Bigg Boss 100 ದಿನಗಳ ಜರ್ನಿಯಲ್ಲಿ ಇದನ್ನ ಕಳೆದುಕೊಂಡೆ, Photo ಶೇರ್ ಮಾಡಿ ದುಃಖ ತೋಡಿಕೊಂಡ Mutant Raghu

Published : Jan 20, 2026, 01:40 PM IST

Mutant Raghu: ಬಿಗ್ ಬಾಸ್ ಸೀಸನ್ 12ಕ್ಕೆ ತೆರೆ ಬಿದ್ದಾಗಿದೆ, ಅಲ್ಲಿಂದ ಸ್ಪರ್ಧಿಗಳು, ಪಡೆದುಕೊಂಡಿದ್ದು, ಕಳೆದುಕೊಂಡಿದ್ದು ಬೇಕಾದಷ್ಟಿದೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಮ್ಯೂಟಂಟ್ ರಘು ಅವರು ತಾವು ಬಿಗ್ ಬಾಸ್ ಜರ್ನಿಯಲ್ಲಿ ಕಳೆದುಕೊಂಡಿದ್ದೇನು ಅನ್ನೋದನ್ನು ಹಂಚಿಕೊಂಡಿದ್ದಾರೆ. 

PREV
17
ಬಿಗ್ ಬಾಸ್ ಸೀಸನ್ 12

ಮೂರು ತಿಂಗಳು ಕಾಲ ವೀಕ್ಷಕರನ್ನು ಮನರಂಜಿಸಿದ ಬಿಗ್ ಬಾಸ್ ಸೀಸನ್ 12ಕ್ಕೆ ಇದೀಗ ತೆರೆ ಬಿದ್ದಾಗಿದೆ. ಬಿಗ್ ಬಾಸ್ ಸ್ಪರ್ಧಿಗಳು ಸೆರೆಮನೆಯಂತಹ ಅರಮನೆಯಿಂದ ಸಾಕಷ್ಟು ಕಲಿತುಕೊಂಡು, ಪಡೆದುಕೊಂಡು, ಕಳೆದುಕೊಂಡಿದ್ದೂ ಇದೆ. ಇದೀಗ ಮ್ಯೂಟಂಟ್ ರಘು ತಾವು ಏನು ಕಳೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ.

27
ಮ್ಯೂಟಂಟ್ ರಘು

ಮ್ಯೂಟಂಟ್ ರಘು ಅವರು ಬಿಗ್ ಬಾಸ್ ಸೀಸನ್ 12ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು. ಎಂಟ್ರಿ ಕೊಟ್ಟ ತಕ್ಷಣ ಅವರನ್ನು ನೋಡಿ ಸ್ಟ್ರಾಂಗ್, ಇವರಿಂದ ಗಲಾಟೆ ನಡೆಯಬಹುದು, ಟಫ್ ವ್ಯಕ್ತಿ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆಗಿದ್ದೆ ಬೇರೆ, ಮ್ಯೂಟಂಟ್ ರಘು ಸಿನಿಮಾಗಳಲ್ಲಿ ಕಾಣಿಸುವಂತೆ ವಿಲನ್ ಅಲ್ವೇ ಅಲ್ಲ, ಅವರು ಮೃದು ಹೃದಯದ, ಮಗು ಮನಸಿನಂತಹ ವ್ಯಕ್ತಿ ಅನ್ನೋದು ಬಿಗ್ ಬಾಸ್ ಸೀಸನ್ ನೋಡಿದ ಪ್ರತಿಯೊಬ್ಬರ ಅನುಭವಕ್ಕೂ ಬಂದಿದೆ.

