ಸನಾ ಜೊತೆ ನಿಜಕ್ಕೂ ಸಿದ್ದಾರ್ಥ್ ಶುಕ್ಲಾ ಮಗುವಾಗಿದ್ದರು. ಈ ರೀತಿಯ ಸಿದ್ದಾರ್ಥ್‌ರನ್ನು ಹಳೇ ಗೆಳತಿ ಆರತಿ ಸಿಂಗ್, ಎಕ್ಸ್ ಗರ್ಲ್‌ಫ್ರೆಂಡ್ ಶೆಫಾಲಿ ಜೆರಿವಾಲಾ ಕೂಡ ನೋಡಿರಲಿಲ್ಲವಂತೆ. ಈ ಬಗ್ಗೆ ಇವರಿಬ್ಬರು ಶೋನಲ್ಲಿ ಹೇಳಿಕೊಂಡಿದ್ದರು. ಅದೇ ಸಮಯಕ್ಕೆ ಸನಾ, ಸಿದ್ ಜಗಳ ಮುನಿಸು, ಪ್ರೀತಿ ನೋಡಿ ಶೆಫಾಲಿ ಜೆರಿವಾಲಾ ತುಂಬ ಖುಷಿಪಟ್ಟಿದ್ದರು. ಒಮ್ಮೆ ಸನಾ ಹೊಟ್ಟೆ ಉರಿಸೋಕೆ ಶೆಫಾಲಿ, ಸಿದ್ ಇಬ್ಬರೂ ಬಾತ್‌ರೂಮ್‌ಗೆ ಹೋಗಿ ಲಾಕ್ ಮಾಡ್ಕೊಂಡು, ಒಂದೈದು ನಿಮಿಷ ಆದ್ಮೇಲೆ ಹೊರಗಡೆ ಬಂದಿದ್ದೂ ಇದೆ. ಇನ್ನೊಮ್ಮೆ ನಾವು ಹಳೇ ಸ್ನೇಹಿತರು ಅಂತ ಹೇಳಿ ಹಗ್ ಮಾಡ್ಕೊಂಡು ಸನಾ ಹೊಟ್ಟೆ ಉರ್ಕೊಳ್ಳೋ ಹಾಗೆ ಮಾಡಿದ್ದೂ ಇದೆ.