Bigg Boss ಮನೆಯಲ್ಲಿ 15 ವಾರವಿದ್ದ Rashika Shettyಗೆ ಸಿಕ್ಕ ಬಹುಮಾನವೆಷ್ಟು? ಬಿಗ್​ಬಾಸ್​ ಕೊಟ್ಟಿದ್ದೆಷ್ಟು?

Published : Jan 12, 2026, 01:46 PM IST

ಬಿಗ್​ಬಾಸ್​ ಸೀಸನ್​ 12ರ ಫೈನಲಿಸ್ಟ್​ ಎಂದುಕೊಂಡಿದ್ದ ರಾಶಿಕಾ ಶೆಟ್ಟಿ ಅನಿರೀಕ್ಷಿತವಾಗಿ ಮನೆಯಿಂದ ಹೊರಬಂದಿದ್ದಾರೆ. 15 ವಾರಗಳ ಕಾಲ ಮನೆಯಲ್ಲಿದ್ದ ಅವರು, ಪ್ರಾಯೋಜಕರಿಂದ ಹಾಗೂ ಬಿಗ್​ಬಾಸ್​ ಕಡೆಯಿಂದ ಪಡೆದ ಸಂಭಾವನೆ ಮತ್ತು ಬಹುಮಾನಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

PREV
15
ರಾಶಿಕಾ ಶೆಟ್ಟಿ ಶಾಕ್​

ಬಿಗ್​ಬಾಸ್​ ಸೀಸನ್​ 12 (Bigg Boss Season 12) ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ, ಫೈನಲಿಸ್ಟ್​ ಅಂದುಕೊಂಡಿದ್ದ ರಾಶಿಕಾ ಶೆಟ್ಟಿ ಬಿಗ್​ಬಾಸ್​ ಮನೆಯಿಂದ ಹೊರಕ್ಕೆ ಬಂದಿದ್ದಾರೆ.

25
ಪ್ರೀತಿ ವಿಷ್ಯದಲ್ಲಿ ಹವಾ

ಸೂರಜ್​ ಸಿಂಗ್​ ಅವರಿಂದಾಗಿಯೂ ಬಿಗ್​ಬಾಸ್​ನಲ್ಲಿ ಪ್ರೇಮದ ಮೂಲಕ ಹವಾ ಸೃಷ್ಟಿಸಿದ್ದರು ರಾಶಿಕಾ. ಬಿಗ್​ಬಾಸ್​ ಮನೆಯ ಬ್ಯೂಟಿ ಎಂದೂ ಇವರನ್ನು ಗುರುತಿಸಲಾಗಿತ್ತು. ಇದೀಗ ಅಂತಿಮ ಕ್ಷಣದಲ್ಲಿ ಮನೆಯಿಂದ ಹೊರಕ್ಕೆ ಬಂದು ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದಾರೆ.

35
15 ವಾರಗಳಲ್ಲಿ ಪಡೆದದ್ದೆಷ್ಟು?

ಈ 15 ವಾರಗಳಲ್ಲಿ ರಾಶಿಕಾ ಶೆಟ್ಟಿ ಬಿಗ್​ಬಾಸ್​​ ಮನೆಯಿಂದ ಪಡೆಯುವ ಬಹುಮಾನವೆಷ್ಟು? ಸದ್ಯ ಸಿಕ್ಕಿದ್ದೆಷ್ಟು ಎನ್ನುವ ಬಗ್ಗೆ ವೀಕ್ಷಕರಲ್ಲಿ ಸಹಜವಾದ ಕುತೂಹಲ ಇದ್ದೇ ಇರುತ್ತದೆ. ಅಷ್ಟಕ್ಕೂ ಬಿಗ್​ಬಾಸ್​​ಗೆ ಬರುವ ಸ್ಪರ್ಧಿಗಳ ಆದಾಯ, ಅವರಿಗೆ ಇರುವ ಕೀರ್ತಿ, ಘನತೆ... ಹೀಗೆ ಅವರಿಗೆ ಸಂಭಾವನೆ ಕೊಡುವಾಗ ಕೌಂಟ್​ ಆಗುತ್ತದೆ. ಆದ್ದರಿಂದ ಒಂದೊಂದು ಸ್ಪರ್ಧಿಗೆ ಒಂದೊಂದು ರೀತಿಯಲ್ಲಿ ಸಂಭಾವನೆ ಫಿಕ್ಸ್​ ಮಾಡಿರುತ್ತಾರೆ.

45
ಪ್ರಾಯೋಜಕರ ಕಡೆಯಿಂದ ಸಿಕ್ಕಿದ್ದಿಷ್ಟು...

ಇನ್ನು ರಾಶಿಕಾ ಶೆಟ್ಟಿ (Bigg Boss Rashika Shetty) ವಿಷಯಕ್ಕೆ ಬರುವುದಾದರೆ, ಮೊದಲಿಗೆ ಪ್ರಾಯೋಜಕರ ಕಡೆಯಿಂದ ನೋಡೋಣ. ಪ್ರಾಯೋಜಕರ ಕಡೆಯಿಂದ ರಾಶಿಕಾ ಅವರಿಗೆ ಇಬ್ಬರು ಪ್ರಾಯೋಜಕರಿಂದ ಬಹುಮಾನ ಸಿಕ್ಕಿದೆ. ಒಬ್ಬರಿಂದ ಒಂದು ಲಕ್ಷ ರೂಪಾಯಿ ಮತ್ತು ಇನ್ನೊಬ್ಬರಿಂದ 50 ಸಾವಿರ ರೂಪಾಯಿ. ಇದನ್ನು ಹೊರತುಪಡಿಸಿದರೆ ಕೆಲವೊಂದು ಗಿಫ್ಟ್​ಗಳು ಕೂಡ ರಾಶಿಕಾ ಅವರಿಗೆ ಸಿಕ್ಕಿದೆ.

55
ಬಿಗ್​ಬಾಸ್​ನಿಂದ ಸಿಕ್ಕಿರೋದು ಎಷ್ಟು?

ಇನ್ನು ಬಿಗ್​ಬಾಸ್​ನಿಂದ ಕೊಟ್ಟಿರೋ ಸಂಭಾವನೆ ಬಗ್ಗೆ ರಿವೀಲ್​ ಆಗುವುದು ಕಷ್ಟ. ಏಕೆಂದರೆ, ಸಂಭಾವನೆ ಬಗ್ಗೆ ಯಾರಲ್ಲಿಯೂ ಹೇಳಬಾರದು ಎನ್ನುವ ಷರತ್ತು ಪ್ರತಿಯೊಬ್ಬರಿಗೂ ಇರುವ ಕಾರಣ, ಅದರ ಗುಟ್ಟನ್ನು ಅವರು ಬಿಟ್ಟುಕೊಡುವುದಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories