Bigg Boss: ಶನಿವಾರ ಕಮ್ಮಿ ಬಟ್ಟೆ ಹಾಕೋದಾ? ಮೋಕ್ಷಿತಾ ಪೈಯನ್ನು ತಬ್ಬಿಬ್ಬು ಮಾಡಿದ Rakshita Shetty

Published : Nov 30, 2025, 12:21 PM IST

ಬಿಗ್‌ಬಾಸ್ ಮನೆಯಲ್ಲಿ ಜನಪ್ರಿಯ ಸ್ಪರ್ಧಿ ರಕ್ಷಿತಾ ಶೆಟ್ಟಿ ತಮ್ಮ ಅರೆಬರೆ ಕನ್ನಡದಿಂದಲೇ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ, ಸಹ ಸ್ಪರ್ಧಿ ಮೋಕ್ಷಿತಾ ಪೈ ಅವರೊಂದಿಗೆ ವಾರಾಂತ್ಯದ ಉಡುಗೆಯ ಬಗ್ಗೆ ಮಾತನಾಡುತ್ತಾ, 'ಕಡಿಮೆ ಡ್ರೆಸ್' ಎಂದು ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

PREV
17
ರಕ್ಷಿತಾ ಶೆಟ್ಟಿಯ ಹವಾ

ಬಿಗ್​ಬಾಸ್​ (Bigg Boss) ಮನೆಯಲ್ಲಿ ಸದ್ಯ ರಕ್ಷಿತಾ ಶೆಟ್ಟಿಯ ಹವಾ ಜೋರಾಗಿಯೇ ನಡೆಯುತ್ತಿದ್ದು, ಇವರು ಫೈನಲಿಸ್ಟ್​ ಎಂದು ಇದಾಗಲೇ ವೀಕ್ಷಕರು ಘೋಷಿಸಿಯಾಗಿದೆ. ಗಿಲ್ಲಿ ನಟ ವಿನ್ನರ್​ ಹಾಗೂ ರಕ್ಷಿತಾ ಶೆಟ್ಟಿ ಮೊದಲ ರನ್ನರ್​ ಅಪ್​ ಎಂದು ಜಾಲತಾಣದಲ್ಲಿ ಇದಾಗಲೇ ಇವರ ಹೆಸರು ಸದ್ದು ಮಾಡುತ್ತಿದೆ.

27
ಅರೆಬರೆ ಕನ್ನಡ ಫೇಮಸ್​

ಅಷ್ಟಕ್ಕೂ ರಕ್ಷಿತಾ ಶೆಟ್ಟಿ (Bigg Boss Rakshita Shetty) ಹೆಚ್ಚು ಸದ್ದು ಮಾಡಲು ಕಾರಣ ಅವರ ಅರೆಬರೆ ಕನ್ನಡ. ಮುಂಬೈನಲ್ಲಿ ಹುಟ್ಟಿದರೂ, ಮಾತೃಭಾಷೆ ತುಳು ಆದರೂ ಕನ್ನಡ ಕಲಿತು ಎಲ್ಲ ಭಾಷೆ ಮಿಕ್ಸ್ ಮಾಡಿ ಸೋಷಿಯಲ್​​ ಮೀಡಿಯಾದಲ್ಲಿ ವಿಡಿಯೋ ಅಪ್​ಲೋಡ್​ ಮಾಡುತ್ತಲೇ ಫೇಮಸ್​ ಆಗಿ, ಅದರಿಂದಲೇ ಅವರು ಬಿಗ್​ಬಾಸ್​ಗೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

37
ಕನ್ನಡದ ಬಗ್ಗೆ ಅಸಮಾಧಾನ

ಇವರ ಕನ್ನಡದ ಬಗ್ಗೆ ಬಿಗ್​ಬಾಸ್​ ಸ್ಪರ್ಧಿಗಳಲ್ಲಿ ಅಸಮಾಧಾನ ಇದ್ದೇ ಇದೆ. ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಾಳೆ, ಕನ್ನಡ ಚೆನ್ನಾಗಿ ಗೊತ್ತಿದೆ, ಜನರ ಅಟೆನ್ಷನ್​ ಗಳಿಸಲು ಅರೆಬರೆ ಕನ್ನಡ ಮಾತನಾಡುತ್ತಾಳೆ, ಜಗಳ ಆಡುವಾಗ ಸರಿಯಾಗಿ ಕನ್ನಡ ಹೇಳುತ್ತಾಳೆ.... ಹೀಗೆ ದೊಡ್ಡ ದೊಡ್ಡ ಆರೋಪಗಳನ್ನು ಬಿಗ್ಬಾಸ್​ ಹಾಲಿ ಸ್ಪರ್ಧಿಗಳು ಹೇಳುತ್ತಲೇ ಬಂದಿದ್ದಾರೆ.

