ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಮತ್ತೆ ಕೈಬಳೆ ಎತ್ತಿ ತೋರಿಸಿದ ಸಂಗೀತಾ ಶೃಂಗೇರಿ!

First Published | Sep 6, 2024, 3:24 PM IST

ಬೆಂಗಳೂರು (ಸೆ.06): ಕನ್ನಡದ ಬಿಗ್ ಬಾಸ್ ಫೈನಲಿಸ್ಟ್ ಸ್ಪರ್ಧಿ ಸಂಗೀತಾ ಶೃಂಗೇರಿ ಗೌರಿ ಗಣೇಶ ಹಬ್ಬಕ್ಕೆ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ 11 ಆರಂಭಕ್ಕೆ ಮುನ್ನವೇ ಮತ್ತೊಮ್ಮೆ ಕೈಬಳೆಯನ್ನು ಎತ್ತಿ ತೋರಿಸಿದ್ದಾರೆ. ಸಂಗೀತಾ ಕೈತುಂಬಾ ಬಳೆ ಧರಿಸಿ, ಕೈಯಲ್ಲೊಂದು ನವಿಲುಗಡಿ ಹಿರಿದುಕೊಂಡು, ಕಣ್ಣರಳಿಸಿ ಮಿಂಚಿನ ನಗೆ ಬೀರುತ್ತಾ ರಾಧೆಯ ಹಾಗೆ ಶೃಂಗರಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಇದು ಗೌರಿ ಗಣೇಶ ಹಬ್ಬದ ಶುಭಾಶಯವೋ ಅಥವಾ ಮತ್ತೊಮ್ಮೆ ಕೈಬಳೆ ತೋರಿಸಿದ ಸೂಚನೆಯೋ ವೀಕ್ಷಕರೇ ಅರ್ಥ ಮಾಡಕೊಳ್ಳಬೇಕು.

ಬಿಗ್ ಬಾಸ್ ಮನೆಯಿಂದ ಹೊರಬಂದ ಸಂಗೀತಾ ಶೃಂಗೇರಿಗೆ ಭಾರಿ ಅಭಿಮಾನಿಗಳಿದ್ದಾರೆ. ಎಲ್ಲೇ ಹೋದರೂ ಅವರ ಅಭಿಮಾನಿಗಳ ದಂಡೇ ಸೇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ನಟಿ ಸಂಗೀತಾ ಶೃಂಗೇರಿ ಗೌರಿ ಗಣೇಶ ಹಬ್ಬದ ಅಂಗವಾಗಿ ಗೌರಿಯಂತೆ ಸಿಂಗಾರಗೊಂಡು, ರಾಧೆಯಂತೆ ನವಿಲುಗರಿ ಹಿಡಿದು ಫೋಟೋ ಶೂಟ್ ಮಾಡಿಸಿದ್ದಾರೆ. ಅದರಲ್ಲಿಯೂ ಸಂಗೀತಾ ರೇಷ್ಮೆ ಸೀರೆ, ಟೆಂಪಲ್ ಜ್ಯೂವೆಲರಿಯನ್ನು ಧರಿಸಿ ವಧುವಿನಂತೆ ಸಿಂಗಾರಗೊಂಡಿದ್ದಾರೆ. ಇದರೊಂದಿಗೆ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಕನ್ನಡ ಬಿಗ್ ಬಾಸ್ ಸೀಸನ್ 10ರ ರೋರಿಂಗ್ ಲೇಡಿ ಬಾಂಡ್ ಸಂಗೀತಾ ಶೃಂಗೇರಿ, ಮೂರ್ನಾಲ್ಕು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರೂ ದೊಡ್ಡ ಮಟ್ಟದ ಹೆಸರು ಸಿಕ್ಕಿರಲಿಲ್ಲ. ಆದರೆ, ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿ ಗಂಡಸರಿಗೆ ಕೈ ಬಳೆ ತೋರಿಸಿ ಮಹಿಳೆಯರ ಶಕ್ತಿಯನ್ನು ಅನಾವರಣ ಮಾಡಿದ್ದೇ ತಡ, ರಾತ್ರೋ ರಾತ್ರಿ ಸಂಗೀತಾ ಶೃಂಗೇರಿ ದೊಡ್ಡ ಪ್ರಸಿದ್ಧಿಯನ್ನು ಗಳಿಸಿದ್ದಳು.

Tap to resize

ಕನ್ನಡದ ಸೀಸನ್ 10ರ ಬಿಗ್‌ಬಾಸ್‌ ಶೋನಲ್ಲಿ ಕೈ ಬಳೆ ಸುದ್ದಿಯೇ ಅತ್ಯಂತ ಹೆಚ್ಚು ಸದ್ದು ಮಾಡಿತ್ತು. ಬಿಗ್ ಬಾಸ್ ಮನೆಯಲ್ಲಿ ಆನೆ ಬಂದೊಂದಾನೆ ಎಂದು ಹೇಳುತ್ತಾ ಮದವೇರಿದ ಆನೆಯಂತೇ ನಡೆದುಕೊಳ್ಳುತ್ತಿದ್ದ ಅಜಾನುಭಾಹು ದೇಹಿ ವಿನಯ್‌ಗೌಡಗೆ ಕೈಬಳೆ ತೋರಿಸುವ ಮೂಲಕ ಸೆಡ್ಡು ಹೊಡೆದಿದ್ದಳು. ಇದಾದ ನಂತರ, ದಿನೇ ದಿನೇ ಆಟದಲ್ಲಿ ಬದಲಾವಣೆ ಆಗಿದ್ದು, ನಂತರ ಬೇರೆಯದ್ದೇ ತಿರುವು ಪಡೆದುಕೊಂಡಿತ್ತು.

ಸಂಗೀತಾ ಶೃಂಗೇರಿಗೆ ಸಿನಿಮಾದಲ್ಲಿ ಅವಕಾಶಗಳೂ ಬರುತ್ತಿವೆ. ಅದರೊಂದಿಗೆ ಹಲವು ಖಾಸಗಿ ಕಾರ್ಯಕ್ರಮಗಳಿಗೂ ಅತಿಥಿಯಾಗಿ ಸಂಗೀತಾ ಶೃಂಗೇರಿ ಹೋಗುತ್ತಿದ್ದಾರೆ. ಆದರೆ, ಸಂಗೀತಾ ಎಲ್ಲಿಗೇ ಹೋದರೂ ವೇದಿಕೆ ಕಾರ್ಯಕ್ರಮಗಳಲ್ಲಿ ಎಲ್ಲರಿಂದಲೂ ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸಂಗೀತಾ ಅವರು ತಮ್ಮ ಸ್ನೇಹಿತರ ಮದುವೆಗೆ ಹೋದಾಗ ಅಲ್ಲಿ ಎಲ್ಲರೂ ಸಂಗೀತಾ ಶೃಂಗೇರಿ ಅವರನ್ನು ನೋಡಿ ಶಿಳ್ಳೆ, ಚಪ್ಪಾಳೆ ತಟ್ಟಿದ್ದಾರೆ. ಜೊತೆಗೆ, ಅಲ್ಲಿದ್ದ ಅವರ ಅಭಿಮಾನಿಗಳು ಮದುವೆ ಮಂಟಪದ ವೇದಿಕೆಯಲ್ಲಿಯೇ ಆಕೆಗೆ ಶಾಲು ಹೊದಿಸಿ, ಪೇಟ ತೊಡಿಸಿ, ಹೂವಿನ ಹಾರ ಹಾಕಿ ಪೋಟೋ ತೆಗೆಸಿಕೊಂಡಿದ್ದಾರೆ.

ಸಂಗೀತಾ ನಡೆಗೆ ನೆಟ್ಟಿಗರ ಆಕ್ರೋಶ: ಇನ್ನು ಸಂಗೀತಾ ಶೃಂಗೇರಿ ವೇದಿಕೆ ಕಾರ್ಯಕ್ರಮಗಳಿಗೆ ತೆರಳಿ ಸನ್ಮಾನ ಮಾಡಿಸಿಕೊಳ್ಳುವುದೇನೋ ಸರಿ. ಆದರೆ, ಮದುವೆ ಕಾರ್ಯಕ್ರಮಕ್ಕೆ ತೆರಳಿ ಅಲ್ಲಿ ಮದುವೆ ಗಂಡು-ಹೆಣ್ಣು ಇರುವ ವೇದಿಕೆಯಲ್ಲಿ ನಿಂತು ಸನ್ಮಾನ ಮಾಡಿಸಿಕೊಂಡು ಫೋಟೋ ತೆಗೆಸಿಕೊಳ್ಳುವುದು ಎಷ್ಟು ಸರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಯೂತ್ ಐಕಾನ್ ಪ್ರಶಸ್ತಿಗೆ ನಾಮಿನೇಟ್: ಇನ್ನು ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ ಕೈಬಳೆ ಎತ್ತಿ ತೋರಿಸಿ ನೇರ ಮತ್ತು ದಿಟ್ಟ ನಡೆಯನ್ನು ತೋರಿಸಿದ್ದರಿಂದ ಅಭಿಮಾನಿಗಳು ಸಂಗೀತಾಗೆ ಸಿಂಹಿಣಿ ಎಂದೇ ಕರೆಯುತ್ತಿದ್ದರು. ಇದೀಗ ಕಲರ್ಸ್ ಕನ್ನಡದಿಂದ ಅನುಬಂಧ ಅವಾರ್ಡ್ಸ್ 2024 ಯೂತ್ ಐಕಾನ್ ಪ್ರಶಸ್ತಿಗೆ ಸಂಗೀತಾ ಶೃಂಗೇರಿ ಸೇರಿದಂತೆ 9 ಜನರನ್ನು ನಾಮಿನೇಟ್ ಮಾಡಲಾಗಿದೆ.

ಕಲರ್ಸ್ ಕನ್ನಡದ ಅನುಬಂಧ ಅವಾರ್ಡ ಪ್ರಶಸ್ತಿ ಗೆಲ್ಲುವ ಭರವಸೆ: ಕಲರ್ಸ್ ಕನ್ನಡ ಕಿರುತೆರೆಯ ವಿವಿಧ ಧಾರಾವಾಹಿಗಳು, ರಿಯಾಲಿಟಿ ಶೋಗಳು ಸೇರಿದಂತೆ ಎಲ್ಲ ವಿಭಾಗದಿಂದ 9 ಯುವಜನರನ್ನು ಯೂತ್ ಐಕಾನ್ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿದ್ದು, ಜನರು ಜಿಯೋ ಸಿನಿಮಾ ಆಪ್ ಡೌನ್‌ಲೋಡ್ ಮಾಡಿ ಓಟ್ ಮಾಡಲು ಅವಕಾಶ ನೀಡಿದೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗಿಂದ ಹೆಚ್ಚು ಪ್ರಸಿದ್ಧಿ ಹೊಂದಿರುವ ಸಂಗೀತಾ ಶೃಂಗೇರಿಗೆ ಅತಹೆಚ್ಚು ಓಟ್ ಹಾಕುವತೆ ಪ್ರಚಾರ ಮಾಡಲಾಗುತ್ತಿದೆ. ಜೊತೆಗೆ, ಬಿಗ್ ಬಾಸ್ ಸೀಸನ್ 10 ಗೆಲ್ಲದಿದ್ದರೂ, ಯತ್ ಐಕಾನ್ ಪ್ರಶಸ್ತಿ ಗೆಲ್ಲಲಿದ್ದಾರೆ ಎಂಬ ಸದ್ದಿಗಳು ಹರಿದಾಡುತ್ತಿವೆ.

ಸಂಗೀತಾ ಕೈತುಂಬಾ ಬಳೆ ಧರಿಸಿ, ಕೈಯಲ್ಲೊಂದು ನವಿಲುಗಡಿ ಹಿರಿದುಕೊಂಡು, ಕಣ್ಣರಳಿಸಿ ಮಿಂಚಿನ ನಗೆ ಬೀರುತ್ತಾ ರಾಧೆಯ ಹಾಗೆ ಶೃಂಗರಿಸಿಕೊಂಡು ಪೋಸ್ ಕೊಟ್ಟಿದ್ದಾರೆ. ಇದು ಗೌರಿ ಗಣೇಶ ಹಬ್ಬದ ಶುಭಾಶಯವೋ ಅಥವಾ ಮತ್ತೊಮ್ಮೆ ಕೈಬಳೆ ತೋರಿಸಿದ ಸೂಚನೆಯೋ ವೀಕ್ಷಕರೇ ಅರ್ಥ ಮಾಡಕೊಳ್ಳಬೇಕು.

Latest Videos

click me!