ಹೈದರಾಬಾದ್‌ ನಲ್ಲಿ ನಡೆದ ಕನ್ನಡ ಬಿಗ್‌ಬಾಸ್‌ 11 ಶೂಟಿಂಗ್, ಪ್ರೋಮೋ ರಿಲೀಸ್‌ಗೆ ಮುಹೂರ್ತ ಫಿಕ್ಸ್!

First Published | Aug 12, 2024, 9:10 PM IST

ಕನ್ನಡದಲ್ಲಿ ಬಿಗ್ ಬಾಸ್‌ ಸೀಸನ್ 11 ಯಾವಾಗ ಶುರುವಾಗುತ್ತೆ ಎಂದು ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇದೀಗ ಬಿಗ್ ಅಪ್ಡೇಟ್‌ ಒಂದು ಲೀಕ್ ಆಗಿದೆ.

ಬಿಗ್‌ಬಾಸ್‌ 10ನೇ ಸೀಸನ್‌ ಮುಗಿದು ವರ್ಷವಾಗುತ್ತಾ ಬಂತು ಇನ್ನೇನು ಕೆಲವೇ ತಿಂಗಳಿನಲ್ಲಿ 1 ವರ್ಷ ಪೂರೈಸಲಿದೆ. ಈ ನಡುವೆ ಬಿಗ್‌ಬಾಸ್‌ ಸೀಸನ್ 11 ಗೆ ಭರ್ಜರಿ ತಯಾರಿ ಆರಂಭವಾಗಿದೆ.

ಕನ್ನಡ ಬಿಗ್‌ಬಾಸ್‌ ಸೀಸನ್ 11ರ ಮೊದಲ ಪ್ರೋಮೋ ಶೂಟಿಂಗ್ ಮಾಡಿ ಮುಗಿಸಲಾಗಿದ್ದು, ಬಿಡುಗಡೆಗೆ ಎದುರು ನೋಡುತ್ತಿರುವ ಕಾರಣ ಎಡಿಟಿಂಗ್ ಟೇಬಲ್‌ ಸೇರಿದೆಯಂತೆ. 

Tap to resize

 ಈ ಬಾರಿ ಪ್ರೋಮೋವನ್ನು ಹೈದರಾಬಾದ್‌ ನಲ್ಲಿ ಶೂಟಿಂಗ್ ಮಾಡಲಾಗಿದೆಯಂತೆ. ಎಂದಿನಂತೆ ನಟ ಕಿಚ್ಚ ಸುದೀಪ್ ಅವರು ಈ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಎಡಿಟಿಂಗ್ ಹಂತದಲ್ಲಿರುವ ಪ್ರೋಮೋ ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್ 2ನೇ ವಾರದ ಒಳಗೆ ಬಿಡುಗಡೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆಯಂತೆ.

 ಸೆಪ್ಟೆಂಬರ್   29ರಂದು ಬಿಗ್‌ ಬಾಸ್ ಸೀಸನ್ 11 ಆರಂಭಿಸಲು ತಂಡ ಮತ್ತು ಕಲರ್ಸ್ ಕನ್ನಡ ವಾಹಿನಿ ಸಿದ್ದತೆ ನೆಡೆಸಿದೆ ಎನ್ನಲಾಗಿದ್ದು, ಈಗಾಗಲೇ ಸ್ಪರ್ಧಿಗಳ ಹುಡುಕಾಟ ಆರಂಭಿಸಿದೆಯಂತೆ. 

 ಇನ್ನು ಕೇವಲ 60 ದಿನಗಳಲ್ಲಿ ಕಲರ್ಸ್ ಕನ್ನಡ ಎಲ್ಲಾ ಧಾರವಾಹಿ ಮತ್ತು ವೀಕೆಂಡ್‌ ಶೋ ನಲ್ಲಿ ಭಾರೀ ಬದಲಾವಣೆಯಾಗಲಿದೆ. ಒಂದು ಧಾರವಾಹಿಯ ಸಮಯ ಬದಲಾವಣೆ ಆಗಲಿದ್ದು, ಮೂರು ಧಾರವಾಹಿ ಮುಕ್ತಾಯವಾಗಲಿದೆ.

 ಅಂತರ ಪಟ ಸೀರಿಯಲ್ ಮುಕ್ತಾಯವಾಗಲಿದೆಯಂತೆ. ವೀಕೆಂಡ್‌ ಶೋ ಗಳು ಕೂಡ ಬಿಗ್‌ ಬಾಸ್‌ ಬರುವ ಹೊತ್ತಿಗೆ ಮುಗಿಯಲಿದೆ. ಇದರ ನಡುವೆ ಅನುಬಂಧ ಅವಾರ್ಡ್ ಶೂಟಿಂಗ್ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಎರಡು ದಿನಗಳ ಕಾಲ ನಡೆಯಲಿದೆ. ಎಡಿಟಿಂಗ್ ಬಳಿಕ ಬಿಗ್‌ ಬಾಸ್‌ ಶುರುವಾಗುವುದಕ್ಕೂ ಒಂದು ವಾರ ಮುಂಚೆ ಪ್ರಸಾರವಾಗಲಿದೆ.

Latest Videos

click me!