Gilli Nata Tattoo: ಗಿಲ್ಲಿ ಟ್ಯಾಟೂ ಈಗ ಫೇಮಸ್ ಆಗ್ತಿದೆ. ಅನೇಕ ಗಿಲ್ಲಿ ಅಭಿಮಾನಿಗಳ ಕೈನಲ್ಲಿ ಗಿಲ್ಲಿ ಟ್ಯಾಟೂ ರಾರಾಜಿಸ್ತಿದೆ. ಮಗನ ಪ್ರಸಿದ್ಧಿ ನೋಡಿ ಅಪ್ಪ – ಅಮ್ಮನ ಕಣ್ಣಲ್ಲಿ ನೀರು ತುಂಬಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ವೀಕ್ ತಲುಪಿದೆ. ಕೊನೆ ವಾರದಲ್ಲಿ ರಾಶಿಕಾ ಹೊರ ಬಿದ್ದಿದ್ದು, ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ, ಧ್ರುವಂತ್, ರಘು ಹಾಗೂ ಧನುಷ್ ಸ್ಪರ್ಧೆಯಲ್ಲಿದ್ದಾರೆ. ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸದಾ ತಮಾಷೆ ಮಾಡ್ತಾ, ಎಲ್ಲರನ್ನು ನಗಿಸುವ ಗಿಲ್ಲಿ ಅಂದ್ರೆ ವೀಕ್ಷಕರಿಗೆ ಪ್ರಾಣ. ಸದ್ಯ ಗಿಲ್ಲಿ ಫಿನಾಲೇ ವೀಕ್ ತಲುಪಿರೋದು ಗಿಲ್ಲಿ ಫ್ಯಾನ್ಸ್ ಖುಷಿಯನ್ನು ಡಬಲ್ ಮಾಡಿದೆ.
26
ಗಿಲ್ಲಿ ಟ್ಯಾಟೂ
ಗಿಲ್ಲಿ, ಗಿಲ್ಲಿ ಅಂತ ಜನರ ಬಾಯಲ್ಲಿ ಗಿಲ್ಲಿ ಹೆಸರು ಓಡಾಡ್ತಿದೆ. ಗಿಲ್ಲಿಗೆ ವೋಟ್ ಹಾಕಿ ಅಂತ ಅನೇಕರು ಸಾಂಗ್ ಮಾಡಿ ಹಾಡ್ತಿದ್ದಾರೆ. ಈ ಮಧ್ಯೆ ಗಿಲ್ಲಿ ಟ್ಯಾಟೂ ಕ್ರೇಜ್ ಕೂಡ ಜಾಸ್ತಿಯಾಗಿದೆ. ಗಿಲ್ಲಿ ನಟನ ಫ್ಯಾನ್ಸ್ ಒಬ್ಬರು ಕೈಮೇಲೆ ಗಿಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
36
ಭಾವುಕರಾದ ಗಿಲ್ಲಿ ಪಾಲಕರು
ಗಿಲ್ಲಿ ಅಭಿಮಾನಿ ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಿಲ್ಲಿ ಮುಖದ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂವನ್ನು ಗಿಲ್ಲಿ ತಾಯಿ ರಿವೀಲ್ ಮಾಡಿದ್ದಾರೆ. ಮಗನ ಮುಖ, ಅಭಿಮಾನಿ ಕೈನಲ್ಲಿ ಮೂಡಿರೋದನ್ನು ನೋಡಿ ಗಿಲ್ಲಿ ತಂದೆ ಹಾಗೂ ತಾಯಿ ಭಾವುಕರಾಗಿದ್ದಾರೆ.
ಹಾಸ್ಯ ಕಲಾವಿದ ಗಿಲ್ಲಿ, ಈ ಮಟ್ಟಕ್ಕೆ ಬರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದು ಗಿಲ್ಲಿ ತಂದೆಗೆ ಗೊತ್ತಿರೋ ವಿಷ್ಯ. ಆದ್ರೆ ಮಗನಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಅದ್ರಲ್ಲೂ ಟ್ಯಾಟೂ ಹಾಕಿಸಿಕೊಳ್ಳುವಷ್ಟು ಮಗ ಬೆಳೆಯುತ್ತಾರೆ ಎನ್ನುವ ಕಲ್ಪನೆ ಅವರಿಗಿರಲಿಲ್ಲ. ಈಗ ಮಗನ ಯಶಸ್ಸು ನೋಡಿ ಭಾವುಕರಾಗಿದ್ದಾರೆ. ಗಿಲ್ಲಿ ತಂದೆ ಕಣ್ಣಲ್ಲಿ ಸಂತೋಷದ ಹನಿ ಕಾಣಿಸಿಕೊಂಡಿದೆ.
