Bhavya Gowda: ‘ತುಳಿದ ಜಾಗದಲ್ಲಿ ಬೆಳೆದು ತೋರಿಸು’ : ಇನ್’ಸ್ಟಾಗ್ರಾಂ ಪೋಸ್ಟ್ ಮೂಲಕ ಯಾರಿಗೆ ಟಾಂಗ್ ಕೊಟ್ರು ಭವ್ಯಾ ಗೌಡ?

Published : Jun 27, 2025, 04:41 PM ISTUpdated : Jun 27, 2025, 04:46 PM IST

ನಟಿ ಭವ್ಯಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತುಳಿದ ಜಾಗದಲ್ಲಿ ಬೆಳೆದು ತೋರಿಸು ಎಂದು ಪೋಸ್ಟ್ ಹಾಕುವ ಮೂಲಕ ಯಾರಿಗೋ ಟಾಂಗ್ ಕೊಟ್ಟಂತೆ ಕಾಣುತ್ತಿದೆ. 

PREV
18

ಕನ್ನಡ ಕಿರುತೆರೆ ನಟಿ ಗೀತಾ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಭವ್ಯಾ ಗೌಡ (Bhavya Gowda), ಕರ್ಣ ಸೀರಿಯಲ್ ವಿವಾದ ಬಳಿಕ ಕೆಲವು ದಿನಗಳಿಂದ ಎಲ್ಲೂ ಕಾಣಿಸಲೇ ಇಲ್ಲ. ಇದೀಗ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸುದ್ದಿಯಲ್ಲಿದ್ದಾರೆ.

28

ಭವ್ಯಾ ಗೌಡ ಬಿಗ್ ಬಾಸ್ ಸೀಸನ್ 11 (Bigg Boss Season 11)  ರಲ್ಲಿ ಸ್ಪರ್ಧಿಸಿದ್ದರು. ಬಿಗ್ ಬಾಸ್ ಮುಗಿದು ಸ್ವಲ್ಪ ಸಮಯದಲ್ಲೇ ಭವ್ಯಾ ಗೌಡ ಕರ್ಣ ಧಾರಾವಾಹಿಯಲ್ಲಿ ನಟಿಸುವುದಾಗಿ ಸುದ್ದಿಯಾಗಿತ್ತು. ಭವ್ಯಾ ನಟಿಸಿರುವ ಪ್ರೊಮೋ ಸಹ ಬಿಡುಗಡೆಯಾಗಿ ಸಖತ್ ಸೌಂಡ್ ಮಾಡಿತ್ತು.

38

ಭವ್ಯಾ ಗೌಡ ಮತ್ತು ಕಿರಣ್ ರಾಜ್ (Kiran Raj) ಜೋಡಿಯನ್ನು ಮೆಚ್ಚಿಕೊಂಡಿದ್ದ ಜನ, ಇನ್ನೇನು ಈ ಜೋಡಿಯನ್ನು ತೆರೆ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿರುವಾಗ, ಭವ್ಯಾ ಗೌಡ ಅವರಿಂದಾಗಿ, ಸೀರಿಯಲ್ ಪ್ರಸಾರದ ಮೇಲೆ ತಡೆ ಬಂದು, ಪ್ರಸಾರವನ್ನು ಮುಂದೂಡಲಾಯಿತು.

48

ಮಾಹಿತಿಯ ಪ್ರಕಾರ ಭವ್ಯಾ ಗೌಡ, ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ದು, ಆ ಸಂದರ್ಭದಲ್ಲಿ ವಾಹಿನಿಯು ಭವ್ಯಾ ಜೊತೆ 6 ತಿಂಗಳ ಅಗ್ರಿಮೆಂಟ್ ಮಾಡಿಕೊಂಡಿತ್ತು. ಅದರ ಪ್ರಕಾರ ಭವ್ಯಾ ಕಲರ್ಸ್ ಕನ್ನಡ ಬಿಟ್ಟು ಬೇರೆ ಯಾವುದೇ ವಾಹಿನಿಯ ಧಾರಾವಾಹಿಯಲ್ಲಿ ಭಾಗವಹಿಸುವಂತೆ ಇರಲಿಲ್ಲ. ಆದರೆ ಭವ್ಯಾ ಆ ನಿಯಮವನ್ನು ಮುರಿದು ಝೀಕನ್ನಡದಲ್ಲಿ ಪ್ರಸಾರವಾಗಲಿರುವ ಕರ್ಣ ಧಾರಾವಾಹಿಯಲ್ಲಿ ನಟಿಸಿದ್ದರು.

58

ಈ ಬಗ್ಗೆ ಭವ್ಯಾ ಅವರನ್ನು ವಾಹಿನಿ ಕೇಳಿದಾಗ, ಉತ್ತರಿಸದ ಭವ್ಯಾ ಕಾನೂನು ಮೂಲಕ ಉತ್ತರ ನೀಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಾಹಿನಿಯು ಕರ್ಣ ಧಾರಾವಾಹಿ ಪ್ರಸಾರಕ್ಕೆ ತಡೆ ನೀಡಿತ್ತು. ಆ ಬಳಿಕ ಭವ್ಯಾ ಗೌಡ ಸೋಶಿಯಲ್ ಮೀಡಿಯಾದಿಂದಲೂ ಕಾಣೆಯಾಗಿದ್ದರು.

68

ಇದೀಗ ಭವ್ಯಾ ಗೌಡ ತಮ್ಮಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ ‘ತುಳಿದ ಜಾಗದಲ್ಲಿ ಬೆಳೆದು ತೋರಿಸು’ ಎನ್ನುವ ಪೋಸ್ಟ್ ಹಾಕಿದ್ದು, ಯಾರಿಗೆ ಈ ರೀತಿಯಾಗಿ ಹೇಳಿ ಟಾಂಗ್ ಕೊಟ್ಟಿದ್ದಾರೆ ಎಂದು ಜನ ಕೇಳುತ್ತಿದ್ದಾರೆ.

78

ಸದ್ಯ ನಟಿ ಭವ್ಯಾ ಗೌಡ ವಿರುದ್ಧ ಕಲರ್ಸ್ ಕನ್ನಡ ಕಾನೂನು ಹೋರಾಟ ಮಾಡುತ್ತಿದೆ. ಮೂಲಗಳ ಪ್ರಕಾರ,ಜೂನ್ 27ರಂದು ಕೋರ್ಟ್‌ನಲ್ಲಿ ವಿಚಾರಣೆ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭವ್ಯಾ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಪೋಸ್ಟ್ ಮಾಡಿರಬಹುದು ಎನ್ನಲಾಗಿದೆ.

88

ಇನ್ನು ಬಿಗ್‌ ಬಾಸ್‌ ರಿಯಾಲಿಟಿ ಶೋ ಅಗ್ರಿಮೆಂಟ್‌ ಪ್ರಕಾರ ನಟಿ ಭವ್ಯಾ ಗೌಡ ಜುಲೈ ಅಂತ್ಯದವರೆಗೆ ಇತರ ವಾಹಿನಿಗಳಲ್ಲಿ ಕೆಲಸ ಮಾಡುವಂತಿಲ್ಲ. ಹೀಗಾಗಿ 'ಕರ್ಣ' ಧಾರಾವಾಹಿ ಕೂಡ ಅಲ್ಲಿವರೆಗೂ ಪ್ರಸಾರವಾಗುವುದಿಲ್ಲವೇ? ಅಥವಾ ಭವ್ಯಾ ಗೌಡ ಸ್ಥಾನದಲ್ಲಿ ಬೇರೆ ನಟಿಯನ್ನು ಹಾಕಲಾಗುತ್ತದೆಯೇ? ಅನ್ನೋದನ್ನು ಕಾದು ನೋಡಬೇಕು.

Read more Photos on
click me!

Recommended Stories