Bigg Boss Sonu Srinivas Gowda: ಸೋನು ಶ್ರೀನಿವಾಸ್ ಗೌಡ ಅವರು ಒಂದಿಲ್ಲೊಂದು ವಿಚಾರಕ್ಕೆ ಸದ್ದು ಮಾಡುತ್ತಾರೆ. ಆಗಾಗ ವಿದೇಶಕ್ಕೆ ಟ್ರಿಪ್ ಹೋಗುವ ಸೋನು ಈ ಬಾರಿ ಇನ್‌ಸ್ಟಾಗ್ರಾಮ್ ಆದಾಯದಿಂದ ಅಚ್ಚರಿಗೊಳಿಸಿದ್ದಾರೆ. ಡಬಲ್ ಡಿಗ್ರಿ ಮಾಡಿದವರಿಗೂ ಇಷ್ಟು ಹಣ ಸಿಗೋದಿಲ್ಲ.
Bigg Boss Sonu Srinivas Gowda: ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಶನ್ ಎಂಬ ಆಪ್ಶನ್ ಬಂದಿದೆ. ಕೆಲವೊಂದು ವಿಡಿಯೋ, ಫೋಟೋಗಳನ್ನು ಸಬ್‌ಸ್ಕ್ರಿಪ್ಶನ್ ಆಪ್ಶನ್ ಕೊಡುತ್ತಾರೆ, ಆಗ ಹಣ ಕೊಟ್ಟು ಆ ಕಂಟೆಂಟ್‌ಗಳನ್ನು ನೋಡಬೇಕು. ಇದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
25
ಕನ್ನಡದಲ್ಲಿ ಯಾರು ಆ ಆಪ್ಶನ್ ಕೊಟ್ಟಿದ್ದಾರೆ
ಕನ್ನಡದಲ್ಲಿ ಸದ್ಯಕ್ಕೆ ನಟಿ ಸೋನು ಶ್ರೀನಿವಾಸ್ ಗೌಡ, ನಟಿ ಶ್ವೇತಾ ಆರ್ ಪ್ರಸಾದ್, ನಟಿ ತನಿಷಾ ಕುಪ್ಪಂಡ ಅವರು ಸಬ್‌ಸ್ಕ್ರೈಬ್ ಆಪ್ಶನ್ ನೀಡಿದ್ದಾರೆ. ಇದರಲ್ಲಿ ಏನಿರುತ್ತದೆ ಎಂಬುದು ಆಪ್ಶನ್ ಕೊಟ್ಟವರಿಗೆ, ಸಬ್‌ಸ್ಕ್ರೈಬ್ ಆದವರಿಗೆ ಮಾತ್ರ ಗೊತ್ತಿರುತ್ತದೆ.
35
ಸಬ್‌ಸ್ಕ್ರೈಬ್ ಆಗಿ ನೋಡುವಂಥದ್ದು ಏನಿರುತ್ತದೆ?
ಸೋನು ಶ್ರೀನಿವಾಸ್ ಗೌಡ ಅವರ ಅಕೌಂಟ್‌ನಲ್ಲಿ ಸಬ್‌ಸ್ಕ್ರೈಬ್ ಆಪ್ಶನ್ ಇದ್ದು, ಮೇಲ್ನೋಟಕ್ಕೆ ಬೋಲ್ಡ್ ಫೋಟೋಗಳು ಕಾಣುತ್ತಿವೆ. ಈ ರೀತಿ ಆಪ್ಶನ್‌ಗಳಲ್ಲಿ BTS ವಿಡಿಯೋ, ಪರ್ಸನಲ್ ವಿಷಯಗಳಿರುತ್ತವೆ ಎಂದು ಕೆಲವರು ಹೇಳೋದುಂಟು. ಸಬ್‌ಸ್ಕ್ರೈಬ್ ಆಗಿ ನೋಡುವಂಥ ಕಂಟೆಂಟ್ ಏನು ಇರುತ್ತದೆ? ಏನು ಮಾಹಿತಿ ನೀಡುತ್ತಾರೆ ಎಂದು ಅವರೇ ಹೇಳಬೇಕು.
ಈ ರೀತಿ ಸಬ್‌ಸ್ಕ್ರೈಬ್ ಆದವರಿಗೆ ಹಣ ಕೂಡ ಬರುವುದು. ಸೋನು ಗೌಡ ಅವರ ಖಾತೆಗೆ ಸಬ್‌ಸ್ಕ್ರೈಬ್ ಆಗಲು ತಿಂಗಳಿಗೆ 390 ರೂಪಾಯಿ ಕೊಡಬೇಕು. ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಕೂಡ ಇಷ್ಟು ಹಣ ಕೇಳೋದಿಲ್ಲ.
55
ಇನ್‌ಸ್ಟಾಗ್ರಾಮ್‌ನಲ್ಲಿ ಸೋನು ಗೌಡ ತಿಂಗಳ ಆದಾಯ ಎಷ್ಟು?
ತಿಂಗಳಿಗೆ 390 ರೂಪಾಯಿ ಇದ್ದು, ಈಗಾಗಲೇ 335 ಜನರು ಸಬ್‌ಸ್ಕ್ರೈಬ್ ಆಪ್ಶನ್ ತಗೊಂಡಿದ್ದಾರೆ ಎಂದರೆ ಒಟ್ಟಾರೆಯಾಗಿ ತಿಂಗಳಿಗೆ ಸೋನು ಗೌಡ ಅಕೌಂಟ್‌ಗೆ 130650 ರೂಪಾಯಿ ಬರುತ್ತದೆ. ಅಂದಹಾಗೆ ನಟಿ ತನಿಷಾ ಕುಪ್ಪಂಡ, ಶ್ವೇತಾ ಆರ್ ಪ್ರಸಾದ್ ಅವರು ಕಡಿಮೆ ರೇಟ್ ಫಿಕ್ಸ್ ಮಾಡಿದ್ದು, ಆದಾಯ ಕಡಿಮೆ ಎನ್ನಬಹುದು. ಅದೇನೇ ಇರಲಿ, ಸೋನು ಗೌಡ ಅವರು ಡಬಲ್ ಡಿಗ್ರಿ ಓದಿದವರಿಗಿಂತ, ಇಂಜಿನಿಯರಿಂಗ್ ಮಡಿದವರಿಗಿಂತ ಜಾಸ್ತಿ ಹಣ ಪಡೆಯುತ್ತಿದ್ದಾರೆ ಎನ್ನೋದು ಈಗ ಇರುವ ಅಸಲಿ ವಿಷಯ.
ಇದರ ಜೊತೆಗೆ ಯುಟ್ಯೂಬ್‌ನಿಂದಲೂ ಲಕ್ಷಾಂತರ ರೂಪಾಯಿ ಹಣ ಸಿಗುತ್ತದೆ. ಇನ್ನು ಪ್ರಮೋಶನ್‌ನಿಂದಲೂ ಹಣ ಬರುತ್ತಿದೆ. ಒಟ್ಟಿನಲ್ಲಿ ಸೋನು ಶ್ರೀನಿವಾಸ್ ಗೌಡ ಅವರು ತಿಂಗಳಿಗೆ 3-4 ಲಕ್ಷ ರೂಪಾಯಿ ದುಡಿಯುತ್ತಿದ್ದಾರೆ ಎಂದರೆ ನಂಬಲೇಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.