56
ಗಿಲ್ಲಿ ಟ್ಯಾಟೂ ಬಿಡಿಸೋದು ಕಷ್ಟ
ಗಿಲ್ಲಿ ಕೂದಲಿನ ಬಗ್ಗೆ ಅನೇಕರಿಗೆ ದೂರಿದೆ. ಗಿಲ್ಲಿ ಕೂದಲು ಬಾಚಲ್ಲ ಅಂತ ಸ್ಪರ್ಧಿಗಳು ಸಹ ಆರೋಪ ಮಾಡಿದ್ದಾರೆ. ಇದೇ ಕಾರಣಕ್ಕೆ ಕಾವ್ಯಾ, ಗಿಲ್ಲಿಗೆ ಬಾಚಣಿಕೆ ಕೂಡ ನೀಡಿದ್ದಾರೆ, ಕಾವ್ಯಾ ಹಾಗೂ ರಕ್ಷಿತಾ ಈ ವಿಷ್ಯಕ್ಕೆ ಚರ್ಚೆ ಕೂಡ ನಡೆಸಿದ್ದಾರೆ. ಈ ಮಧ್ಯೆ ಪ್ರಸಿದ್ಧ ಟ್ಯಾಟೂ ಆರ್ಟಿಸ್ಟ್ , ಟ್ಯಾಟೂ ಗೋಸ್ಟ್ ಕಲರ್ಸ್ ಕನ್ನಡಕ್ಕೆ ಮನವಿ ಮಾಡಿದ್ದಾರೆ. ದಯವಿಟ್ಟು ಗಿಲ್ಲಿಗೆ ಕೂದಲು ಬಾಚಿಕೊಳ್ಳೋಕೆ ಹೇಳಿ. ಅವರ ಕೂದಲು ಕೆದರಿದ್ರೆ ಅದನ್ನು ಟ್ಯಾಟೂದಲ್ಲಿ ಮೂಡಿಸೋದು ಕಷ್ಟ ಎಂದಿದ್ದಾರೆ.
66
ಫಿನಾಲೆಗೆ ಹೋಗ್ತಾರಾ ಗಿಲ್ಲಿ?
ಬಿಗ್ ಬಾಸ್ ನಲ್ಲಿ 15 ವಾರಗಳಲ್ಲಿ ಯಶಸ್ವಿಯಾಗಿ ಮುಗಿಸಿ 16ನೇ ವಾರಕ್ಕೆ ಕಾಲಿಟ್ಟಿರುವ ಗಿಲ್ಲಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. 15ನೇ ವಾರದಲ್ಲಿ ಗಿಲ್ಲಿ ಸ್ವಲ್ಪ ಡಲ್ ಆಗಿದ್ರು. ಫಿನಾಲೆ ಸಿಕ್ಸ್ ಕಂಟೆಸ್ಟೆಂಟ್ ಆಗ್ಲಿಲ್ಲ ಎನ್ನುವ ನೋವಿತ್ತು. ಆದ್ರೆ ಗಿಲ್ಲಿಯನ್ನು ಫ್ಯಾನ್ಸ್ ಬಿಟ್ಟುಕೊಟ್ಟಿಲ್ಲ. ಈಗ ಗಿಲ್ಲಿ 16ನೇ ವಾರಕ್ಕೆ ಅಂದ್ರೆ ಫಿನಾಲೆ ವೀಕ್ ತಲುಪಿದ್ದಾರೆ. ಬಿಗ್ ಬಾಸ್, ಗಿಲ್ಲಿ ಲಕ್ ಬದಲಿಸಿದೆ. ಮನೆಯೊಳಗೆ ಎಲ್ಲರ ಕಾಲೆಳೆಯುತ್ತ, ತಮಾಷೆ ಮಾಡ್ಕೊಂಡಿರುವ ಗಿಲ್ಲಿಗೆ ಹೊರಗೆ ಇಷ್ಟೊಂದು ಫ್ಯಾನ್ಸ್ ಹುಟ್ಕೊಂಡಿದ್ದಾರೆ ಎನ್ನುವ ಕಲ್ಪನೆ ಕೂಡ ಇಲ್ಲ. ಬಿಗ್ ಬಾಸ್ ಕೊನೆ ವಾರದಲ್ಲಿ ಒಂದು ಟ್ವಿಸ್ಟ್ ಇಟ್ಟಿದೆ. ವೀಕ್ ಮಿಡಲ್ ನಲ್ಲಿ ಒಂದು ಎಲಿಮಿನೇಷನ್ ನಡೆಯಲಿದೆ. ಯಾರು ಹೋಗ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಆದ್ರೆ ಗಿಲ್ಲಿ ಫಿನಾಲೆಯಲ್ಲಿರ್ತಾರೆ ಎನ್ನುವ ನಂಬಿಕೆ ಅವರ ಫ್ಯಾನ್ಸ್ ಗೆ ದಟ್ಟವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.