತ್ತಾಗಲಿಲ್ಲವಲ್ಲ ಎಂದುಕೊಂಡು ಕೆಲವು ನೆಟ್ಟಿಗರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
58
ಮೊದಲ ದಿನದ ಟಾಸ್ಕ್ ಹೀಗೆ
ಇನ್ನು ಬಿಗ್ಬಾಸ್ ಮನೆಯ ಮೊದಲ ದಿನ ಟಾಸ್ಕ್ ಕುರಿತು ಹೇಳುವುದಾದರೆ, ಮೊದಲ ಟಾಸ್ಕ್ನಲ್ಲಿ ಮೊದಲ ದಿನದ ಟಾಸ್ಕ್ ಮನೆಗೆ ಬೇಕಾದ ಅಂದರೆ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿ ಮಾಡುವುದು. ಇದಕ್ಕೆ ಇಟ್ಟಿದ್ದ ಷರತ್ತು ಒಂಟಿ ತಂಡದಲ್ಲಿರುವ ಸದಸ್ಯರು ಮಾತ್ರ ಮನೆಯ ದಿನಸಿ ಸಾಮಗ್ರಿಗಳ ಆಯ್ಕೆ ಮಾಡಬೇಕು ಎನ್ನುವುದು.
68
ಮಲ್ಲಮ್ಮನ ಎಡವಟ್ಟು
ತಮಗೆ ಟಾಸ್ಕ್, ಎಲಿಮಿನೇಷನ್ ಎಂದ್ರೆ ಏನು ಎಂದು ತಿಳಿದಿಲ್ಲ ಎಂದು ಮೊದಲೇ ಹೇಳಿದ್ದ ಮಲ್ಲಮ್ಮ ಆರಂಭದಲ್ಲಿಯೇ ಎಡವಿದ್ದಾರೆ. ಮನೆ ಪಡೆಯುವ ದಿನಸಿ ಸಾಮಗ್ರಿಗಳ ನಿರ್ಧಾರ ಒಂಟಿಗಳದ್ದೇ ಆಗಿರುತ್ತದೆ ಎಂದು Bigg Boss ಹೇಳಿದ್ದರೂ ಅದು ಮಲ್ಲಮ್ಮನವರಿಗೆ ಅರ್ಥವಾಗಲಿಲ್ಲ.
78
ಮಲ್ಲಮ್ಮ ಫುಲ್ ಕನ್ಫ್ಯೂಸ್
ಬಳಿಕ ನೆಲದ ಮೇಲೆ ಒಂದು ಗುರುತು ಹಾಕಲಾಗಿದೆ ಅದರ ಮೇಲೆ ನಿಲ್ಲಿ ಎಂದು ಬಿಗ್ ಬಾಸ್ ಮಲ್ಲಮ್ಮ ಅವರಿಗೆ ಹೇಳಿದ್ದಾರೆ. ಆದರೆ, ಮಲ್ಲಮ್ಮ ಅವರಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ.. ಬಿಗ್ ಬಾಸ್ ಪದೇ ಪದೇ ಗುರುತಿನ ಮೇಲೆ ನಿಲ್ಲಿ ಎಂದು ಹೇಳಿದರು ಮಲ್ಲಮ್ಮಗೆ ಅದು ಅರ್ಥವಾಗಿಲ್ಲ.
88
ಉಪವಾಸವೇ ಗತಿಯಾಯ್ತಾ?
ಅದಾದ ನಂತರ ಬಿಗ್ ಬಾಸ್, ನೀವು ಏನು ಆಯ್ಕೆ ಮಾಡುತ್ತೀರೋ ಆ ಸಂಪೂರ್ಣ ಬುಟ್ಟಿಯನ್ನು ಅಲ್ಲಿಯೇ ಇರುವ ಟೇಬಲ್ ಮೇಲೆ ಇಡತಕ್ಕದ್ದು. ಮನೆ ಯಾವುದೇ ದಿನಸಿ ಸಾಮಗ್ರಿಗಳನ್ನು ಪಡೆಯುವುದಿಲ್ಲ ಎಂದಿದ್ದಾರೆ. ಇದರಿಂದ ಮನೆಯವರಿಗೆ ಬೇಸರ ಮೂಡಿದೆ. ಊಟಕ್ಕೆ ಏನು ಮಾಡುವುದು ಎಂದು ಟೆನ್ಶನ್ ಮಾಡಿಕೊಂಡಿದ್ದಾರೆ. ಸದ್ಯ ಮಲ್ಲಮ್ಮನ ಮೇಲೆ ಮನೆಯವರಿಗೆ ಕೋಪಬಂದಿದೆ. ಊಟಕ್ಕಿಲ್ಲದೇ ಉಪವಾಸವೇ ಗತಿಯಾಯ್ತಾ ನೋಡಬೇಕಿದೆ.