37
100 ದಿನಗಳ ಜರ್ನಿ

ಬಿಗ್ ಬಾಸ್ ಮನೆಯಲ್ಲಿ ರಘು ಅವರು 100 ದಿನಗಳ ಜರ್ನಿ ಮಾಡಿದ್ದು, ಟಾಪ್ 6 ಸ್ಪರ್ಧಿಯಾಗಿ ಕೊನೆಯ ದಿನದವರೆಗೂ ಸ್ಪರ್ಧಿಸುತ್ತಲೇ ಬಂದರು. ವೈಲ್ಡ್ ಎಂಟ್ರಿ ಕೊಟ್ಟು, ಕೊನೆಯವರೆಗೂ ಮನೆಮಂದಿಗೆ ಟಫ್ ಸ್ಪರ್ಧೆ ನೀಡುತ್ತಾ ಬಂದ ರಘು ಅವರು ಬಿಗ್ ಬಾಸ್ ಗೆಲ್ಲುವ ಸಾಮರ್ಥ್ಯವೂ ಹೊಂದಿದ್ದರು, ಆದರೆ ಕೊನೆಗೆ 4ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

47
ರಘು ಹೇಳಿದ್ದೇನು?

ಇದೀಗ ರಘು ಅವರು ತಮ್ಮ ಮೊದಲಿನ ಹಾಗೂ ಈವಾಗಿನ ಅಂದರೆ, ಬಿಗ್ ಬಾಸ್ ಮನೆಯಿಂದ ಮರಳಿ ಬಂದ ನಂತರದ ಫೋಟೊಗಳನ್ನು ಶೇರ್ ಮಾಡಿ, ತಾವು ದೊಡ್ಮನೆಯಿಂದ ಹೊರ ಬಂದ ಮೇಲೆ ಏನನ್ನು ಕಳೆದುಕೊಂಡಿದ್ದಾರೆ ಮತ್ತು ಏನನ್ನು ಪಡೆದುಕೊಂಡಿದ್ದಾರೆ ಅನ್ನೋದನ್ನು ತಿಳಿಸಿದ್ದಾರೆ.

57
25 ಕೆಜಿ ತೂಕ ಇಳಿಸಿಕೊಂಡ ರಘು

ರಘು ಅವರು ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ಸುಮಾರು 125 ಕೆಜಿ ತೂಗುತ್ತಿದ್ದರು. ಇದೀಗ ತೂಕ ಇಳಿಸಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ರಘು ಬಿಗ್ ಬಾಸ್ 12 ರ 100 ದಿನಗಳ ಅದ್ಭುತ ಪ್ರಯಾಣ. ನಾನು 25 ಕೆಜಿ ತೂಕ ಇಳಿಸಿಕೊಂಡೆ, ಆದರೆ ಅಪರಿಮಿತ ಜನರ ಬೆಂಬಲ ಸಿಕ್ಕಿತು ಎಂದು ಹೇಳಿದ್ದಾರೆ.

67
ಧನ್ಯವಾದ ತಿಳಿಸಿದ ರಘು

ಪ್ರತಿದಿನ ನನ್ನನ್ನು ನಾನು ಹಿಡಿದಿಟ್ಟುಕೊಳ್ಳುವುದು ಅತ್ಯಂತ ಕಠಿಣ ಕೆಲಸವಾಗಿತ್ತು. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ಮತ್ತು ಖಂಡಿತವಾಗಿಯೂ ನನ್ನ ಪ್ರಯಾಣವನ್ನು ಹಂಚಿಕೊಳ್ಳುತ್ತೇನೆ. ಎಲ್ಲಾ ಬೆಂಬಲಕ್ಕೆ ಧನ್ಯವಾದಗಳು ಎಂದು ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

77
ರಘು ಕರಿಯರ್

ರಘು ಅವರು ಬಾಡಿ ಬಿಲ್ಡರ್ ಆಗಿದ್ದು, ಹಲವಾರು ನ್ಯಾಷನಲ್ ಇಂಟರ್ ನ್ಯಾಷನಲ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇವರು ಕಾಟೇರ, ಕ್ರಾಂತಿ, ರಾಣ, ಗರಡಿ, ರಾಂಬೋ, ವೃಷಭ, ಕಾಂತಾರ ಚಾಪ್ಟರ್ 1 ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories