ಜಲಪಾತದ​ ಮುಂದೆ ನಿಂತು ಮಳೆ ಹೇಳುವ ಕಥೆ ಆಲಿಸಿ ಅಂದಿದ್ಯಾಕೆ ಅನುಪಮಾ ಗೌಡ!

First Published | Aug 3, 2024, 9:58 PM IST

ಅನುಪಮಾ ಗೌಡ ನಟಿಯಾಗಿ, ನಿರೂಪಕಿಯಾಗಿ ಗುರುತಿಸಿಕೊಂಡಿದ್ದು, ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಮಿಂಚಿದ್ದಾರೆ. ಸದ್ಯ ಇದೀಗ ಹೊಸ ಜಾಗದಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 

ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಮತ್ತು ಕಿರುತೆರೆ ನಟಿ ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೆಯೇ ಇದೀಗ ಜಲಪಾತದ​ ಮುಂದೆ ನಿಂತು ಪೋಸ್ ಕೊಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

ಫಾಲ್ಸ್ ಮುಂದೆ ನಿಂತು ಅನುಪಮಾ ಗೌಡ ವಿಭಿನ್ನವಾಗಿ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ ಒಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ. ಈ ಲೈನ್ ಸಹ ವಿಶೇಷವಾದ ಫೀಲ್ ಕೂಡ ಕೊಡುತ್ತದೆ.

Tap to resize

'ನಿಶ್ಚಲರಾಗಿರಿ ಮತ್ತು ಮಳೆಯು ನಿಮಗೆ ಹೇಳುವ ಕಥೆಯನ್ನು ಆಲಿಸಿ' ಅಂತ ಬರೆದುಕೊಂಡಿದ್ದಾರೆ. ಇಂಗ್ಲೀಷ್‌ನಲ್ಲಿಯೇ ಬರೆದುಕೊಂಡ ಈ ಸಾಲು Be still and listen to the story that the rain is telling you ಅಂತ ಇದೆ.

ಇನ್ನು ಅನುಪಮಾ ಗೌಡ ಇರುವ ಫಾಲ್ಸ್ ಯಾವುದು ಅಂತ ಹೇಳಿಲ್ಲ, ಹಾಗಾಗಿ ನೆಟ್ಟಿಗರು ಇದು ಯಾವ ಜಾಗ, ಎಲ್ಲಿ ಬರುತ್ತದೆ, ನಿಮ್ಮ ಫೋಟೋಸ್ ಸೂಪರ್, ಬ್ಯೂಟಿಫುಲ್, ಹುಷಾರಾಗಿರಿ ಮೇಡಂ ಅಂತೆಲ್ಲ ತರೇಹವಾರಿ ಕಮೆಂಟ್‌ಗಳನ್ನು ಮಾಡಿದ್ದಾರೆ.

ನಿರೂಪಕಿಯಾಗಿ ಎಲ್ಲರ ಮನಸ್ಸು ಗೆದ್ದಿರುವ ಅನುಪಮಾ ಗೌಡ. ಮೊದಲು ಅಕ್ಕ ಎಂಬ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದು, ಬಿಗ್‌ಬಾಸ್‌ಗೆ ಹೋಗಿ ಬಂದ ನಂತರ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಎಲ್ಲರ ಮನ ಗೆಲ್ಲುತ್ತಿದ್ದಾರೆ.

ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟವಂತೆ. ಆಗಾಗ ಟ್ರಿಪ್ ಹೋಗುತ್ತಾ ಇರ್ತಾರೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗೊದು ಕೂಡಾ ಇನ್ನೂ ಇಷ್ಟವಂತೆ.

ಸದ್ಯ ಅನುಪಮಾ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ನಂತರ ಮಜಾ ಭಾರತ ಹಾಸ್ಯ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು. ಇದಾದ ಮೇಲೆ ಮತ್ತೆ ನನ್ನಮ್ಮ ಸೂಪರ್ ಸ್ಟಾರ್, ರಾಜಾ ರಾಣಿ, ಸುವರ್ಣ ಸೂಪರ್ ಸ್ಟಾರ್ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. 
 

Latest Videos

click me!