47
ಮೋಕ್ಷಿತಾ ಜೊತೆ ಸೀರೆ ಚರ್ಚೆ

ಅದೇನೇ ಇದ್ದರೂ ರಕ್ಷಿತಾ ಶೆಟ್ಟಿ ಅವರ ಈ ಕನ್ನಡ ಕೇಳುವುದಕ್ಕಾಗಿಯೇ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ ಎನ್ನೋದು ಸುಳ್ಳಲ್ಲ. ಅದೇ ವೇಳೆ ಇದೀಗ ಬಿಗ್​ಬಾಸ್​​ನ ಕಳೆದ ಸೀಸನ್​ ಕೆಲವು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಅವರಲ್ಲಿ ಒಬ್ಬರು ಮೋಕ್ಷಿತಾ ಪೈ. (Bigg Boss Mokshita Pai).

57
ಮೋಕ್ಷಿತಾ-ರಕ್ಷಿತಾ ಮಾತುಕತೆ

ಇದೀಗ ಮೋಕ್ಷಿತಾ ಮತ್ತು ರಕ್ಷಿತಾ ನಡುವಿನ ಮಾತಿನ ತುಣುಕೊಂಡು ವೈರಲ್​ ಆಗಿದೆ. ಇದನ್ನು ಪಬ್ಲಿಕ್​ ಇಂಪ್ಯಾಕ್ಟ್​ ಎನ್ನುವ ಪೇಜ್​ ಶೇರ್​ ಮಾಡಿಕೊಂಡಿದೆ. ಇದರಲ್ಲಿ ಇಬ್ಬರೂ ಬಟ್ಟೆಯ ಬಗ್ಗೆ ಮಾತನಾಡುವುದನ್ನು ಕೇಳಬಹುದು.

67
ಶನಿವಾರ-ಭಾನುವಾರ

ರಕ್ಷಿತಾ, ಮೋಕ್ಷಿತಾ ಬಳಿ ಶನಿವಾರ ಮತ್ತು ಭಾನುವಾರದ ಬಟ್ಟೆಗಳ ಬಗ್ಗೆ ಕೇಳಿದ್ದಾರೆ. ಅದಕ್ಕೆ ಮೋಕ್ಷಿತಾ ಶನಿವಾರ ಲಂಗ ಹಾಕ್ತೇನೆ, ಭಾನುವಾರ ಸೀರೆ ಹಾಕುತ್ತೇನೆ ಎಂದಿದ್ದಾರೆ. ಅದಕ್ಕೆ ಮೋಕ್ಷಿತಾ ಬೇಡ, ಭಾನುವಾರ ತುಂಬಾ ಟಾಸ್ಕ್​ ಎಲ್ಲಾ ಇರುತ್ತದೆ. ಅದಕ್ಕಾಗಿಯೇ ಶನಿವಾರ ಸೀರೆ ಹಾಕಿ, ಭಾನುವಾರ ಚೆಂದ ಫುಲ್ ಡ್ರೆಸ್​ ಹಾಕಿದ್ರೆ ಟಾಸ್ಕ್​ ಮಾಡಲು ಈಸಿಯಾಗುತ್ತೆ ಎಂದಿದ್ದಾರೆ. ನಾನೂ ಹಾಗೇ ಮಾಡುವುದು ಎಂದಿದ್ದಾರೆ.

77
ಕಡಿಮೆ ಡ್ರೆಸ್​ ಹಾಕ್ತೀರಾ?

ಆಗ ರಕ್ಷಿತಾ ಶೆಟ್ಟಿ, ಒಹೊ ನೀವೂ ಹಾಗೇ ಮಾಡೋದಾ? ಶನಿವಾರ ಸೀರೆ ಹಾಕಿ, ಭಾನುವಾರ ಕಡಿಮೆ ಡ್ರೆಸ್​ ಹಾಕ್ತೀರಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಕನ್ನಡ ಸರಿಯಾಗಿ ಬರದ ಕಾರಣ, ಉದ್ದದ ಡ್ರೆಸ್​ ಎನ್ನಲು ಹೋಗಿ ಕಡಿಮೆ ಡ್ರೆಸ್​ ಹಾಕ್ತೀರಾ ಎಂದು ಕೇಳಿರುವುದೇ ಈಗ ತಮಾಷೆಯಾಗಿ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಲಾಗುತ್ತಿದೆ. ಅದಕ್ಕೆ ಕೂಡಲೇ ಮೋಕ್ಷಿತಾ ಪೈ, ಕಡಿಮೆ ಡ್ರೆಸ್​ ಅಲ್ಲ, ಫುಲ್​ ಡ್ರೆಸ್​ ಹಾಕ್ತೇನೆ ಎಂದಿದ್ದಾರೆ.

Read more Photos on
click me!

Recommended Stories