Bigg Boss Kannada 12: ರಾಶಿಕಾಗೆ ಈ ಸ್ಪರ್ಧಿ ಮೇಲೆ ಏಕಿಷ್ಟು ಕೋಪ? ಟಾಪ್​ 5ನಲ್ಲೂ ಅವ್ರು ಬರಬಾರದು ಎಂದಿದ್ಯಾಕೆ?

Published : Jan 13, 2026, 04:25 PM IST

ಬಿಗ್​ಬಾಸ್​​ 12ರ ಫಿನಾಲೆಗೂ ಮುನ್ನವೇ ಮನೆಯಿಂದ ಹೊರಬಂದಿರುವ ರಾಶಿಕಾ ಶೆಟ್ಟಿ, ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ. ವಿನ್ನರ್ ಯಾರು ಆಗಬೇಕು ಮತ್ತು ಟಾಪ್ 5ನಲ್ಲಿ ಯಾರು ಇರಬಾರದು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

PREV
15
ಕೊನೆ ಕ್ಷಣದಲ್ಲಿ ಔಟ್​

ಬಿಗ್​ಬಾಸ್​​ 12 ರ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಿನಲ್ಲಿಯೇ ರಾಶಿಕಾ ಶೆಟ್ಟಿ (Rashika Shetty) ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಇದೀಗ ಅವರು ಬಿಗ್​ಬಾಸ್​ನಲ್ಲಿ ತಮ್ಮ ಪಯಣದ ಬಗ್ಗೆ ಮಾತನಾಡಿದ್ದಾರೆ.

25
ಸಂಭಾವನೆ ಬಗ್ಗೆ ಹೇಳಿದ್ದೇನು?

ಮೊದಲನೆಯದಾಗಿ ಅವರಿಗೆ ಸಂಭಾವನೆ ಬಗ್ಗೆ ಕೇಳಲಾಗಿದೆ. ಆದರೆ ಅದನ್ನು ಅವರು ರಿವೀಲ್​ ಮಾಡಲಿಲ್ಲ. ಅದನ್ನು ರಿವೀಲ್​ ಮಾಡುವಂತಿಲ್ಲ ಎಂದಿದ್ದಾರೆ. ಇದೇ ವೇಳೆ ತಾವು ಬಟ್ಟೆಗಾಗಿ ಒಂದು ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.

35
ವಿನ್​ ಇವರೇ ಆಗಬೇಕು

ಕೊನೆಗೆ ವಿನ್ನರ್​ ಯಾರ್ಯಾಗಬೇಕು, ಆಗುವುದು ಯಾರು? ಟಾಪ್​ 5ನಲ್ಲಿ ಯಾರು ಬರಬೇಕು ಎನ್ನುವ ಪ್ರಶ್ನೆ ಕೇಳಲಾಗಿದೆ. ವಿನ್ನರ್​ ಧನುಷ್​ ಆಗಬೇಕು, ಆದರೆ ಈಗ ಹೊರಗೆ ಇರುವ ಕ್ರೇಜ್​ ನೋಡಿದರೆ ಗಿಲ್ಲಿ ನಟ ವಿನ್ನರ್​ ಎನ್ನಿಸುವಂತಿದೆ ಎಂದಿದ್ದಾರೆ.

45
ಯಾರು ಬರಬಾರದು?

ಆದರೆ ಯಾವುದೇ ಕಾರಣಕ್ಕೂ ರಕ್ಷಿತಾ ಶೆಟ್ಟಿ (Rakshita Shetty) ಟಾಪ್​ 5ನಲ್ಲಿ ಬರಬಾರದು ಎಂದಿದ್ದಾರೆ. ಇದಕ್ಕೆ ಅವರು ಯಾವುದೇ ಕಾರಣ ನೀಡಲಿಲ್ಲ. ಆದರೆ ರಾಶಿಕಾ ಶೆಟ್ಟಿಗೆ ರಕ್ಷಿತಾ ಶೆಟ್ಟಿ ಮೇಲೆ ಏಕಿಷ್ಟು ಕೋಪ ಎನ್ನುವುದು ತಿಳಿಯಲಿಲ್ಲ.

55
ಸಿನಿಮಾದಲ್ಲಿ ನಟನೆ

ಇದೇ ವೇಳೆ ನಟ ರವಿಚಂದ್ರನ್​ ಅವರ ಮಗಳಾಗಿ ಸಿನಿಮಾ ಮಾಡುತ್ತಿದ್ದೇನೆ. ಇದನ್ನು ನೋಡಿ ಎಲ್ಲರೂ ಸಪೋರ್ಟ್​ ಮಾಡಿ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories